ನಾಡಿನ ನೆಲ, ಜಲ, ಭಾಷೆ ಉಳಿವಿಗೆ ಬದ್ಧರಾಗಿ

KannadaprabhaNewsNetwork |  
Published : Nov 02, 2025, 03:45 AM IST
ಕುರುಗೋಡು ೦೧ ಪಟ್ಟಣದ ಶ್ರೀದೊಡ್ಡಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಿರಿಗನ್ನಡ ಯುವಕ ಸಂಘದ ನೇತ್ರುತ್ವದಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲಿ ಶ್ರೀಭುವನೇಶ್ವರಿದೇವಿಯ ಭಾವಚಿತ್ರಕ್ಕೆ ಹೂಮಾಲೆ ಹಾಕುವುದರ ಮೂಲಕ ಮಾತನಾಡಿದರು ತಹಶೀಲ್ದಾರ್ ನರಸಪ್ಪ ತಹಶೀಲ್ದಾರ್ | Kannada Prabha

ಸಾರಾಂಶ

ಕನ್ನಡ ನಾಡಿನ ನೆಲ, ಜಲ, ಭಾಷೆ ಉಳಿವಿಗೆ ಎಲ್ಲ ಕನ್ನಡಿಗರೂ ಬದ್ಧರಾಗಬೇಕು.

ಕುರುಗೋಡು: ಕನ್ನಡ ನಾಡಿನ ನೆಲ, ಜಲ, ಭಾಷೆ ಉಳಿವಿಗೆ ಎಲ್ಲ ಕನ್ನಡಿಗರೂ ಬದ್ಧರಾಗಬೇಕು. ಆಗ ಮಾತ್ರ ಕನ್ನಡ ಜೀವಂತವಾಗಿರುವಲು ಸಾಧ್ಯ ಎಂದು ತಹಶೀಲ್ದಾರ್ ನರಸಪ್ಪ ತಹಶೀಲ್ದಾರ್ ಹೇಳಿದರು.

ಅವರು ಶನಿವಾರ ಪಟ್ಟಣದ ದೊಡ್ಡಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಿರಿಗನ್ನಡ ಯುವಕ ಸಂಘದ ನೇತೃತ್ವದಲ್ಲಿ ೭೦ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಏರ್ಪಡಿಸಲಾಗಿದ್ದ ಕನ್ನಡ ತಾಯಿ ಭುವನೇಶ್ವರಿದೇವಿಯ ಭಾವಚಿತ್ರಕ್ಕೆ ಹೂಮಾಲೆ ಹಾಕುವುದರ ಮೂಲಕ ಶ್ರದ್ಧಾ-ಭಕ್ತಿಯಿಂದ ಪೂಜಿಸಿದರು. ನಂತರ ವಹಿಸಿ ಮಾತನಾಡಿದ ಅವರು, ಕನ್ನಡ ಭಾಷೆಯನ್ನು ಹೆಚ್ಚು ಮಾತನಾಡುವ ಮೂಲಕ ಕನ್ನಡತನವನ್ನು ಉಳಿಸುವ ಗುಣ ಎಲ್ಲರಲ್ಲೂ ಬರಬೇಕೆಂದು ತಿಳಿಸಿದರು.

೭೦ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಹಿರಿಯ ಮುಖಂಡ ಉಮಾಪತಿ ಗೌಡ ಮಾತನಾಡಿ, ಕನ್ನಡದ ಸಾಹಿತ್ಯದ ಮೂಲಕ ಕನ್ನಡವನ್ನು ಬೆಳೆಸಲು ಕುವೆಂಪು, ಕಾರಂತರು ಸೇರಿದಂತೆ ಅನೇಕ ಕವಿಗಳು ಹಾಗೂ ಮೇರುನಟ ಡಾ.ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್‌ ಸೇರಿದಂತೆ ಸಾಕಷ್ಟು ನಾಯಕ ನಟರು ಕನ್ನಡಕ್ಕಾಗಿ ಕೈ ಎತ್ತಿದ್ದರು. ಆದರೆ ಇತ್ತೀಚೆಗೆ ಅದು ಕ್ಷೀಣವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕನ್ನಡ ಸಿನಿಮಾ ರಂಗದಲ್ಲಿ ಅರ್ಧ ಭಾಗ ಪರಭಾಷೆಯವರೇ ತುಂಬಿಕೊಂಡಿದ್ದಾರೆ. ಇದು ಅಳಿಸಬೇಕಾದರೆ ಕನ್ನಡ ಚಿತ್ರಗಳನ್ನು, ಸಾಹಿತ್ಯ, ಸಂಸ್ಕತಿ, ಹಾಗು ಕನ್ನಡ ಪರಂಪರೆಯನ್ನು ಬೆಳೆಸಲು ಎಲ್ಲರೂ ಮುಂದಾಗಬೇಕೆಂದು ನುಡಿದರು.

ಸಿರಿಗನ್ನಡ ಯುವಕ ಸಂಘದ ಅಧ್ಯಕ್ಷ ಬಿ ವಿರಭದ್ರಗೌಡ, ಶಿರಸ್ತೇದಾರ್ ರಾಜಶೇಖರ್ ಮತ್ತು ವಿಜಯಕುಮಾರ್, ಕಂದಾಯ ನಿರೀಕ್ಷಕ ಭದ್ರಯ್ಯ ಮತ್ತು ಸುರೇರ್ಶ, ಪುರಸಭೆ ಮುಖ್ಯಾಧಿಕಾರಿ ಹರ್ಷವರ್ಧನ ರೆಡ್ಡಿ, ತಾಪಂ ಇಒ ನಿರ್ಮಲಾ, ಸುಪ್ರೀತ್ ವಿರುಪಾಕ್ಷಿ, ಕೆ.ವಿರುಪಾಕ್ಷಗೌಡ, ಕೆ.ಎಸ್. ಹಸನ್ ಬಾಷಾ, ಕೆ.ಲೋಕೇಶ್, ಎಸ್.ನಾಗರಾಜ್ ಹೂಗಾರ್, ಎನ್. ಷಣ್ಮುಖ, ಜೆ.ರಮೇಶ, ನರಸಪ್ಪ ಯಾದವ್, ಜೆ.ರಮೇಶ್, ಟಿ.ಚೇತನಕುಮಾರ್, ಎಸ್.ಕೆ. ನಾಗರಾಜ, ವಿ.ವೀರೇಶ್, ಬುಟ್ಟಾ ಮಲ್ಲಿಕಾರ್ಜುನ, ನಿವೃತ ಶಿಕ್ಷಕರದ ಕೆ.ಗಾಲ್ಲಿಂಗಪ್ಪ, ಕೆ.ಮಲ್ಲಿಕಾರ್ಜುನ್, ಸಿಬ್ಬಂದಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಇದ್ದರು.

ಇಲ್ಲಿನ ತಾಲೂಕು ಕಚೇರಿಯಲ್ಲಿ ಕನ್ನಡತಾಯಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆ ಮಾಡಲಾಯಿತು.

ಶಾಸಕ ಜೆ.ಎನ್. ಗಣೇಶ್ ಚಾಲನೆ ನೀಡಿದರು. ತಹಶೀಲ್ದಾರ್ ಕಚೇರಿ ಆವರಣದಿಂದ ಆರಂಭಗೊಂಡ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಡೊಳ್ಳು, ಮೇಳ, ಮಂಗಳವಾದ್ಯ ವಿದ್ಯಾರ್ಥಿಗಳು ಛದ್ಮವೇಷ ಧರಿಸಿ ಭಾಗವಹಿಸಿದ್ದು ಮೆರವಣಿಗೆಯ ಮೆರುಗು ಹೆಚ್ಚಿಸಿತು.

ಪಟ್ಟಣದ ಎಲ್ಲ ಸರ್ಕಾರಿ ಕಚೇರಿ, ದೇವಸ್ಥಾನ ಮತ್ತು ಅಂಗಡಿ ಮುಂಗಟ್ಟುಗಳಿಗೆ ದೀಪಾಲಂಕಾರ ಮಾಡಲಾಗಿತ್ತು.

ಕುರುಗೋಡು ಪಟ್ಟಣದಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ