ನೀರಾವರಿ ಯೋಜನೆಗಳ ತ್ವರಿತ ಅನುಷ್ಟಾನಕ್ಕೆ ಬದ್ಧ: ಶಾಸಕ ಎಚ್.ಡಿ.ತಮ್ಮಯ್ಯ

KannadaprabhaNewsNetwork |  
Published : Nov 09, 2026, 01:15 AM IST
 | Kannada Prabha

ಸಾರಾಂಶ

ಚಿಕ್ಕಮಗಳೂರುಈ ಭಾಗದ ಜೀವನಾಡಿಯಾದ ದೇವನೂರು–ಚಿಕ್ಕದೇವನೂರು ದೊಡ್ಡಕೆರೆ ಕೋಡಿ ಬಿದ್ದಿರುವುದು ಸಂತಸ ತಂದಿದೆ. ಬರಗಾಲದ ನಡುವೆಯೂ ಕೆರೆಗಳು ತುಂಬುತ್ತಿರುವುದು ರೈತರ ನಿರಂತರ ಹೋರಾಟ ಹಾಗೂ ಸರ್ಕಾರದ ಇಚ್ಛಾಶಕ್ತಿ ಫಲವಾಗಿದೆ. ಈ ಭಾಗದ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮುಂದುವರಿಸಲಾಗುವುದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಭರವಸೆ ನೀಡಿದರು.

ದೇವನೂರು ದೊಡ್ಡಕೆರೆ ಕೋಡಿ ತುಂಬಿದ ಹಿನ್ನೆಲೆಯಲ್ಲಿ ಗಂಗಾಪೂಜಾ ಕಾರ್ಯ ಕ್ರಮಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಈ ಭಾಗದ ಜೀವನಾಡಿಯಾದ ದೇವನೂರು–ಚಿಕ್ಕದೇವನೂರು ದೊಡ್ಡಕೆರೆ ಕೋಡಿ ಬಿದ್ದಿರುವುದು ಸಂತಸ ತಂದಿದೆ. ಬರಗಾಲದ ನಡುವೆಯೂ ಕೆರೆಗಳು ತುಂಬುತ್ತಿರುವುದು ರೈತರ ನಿರಂತರ ಹೋರಾಟ ಹಾಗೂ ಸರ್ಕಾರದ ಇಚ್ಛಾಶಕ್ತಿ ಫಲವಾಗಿದೆ. ಈ ಭಾಗದ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮುಂದುವರಿಸಲಾಗುವುದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಭರವಸೆ ನೀಡಿದರು.ತಾಲೂಕಿನ ದೇವನೂರು ದೊಡ್ಡಕೆರೆ ಕೋಡಿ ತುಂಬಿದ ಹಿನ್ನೆಲೆಯಲ್ಲಿ ಭಾನುವಾರ ಆಯೋಜಿಸಿದ್ದ ಗಂಗಾಪೂಜಾ ಕಾರ್ಯ ಕ್ರಮದಲ್ಲಿ ಮಾತನಾಡಿದ ಎತ್ತಿನಹೊಳೆ ಯೋಜನೆ ಆರಂಭಿಸಿದಾಗ ಅನೇಕರು ಲೇವಡಿ ಮಾಡಿದ್ದರು. ಆದರೆ ದೃಢ ಸಂಕಲ್ಪ ದಿಂದ ಇಂದು ನೀರು ಹರಿಯುತ್ತಿದೆ. ಆರಂಭದಲ್ಲೇ ಈ ಭಾಗಕ್ಕೆ ನೀರಿನ ಹಂಚಿಕೆ ಮಾಡಿಸಿದ್ದರೆ ಶಾಶ್ವತ ಪರಿಹಾರ ದೊರೆಯುತ್ತಿತ್ತು. ಈ ನಿಟ್ಟಿನಲ್ಲಿ ರೈತ ಹೋರಾಟಗಾರರ ನಿಯೋಗವನ್ನು ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರ ಬಳಿ ಕರೆದೊಯ್ದು ನೀರಿನ ಹಂಚಿಕೆಗೆ ಪ್ರಯತ್ನಿಸಲಾಗುವುದು ಎಂದರು.ಭದ್ರಾ ಉಪಕಣಿವೆ ಹಾಗೂ ರಣಘಟ್ಟ ಯೋಜನೆಗಳ ಅನುಷ್ಠಾನದಲ್ಲಿ ರೈತ ಹೋರಾಟಗಾರರು, ಸಿರಿಗೆರೆ ಮತ್ತು ಪುಷ್ಪಗಿರಿ ಜಗದ್ಗುರುಗಳ ಕೊಡುಗೆ ಮಹತ್ವದ್ದಾಗಿದೆ. ಕಡೂರು ಶಾಸಕ ಕೆ.ಎಸ್.ಆನಂದ್ ಅವರ ಸಹಕಾರದೊಂದಿಗೆ ಮೊದಲ ಎರಡು ಹಂತಗಳನ್ನು ನಬಾರ್ಡ್‌ಗೆ ಸೇರ್ಪಡೆಗೊಳಿಸಲಾಗಿದ್ದು, ಮೂರನೇ ಹಂತದ ಕಾಮಗಾರಿಗೂ ಚಾಲನೆ ದೊರೆತಿದೆ. ನಾಗ ರಾಳು ಬಳಿ ಪೈಪ್‌ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ತಂಗಲಿಯಲ್ಲಿ ಬೃಹತ್ ಟ್ಯಾಂಕ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರ ವೇರಿದ್ದು, ಶೀಘ್ರದಲ್ಲೇ ಬೆಳವಾಡಿ ಬಸವನಕೋಡಿ ಬಳಿಯೂ ಟ್ಯಾಂಕ್ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.ರಣಘಟ್ಟ ಯೋಜನೆ ಪೂರ್ಣಗೊಂಡರೆ ಹಳೇಬೀಡು ಮತ್ತು ಬೆಳವಾಡಿ ಕೆರೆಗಳ ಮೂಲಕ ದೇವನೂರು ಕೆರೆಗೆ ನಿರಂತರ ನೀರು ಹರಿಯಲಿದೆ. ಈ ಸಂಬಂಧ ಕಾವೇರಿ ನೀರಾವರಿ ನಿಗಮ ಹಾಗೂ ವಿಶ್ವೇಶ್ವರಯ್ಯ ಜಲ ನಿಗಮದ ಸಭೆಗಳಲ್ಲಿ ಒತ್ತಡ ತರಲಾಗಿದೆ. ಅಲ್ಲದೆ, ₹9.80 ಕೋಟಿ ವೆಚ್ಚದಲ್ಲಿ ಕಟ್ಟೆಹೊಳೆಯಿಂದ ಕರಗಡದವರೆಗಿನ ಕಾಲುವೆ ಕಾಂಕ್ರೀಟೀಕರಣ ಕಾಮ ಗಾರಿ ಶೀಘ್ರ ಆರಂಭವಾಗಲಿದೆ. ಇದರಿಂದ ದೇವಿಕೆರೆಗೆ ನೀರು ಸರಾಗವಾಗಿ ಹರಿಯಲಿದೆ ಎಂದರು.ರಾಜ್ಯದ ಪ್ರಮುಖ ಜಲಾಶಯಗಳಲ್ಲೇ ನೀರಿನ ಕೊರತೆಯಿದ್ದರೂ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಿದೆ. ಬರ ಪರಿಹಾರದ ಮೊತ್ತವನ್ನು ₹2,000ರಿಂದ ₹5,000ಕ್ಕೆ ಹೆಚ್ಚಿಸಿ ರೈತರ ಖಾತೆಗಳಿಗೆ ನೇರವಾಗಿ ಜಮೆ ಮಾಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜತೆಗೆ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ. ಧಾರ್ಮಿಕ ಹಾಗೂ ಸಮುದಾಯ ಭವನಗಳ ಅಭಿವೃದ್ಧಿಗೆ ₹14 ಕೋಟಿ ಅನುದಾನ ನೀಡಲಾಗಿದೆ. ಅಲ್ಪಸಂಖ್ಯಾತರ ಪ್ರಾರ್ಥನಾ ಮಂದಿರಗಳ ಅಭಿವೃದ್ಧಿಗೂ ಅನುದಾನ ಒದಗಿಸುವ ಮೂಲಕ ಸರ್ಕಾರ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಎ.ಎನ್.ಮಹೇಶ್, ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಕಾಂಗ್ರೆಸ್ ಮುಖಂಡ ರವೀಶ್ ಬಸಪ್ಪ, ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಡಿಮನೆ ಸತೀಶ್, ಸಿಪಿಐ ಮುಖಂಡ ಎಚ್.ಎಂ.ರೇಣುಕಾರಾಧ್ಯ, ರೈತ ಮುಖಂಡ ಗುಶಾಂತಪ್ಪ, ನಯಾಜ್ ಅಹಮದ್, ಕಡೂರು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರುದ್ರಮೂರ್ತಿ, ನಿಡಘಟ್ಟ ಕುಮಾರ್, ಮಾಜಿ ಗ್ರಾಪಂ ಅಧ್ಯಕ್ಷರಾದ ಕಿರಣ್, ಅಶೋಕ್, ಕೊಪ್ಪಲು ನಟರಾಜ್ ಸೇರಿದಂತೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟನ್ ಕಬ್ಬಿಗೆ ₹1,000 ಹೆಚ್ಚುವರಿ ದರ ನಿಗದಿಗೆ ಪಟ್ಟು
ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ತಕ್ಷಣ ಆರಂಭಿಸಿ