ಸಿಲಿಂಡರ್‌ ಕೊರತೆ ನಿರ್ವಹಣೆ: ಗ್ರಾಹಕರು ನಿರಾಳ

KannadaprabhaNewsNetwork |  
Published : Mar 27, 2026, 01:30 AM IST
ಸಸ | Kannada Prabha

ಸಾರಾಂಶ

ಕಡೂರುಯುದ್ದ ಮುಂದುವರಿಯುತ್ತಿರುವ ಬೆನ್ನಲ್ಲೇ ಅಡುಗೆ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ತಾಲೂಕಿನ ಕಡೂರು- ಬೀರೂರು ಪಟ್ಟಣ ಮತ್ತು ಗ್ರಾಮೀಣ ಭಾಗಗಳಲ್ಲಿ ಸ್ವಲ್ಪ ಮಟ್ಟಿಗೆ ನಿವಾರಣೆ ಆಗಿದೆ.

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಆಗಿಲ್ಲ । ನಿಟ್ಟುಸಿರು ಬಿಟ್ಟ ಗ್ರಾಹಕರು

ಕನ್ನಡಪ್ರಭ ವಾರ್ತೆ, ಕಡೂರು

ಯುದ್ದ ಮುಂದುವರಿಯುತ್ತಿರುವ ಬೆನ್ನಲ್ಲೇ ಅಡುಗೆ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ತಾಲೂಕಿನ ಕಡೂರು- ಬೀರೂರು ಪಟ್ಟಣ ಮತ್ತು ಗ್ರಾಮೀಣ ಭಾಗಗಳಲ್ಲಿ ಸ್ವಲ್ಪ ಮಟ್ಟಿಗೆ ನಿವಾರಣೆ ಆಗಿದೆ.

ಇರಾನ್ -ಅಮೇರಿಕಾ ಯುದ್ಧ ಆರಂಭದ ಸುಮಾರು 20 ದಿನಗಳ ನಂತರ ಜಲಸಂಧಿ ಮೂಲಕ ಎಲ್.ಪಿ.ಜಿ. ಮತ್ತು ಪೆಟ್ರೋಲ್‌ ಉತ್ಪನ್ನಗಳು ಬಾರದೆ ಆತಂಕ ಸೃಷ್ಟಿಯಾಗಿತ್ತು.ಇದರ ಬೆನ್ನಲ್ಲೆ ಮನೆ ಬಳಕೆ ಸಿಲಿಂಡರ್‌ಗೆ ₹60 ರು. ಹೆಚ್ಚಳವಾಯಿತು. ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆಯಲ್ಲಿ ಸಾಕಷ್ಟು ವ್ಯತ್ಯಯ ಉಂಟಾಗಿತ್ತು. ಒಟ್ಟಾರೆ ಗ್ರಾಹಕರು ಸುಡು ಬಿಸಿಲು ಎನ್ನದೆ ಸರತಿಯಲ್ಲಿ ನಿಂತು ಗೃಹಬಳಕೆ ಸಿಲಿಂಡರ್‌ಗೆ ಜನ ನೋಂದಣಿ ಮಾಡಿಸಿದ್ದರು. ಹೋಂ ಡೆಲಿವರಿ ಕೂಡ ಕೆಲ ದಿನ ನಿಂತಿದ್ದರಿಂದ ಗ್ರಾಹಕರು ಕಂಗಾಲಾಗಿದ್ದರು.

ಕಡೂರು- ಬೀರೂರು, ಸಖರಾಯಪಟ್ಣಣ, ಚೌಳಹಿರಿಯೂರು ಸೇರಿದಂತೆ ತಾಲೂಕಿನ 4 ಕಡೆ ಅನಿಲ ವಿತರಕರಿಗೆ ಸಾವಿರಾರು ಗ್ರಾಹಕರಿದ್ದಾರೆ. ಸರತಿ ಸಾಲಲ್ಲಿ ನಿಂತು ರಿಜಿಸ್ಟರ್ ಮಾಡಿಸಿದರೂ ಸುಮಾರು 10 ದಿನಗಳ ಬಳಿಕ ಸಿಲಿಂಡರ್ ಪಡೆಯಬೇಕಿತ್ತು. ಆದರೆ ಸ್ವಲ್ಪ ಮಟ್ಟಿಗೆ ಸಮಸ್ಯೆ ನಿವಾರಣೆ ಕಡಿಮೆಯಾದಂತಿದೆ.

ಕಡೂರಿನ ಅನಿಲ ವಿತರಕರ ಏಜೆನ್ಸಿಯಲ್ಲಿ ಸುಮಾರು 30 ಸಾವಿರ ಗ್ರಾಹಕರಿದ್ದು, ಅದರಲ್ಲಿ ಹಿಂದೆ ಪ್ರತಿದಿನ 800- 1000 ಸಿಲಿಂಡರ್ ಪೂರೈಕೆಯಾಗುತ್ತಿತ್ತು. ಈಗ ದಿನಕ್ಕೆ ಬರುತ್ತಿರುವ 600 ಸಿಲಿಂಡರ್ ಗಳನ್ನು ಮೊದಲು ರಿಜಿಸ್ಟರ್ ಮಾಡಿದವರಿಗೆ ಆದ್ಯತೆ ನೀಡಿ ವಿತರಿಸಲಾಗುತ್ತಿದ್ದು 8 ದಿನಕ್ಕೆ ಮನೆಗಳಿಗೆ ಅಡುಗೆ ಅನಿಲ ಸಿಗುವಂತಾಗಿದೆ.

ತಾಲೂಕಿನಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್ ಕೊರೆ ಸದ್ಯಕ್ಕೆ ಕಂಡು ಬಂದಿಲ್ಲ ಎನ್ನುವುದು ಸಮಾಧಾನದ ಸಂಗತಿ. ಕಡೂರು- ಬೀರೂರು ಪಟ್ಟಣ ಸೇರಿ ಗ್ರಾಮೀಣ ಪ್ರದೇಶದ ಬಂಕುಗಳಲ್ಲೂ ಪೆಟ್ರೋಲ್ ಅಭಾ‍ವ ತಲೆದೋರಿಲ್ಲ. ಬೆಲೆಯೂ ಹೆಚ್ಚಳ ವಾಗಿಲ್ಲದಿರುವುದು ಗಮನಿಸಬೇಕಾದ ಸಂಗತಿ.

ಹೇಳಿಕೆ--

ನಮ್ಮಲ್ಲಿರುವ 30 ಸಾವಿರ ಅಡುಗೆ ಅನಿಲ ಗ್ರಾಹಕರಿಗೆ ಸಿಲಿಂಡರ್ ಕೊರತೆ ಆದಾಗ ಮೊದಲು ಬಂದವರಿಗೆ ಆದ್ಯತೆ ನೀಡಲಾಗಿತ್ತು. ಈಗ ಪ್ರತಿದಿನ ಬರುವ 600 ಸಿಲಿಂಡರ್ ಗಳನ್ನು ವಿತರಿಸಲಾಗುತ್ತಿದೆ. ಬುಕ್ ಮಾಡಿದ 8 ದಿನಕ್ಕೆ ಸಿಲಿಂಡರ್ ನೀಡುತ್ತಿದ್ದು, ವಾಣಿಜ್ಯ ಬಳಕೆ ಸಿಲಿಂಡರ್ ಕೂಡ ನೀಡಲಾಗುತ್ತಿದೆ.

- ಕಲ್ಯಾಣ್ ತೇಜಸ್, ಅನಿಲ ವಿತರಕ,

ಶ್ರೀ ವಿಷ್ಟುಪ್ರಸಾದ್ ಗ್ಯಾಸ್ ಏಜೆನ್ಸಿ, ಕಡೂರು.

-ಹೇಳಿಕೆ--2.

ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮಲ್ಲಿ ಪೆಟ್ರೋಲ್ ಕೊರತೆಯಿಲ್ಲ. ನಮಗೆ ಪ್ರತಿದಿನ ಹಾಸನದಿಂದ ಪೆಟ್ರೋಲ್ ಲೋಡು ಬರುತ್ತಿದೆ. ದರವೂ ಹೆಚ್ಚಳವಾಗಿಲ್ಲ. ಪೆಟ್ರೋಲ್ 1 ಲೀಗೆ ₹103 ರು, ಡಿಸೇಲ್ ಬೆಲೆ 1ಲೀ ಗೆ ಇದೆ. ಯಾವುದೇ ರೀತಿ ತೊಂದರೆ ಆಗದಂತೆ ಸಿಗುತ್ತಿದೆ.

ಸಾಣೇಹಳ್ಳಿ ಆರಾಧ್ಯ, ಶ್ರೀವೀರಭದ್ರೇಶ್ವರ ಪೆಟ್ರೋಲ್ ಬಂಕ್, ಕಡೂರು.

26ಕೆಕೆಡಿಯು1. ಅನಿಲ ನೊಂದಣಿಗೆಗೆ ನಿಂತಿರುವ ಗ್ರಾಕರು.

26ಕೆಕೆಡಿಯು1ಎ. ರಶ್ ಇಲ್ಲದ ಕಡೂರಿನ ಶ್ರೀ ವೀರಭದ್ರೇಶ್ವರ ಪೆಟ್ರೋಲ್ ಬಂಕ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳಮೀಸಲಾತಿಯಿಂದ ಬಲಗೈ ಸಮುದಾಯಕ್ಕೆ ಅನ್ಯಾಯ: ಕಿಡಿ
ಕೋಮು ಘರ್ಷಣೆ: 2 ವರ್ಷದಲ್ಲಿ ರಾಜ್ಯಕ್ಕೆ ಮಂಡ್ಯ ಫಸ್ಟ್..!