ಶಿರಸಿ: ಸರ್ಕಾರದ ಆದೇಶ, ಕಾನೂನಿನ ನೀತಿ ಮತ್ತು ಸರ್ಕಾರದ ನಿರ್ದೇಶನಕ್ಕೆ ವ್ಯತಿರಿಕ್ತವಾಗಿ ಕಾರ್ಯ ನಿರ್ವಹಿಸುತ್ತಿರುವ ಅರಣ್ಯ ಇಲಾಖೆಯ ಕಾರ್ಯಕ್ಕೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಕಾರ್ಯಾಲಯದಲ್ಲಿ ಶನಿವಾರ ಶಿರಸಿ ಕಂದಾಯ ಉಪ ವಿಭಾಗ ತಾಲೂಕುಗಳಾದ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ಗ್ರೀನ್ ಕಾರ್ಡ್ ಪ್ರಮುಖರ ಸಭೆಯಲ್ಲಿ ಇತ್ತೀಚಿನ ಅರಣ್ಯ ಇಲಾಖೆಯ ಅರಣ್ಯವಾಸಿಗಳ ಒಕ್ಕಲೆಬ್ಬಿಸುವ ವಿಚಾರಣಾ ಪ್ರಕ್ರಿಯೆ ಕುರಿತು ಜರುಗಿದ ವಿಶೇಷ ಸಭೆಯನ್ನುದ್ದೇಶಿಸಿ ಮಾತನಾಡಿದರು.ಅರಣ್ಯ ಹಕ್ಕು ಕಾಯಿದೆಯಲ್ಲಿ ಅರಣ್ಯವಾಸಿಗಳ ಅರ್ಜಿ ಪರಿಶೀಲನಾ ಪ್ರಕ್ರಿಯೆ ಪೂರ್ಣವಾಗುವ ವರೆಗೆ ಒಕ್ಕಲೆಬ್ಬಿಸುವ ಪ್ರಕ್ರಿಯೆ ಜರುಗಿಸಬಾರದು. 3 ಎಕರೆ ಕಡಿಮೆ ಇರುವ ಒತ್ತುವರಿದಾರ ವಿರುದ್ಧ ಮುಂದಿನ ಸೂಚನೆ ವರೆಗೆ ಯಾವುದೇ ಕ್ರಮ ಜರುಗಿಸಬಾರದು. 1978ರ ನಂತರ 3 ಎಕರೆ ವರೆಗೆ ಒತ್ತುದಾರರಿಗೆ ಪುನರ್ ವಸತಿ ಮತ್ತು ಪುನರ್ ವ್ಯವಸ್ಥೆ ಪ್ಯಾಕೇಜ್ ಕಲ್ಪಿಸುವ ಸರ್ಕಾರದ ಪರಿಶೀಲನೆ ಪ್ರಾರಂಭಿಸುವ ಪೂರ್ವದಲ್ಲಿ ಒಕ್ಕಲೆಬ್ಬಿಸುವ ಪ್ರಾಧಿಕಾರದಿಂದ ವಿಚಾರಣೆ ಪ್ರಾರಂಭಿಸಿರುವದಕ್ಕೆ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು.
ಅರಣ್ಯವಾಸಿ ಅನೂಸೂಚಿತ ಬುಡಕಟ್ಟಿನ ವ್ಯಕ್ತಿಯು ಅಥವಾ ಇತರೆ ಪಾರಂಪರಿಕ ಅರಣ್ಯವಾಸಿಗಳು ಅರ್ಜಿ ಹಾಕಿದ್ದಲ್ಲಿ ಪರಿಶೀಲನಾ ಪ್ರಕ್ರಿಯೆ ಪೂರ್ಣವಾಗುವ ವರೆಗೆ ಅವನ ಅಧಿಭೋಗದಲ್ಲಿರುವ ಅರಣ್ಯ ಜಮೀನಿನಿಂದ ಅವನನ್ನು ಒಕ್ಕಲೆಬ್ಬಿಸಬಾರದು ಎಂದು ಸಭೆಯಲ್ಲಿ ಚರ್ಚಿಸಿ ತೀಮಾನಿಸಲಾಯಿತು.ಚರ್ಚೆಯಲ್ಲಿ ಜಿಲ್ಲಾ ಸಂಚಾಲಕ ಇಬ್ರಾಹೀಂ ಗೌಡಳ್ಳಿ, ನೆಹರು ನಾಯ್ಕ ಬಿಳೂರು, ಶಿವಾನಂದ ಜೋಗಿ, ಚಂದ್ರು ಪೂಜಾರಿ ಮಂಚೀಕೇರಿ, ಹರಿಹರ ನಾಯ್ಕ ಓಂಕಾರ, ಸೀತಾರಾಮ ಗೌಡ ಹುಕ್ಕಳ್ಳಿ, ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ಗಣಪತಿ ನಾಯ್ಕ ಬೆಡಸಗಾಂವ್, ಎಂ.ಆರ್. ನಾಯ್ಕ ಕಂಡ್ರಾಜಿ, ಸ್ವಾತಿ ಜೈನ್, ದಿವಾಕರ ಮರಾಠಿ ಆನಗೋಡ, ಸುಬಾಷ್ ಸಿದ್ದಿ, ಜಗದೀಶ್ ನಾಯ್ಕ ಶಿರಳಗಿ, ಮಹೇಶ್ ಹೆಗ್ಗರಣೆ, ಬಿ.ಡಿ. ನಾಯ್ಕ, ಜಯಂತ ಆನಗೋಡ, ದಿನೇಶ್ ಹಾರ್ಸಿಕಟ್ಟಾ, ನಾಗರಾಜ ದೇವಸ್ಥಳಿ, ಸುಧಾಕರ ಮಡಿವಾಳ ಇಟಗಿ ಮತ್ತಿತರರು ಉಪಸ್ಥಿತರಿದ್ದರು. ಹೋರಾಟ
ಕಾನೂನಿಗೆ ವ್ಯತಿರಿಕ್ತವಾಗಿ ಕಾರ್ಯ ನಿರ್ವಹಿಸುವ ಅರಣ್ಯ ಇಲಾಖೆಯ ವಿರುದ್ಧ ಕಾನೂನಾತ್ಮಕ ಹೋರಾಟದ ಮೂಲಕ ಸರ್ಕಾರದ ಗಮನಸೆಳೆಯಲಾಗುವುದು ಹೋರಾಟ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.