ಕನ್ನಡಪ್ರಭ ವಾರ್ತೆ ಮಂಡ್ಯ
ಎಲ್ಲಾ ಕೋಮು ಘರ್ಷಣೆಗಳು ಗಣೇಶ ವಿಸರ್ಜನೆ ಮೆರವಣಿಗೆ ಸಮಯದಲ್ಲೇ ನಡೆದಿರುವುದು ಮತ್ತೊಂದು ವಿಶೇಷವಾಗಿದೆ. ಅದರಲ್ಲೂ ಜಿಲ್ಲೆಯ ನಾಗಮಂಗಲ ಮತ್ತು ಮದ್ದೂರಿಗೆ ಸೀಮಿತವಾಗಿ ಕೋಮು ಘರ್ಷಣೆಗಳು ಸಂಭವಿಸಿರುವುದು ಬಿಟ್ಟರೆ ಉಳಿದ ತಾಲೂಕುಗಳಲ್ಲೆಲ್ಲೂ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ.
ಕೋಮು ಘರ್ಷಣೆ ಸಂಬಂಧ ೨೦೨೪ ಮತ್ತು ೨೦೨೫ರಲ್ಲಿ ಮಂಡ್ಯ ಜಿಲ್ಲೆಯಲ್ಲಿ ಒಟ್ಟು ೩೪ ಪ್ರಕರಣಗಳು ದಾಖಲಾಗಿವೆ. ೨೦೨೪ರಲ್ಲಿ ನಾಗಮಂಗಲ ಪಟ್ಟಣದಲ್ಲಿ ನಡೆದ ಗಣೇಶ ವಿಸರ್ಜನೆ ವೇಳೆ ಸಂಭವಿಸಿದ ಕೋಮು ಘರ್ಷಣೆಯಲ್ಲಿ ೨೪ ಪ್ರಕರಣ ಹಾಗೂ ೨೦೨೫ರಲ್ಲಿ ಮದ್ದೂರು ಪಟ್ಟಣದಲ್ಲಿ ನಡೆದ ಗಣೇಶ ವಿಸರ್ಜನೆ ಮೆರವಣಿಗೆ ಸಮಯದಲ್ಲಿ ಕೋಮು ಘರ್ಷಣೆಗಳು ಸಂಭವಿಸಿದ್ದವು. ಈ ಕಾರಣದಿಂದ ೨೦೨೫ರ ನವೆಂಬರ್ ೨೬ರಂದು ಜಿಲ್ಲೆಯಲ್ಲಿ ಕೋಮು ಹಿಂಸೆ ನಿಗ್ರಹ ವಿಶೇಷ ಕಾರ್ಯಪಡೆ ರಚಿಸಲಾಗಿದೆ.ಪ್ರತಿ ವರ್ಷ ಶ್ರೀರಂಗಪಟ್ಟಣದಲ್ಲಿ ಹನುಮಜಯಂತಿ ಅಂಗವಾಗಿ ಹನುಮ ಸಂಕೀರ್ತನಾ ಯಾತ್ರೆ ನಡೆದರೂ ಇದುವರೆಗೂ ಒಂದೇ ಒಂದು ಕೋಮು ಘರ್ಷಣೆ ಪ್ರಕರಣ ದಾಖಲಾಗಿಲ್ಲ. ಜಿಲ್ಲೆಯಲ್ಲಿ ದಾಖಲಾಗಿರುವ ಕೋಮು ಘರ್ಷಣೆಗಳೆಲ್ಲವೂ ಗಣೇಶ ವಿಸರ್ಜನೆ ಮೆರವಣಿಗೆ ವೇಳೆಯೇ ನಡೆದಿವೆ. ಹಾಗಾಗಿ ಜಿಲ್ಲೆಯೊಳಗೆ ಕೋಮು ಸಂಘರ್ಷ ಹುಟ್ಟುಹಾಕಲು ಗಣೇಶ ಹಬ್ಬ ಟಾರ್ಗೆಟ್ ಆಗಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ನಾಗಮಂಗಲದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಸಂಭವಿಸಿದ್ದ ಕೋಮು ಘರ್ಷಣೆಯನ್ನು ಸೂಕ್ಷ್ಮ ಮತ್ತು ಗಂಭೀರವಾಗಿ ಪರಿಗಣಿಸದಿದ್ದರಿಂದ ೨೦೨೫ರ ಸೆ.೮ರಂದು ಮದ್ದೂರಿನಲ್ಲಿ ನಡೆದ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕೋಮು ಘರ್ಷಣೆ ಮತ್ತೆ ಮರುಕಳಿಸಿತು. ಸೂಕ್ತ ಪೊಲೀಸ್ ಭದ್ರತೆ ನಿಯೋಜಿಸದಿದ್ದದ್ದು ಘರ್ಷಣೆಗೆ ಕಾರಣವಾಯಿತು. ಮದ್ದೂರಿನಲ್ಲಿ ನಡೆದ ಕೋಮು ಘರ್ಷಣೆಗೆ ಸಂಬಂಧಿಸಿದಂತೆ ೧೦ ಪ್ರಕರಣಗಳಲ್ಲಿ ೮೮ ಆರೋಪಿಗಳ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಎಂ.ಪರಮೇಶ್ವರ್ ವಿಧಾನಪರಿಷತ್ ಶಾಸಕ ಮಧು ಮಾದೇಗೌಡರ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಬಾಕ್ಸ್....
ಘಟಕದಾಖಲಾದ ಕೋಮು ಘರ್ಷಣೆ ಪ್ರಕರಣಗಳ ವಿವರ
ಮಂಗಳೂರು ನಗರ02100
ಮಂಡ್ಯ024100
ಧಾರವಾಡ0200
ಬಾಗಲಕೋಟೆ7024ಹಾವೇರಿ10020
ದಾವಣಗೆರೆ0630ದಕ್ಷಿಣ ಕನ್ನಡ0030
ಕಲಬುರಗಿ ಜಿಲ್ಲೆ2000ಒಟ್ಟು1938314