ಮುದಗಲ್: ಐತಿಹಾಸಿಕ ಮುದಗಲ್ ಪಟ್ಟಣದಲ್ಲಿ ಜರುಗಿದ ವಿಶ್ವ ಸುಲಭ ಲಭ್ಯತೆ ಅರಿವು ದಿನಾಚಾರಣೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ರಾಯಚೂರ ಅಂಗವಿಕಲ ಇಲಾಖೆ, ದಿ ಅಸೋಸಿಯೇಷನ್ -ಆಫ್ ಪೀಪಲ್ ಎತ ಡಿಸೆಬಿಲಿಟಿ(ಎಪಿಡಿ) ಕಾರ್ಯನೀತಿ ದಕಾಲತಿ ವಿಭಾಗ, ಲಿಂಗಸುಗೂರು ಚೇತನ ಅಂಗವಿಕಲರ ಅಭಿವೃದ್ಧಿ ಸಂಸ್ಥೆ, ಸಬಿಲಿಟಿ ಬಾಸ್ಟ್ ಪೋರ್ಸ ಕರ್ನಾಟಕ ವತಿಯಿಂದ ಪಟ್ಟಣದ ಎಪಿಎಂಸಿ ಕಾರ್ಮಿಕ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಂಗವಿಕಲ ಆರ್‌ಪಿಡಿ ಟಾಸ್ಕ್ ಫೋರ್ಸ್ ಸಮಿತಿ ರಾಜ್ಯ ಕಾರ್ಯದರ್ಶಿ ಸುರೇಶ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗೋಕುಲ ಸಾಬ್, ನೊಡೆಲ್ ಅಧಿಕಾರಿ ರಾಜೇಶ್ವರಿ, ಉಪ ತಹಸೀಲ್ದಾರ್ ತುಳಜಾರಾಮ ಸಿಂಗ, ಪುರಸಭೆ ಸಂಘಟನೆ ಅಧಿಕಾರಿ ಚಿನ್ನಮ್ಮ ದಳವಾಯಿಮಠ, ನಾಗರಾಜ್, ಚೇತನ್ ಸಂಸ್ಥೆ ಅಧ್ಯಕ್ಷ ಹುಸೇನ್ ಭಾಷಾ, ಆಸ್ಕಿಹಾಳ ನಾಗರಾಜ ಸೇರಿ ಇತರರಿದ್ದರು.