ಸಮುದಾಯ ಭವನ ಲೋಕಾರ್ಪಣೆ ಅ.18ಕ್ಕೆ

KannadaprabhaNewsNetwork |  
Published : Sep 20, 2024, 01:40 AM IST
ಮಧುಗಿರಿಯ ರಾಘವೇಂದ್ರ ಬಡಾವಣೆಯ ಶ್ರೀಶೃಂಗೇರಿ ಶಂಕರ ಮಠದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಶಂಕರ ಸಮುದಾಯ ಭವನವನ್ನು ಅ.18 ರಂದು ಸೃಂಗೇರಿ ಶಾರದ ಪೀಠದ ಜಗದ್ಗುರು ಶ್ರೀವಿದುಶೇಖರ ಭಾರತಿ ಸ್ವಾಮಿಜಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಮಧುಗಿರಿ ಶಂಕರ ಸೇವಾ ಸಮಿತಿ ಅಧ್ಯಕ್ಷ ಬಿ.ಆರ್‌. ಸತ್ಯನಾರಾಯಣ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.  | Kannada Prabha

ಸಾರಾಂಶ

ಮಧುಗಿರಿ: ಪಟ್ಟಣದ ರಾಘವೇಂದ್ರ ಬಡಾವಣೆಯ ಶ್ರೀಶೃಂಗೇರಿ ಶಂಕರ ಮಠದ ಆವರಣದಲ್ಲಿ ಶ್ರೀಶಂಕರ ಸೇವಾ ಸಮಿತಿಯಿಂದ ನಿರ್ಮಾಣವಾಗಿರುವ ನೂತನ ಶ್ರೀ ಶಂಕರ ಸಮುದಾಯ ಭವನದ ಉದ್ಘಾಟನಾ ಸಮಾರಂಭವನ್ನು ಅ.18 ರಂದು ಶುಕ್ರವಾರ ನಡೆಯಲಿದೆ ಎಂದು ಶ್ರೀಶಂಕರ ಸೇವಾ ಸಮಿತಿ ಅಧ್ಯಕ್ಷ ಬಿ.ಆರ್‌.ಸತ್ಯನಾರಾಯಣ್‌ ತಿಳಿಸಿದರು.

ಮಧುಗಿರಿ: ಪಟ್ಟಣದ ರಾಘವೇಂದ್ರ ಬಡಾವಣೆಯ ಶ್ರೀಶೃಂಗೇರಿ ಶಂಕರ ಮಠದ ಆವರಣದಲ್ಲಿ ಶ್ರೀಶಂಕರ ಸೇವಾ ಸಮಿತಿಯಿಂದ ನಿರ್ಮಾಣವಾಗಿರುವ ನೂತನ ಶ್ರೀ ಶಂಕರ ಸಮುದಾಯ ಭವನದ ಉದ್ಘಾಟನಾ ಸಮಾರಂಭವನ್ನು ಅ.18 ರಂದು ಶುಕ್ರವಾರ ನಡೆಯಲಿದೆ ಎಂದು ಶ್ರೀಶಂಕರ ಸೇವಾ ಸಮಿತಿ ಅಧ್ಯಕ್ಷ ಬಿ.ಆರ್‌.ಸತ್ಯನಾರಾಯಣ್‌ ತಿಳಿಸಿದರು.

ಮಠದ ಆವರಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶೃಂಗೇರಿ ಶಾರದ ಪೀಠದ ಜಗದ್ಗುರು ಶ್ರೀ ಶ್ರೀ ವಿದುಶೇಖರ ಭಾರತಿ ಸ್ವಾಮಿಜಿ ಸಮುದಾಯ ಭವನ ಲೋಕಾರ್ಪಣೆ ಮಾಡುವರು. ಅ.17ರಂದು ಸಂಜೆ ಗುರು ಪ್ರಾರ್ಥನೆ, ಗಣಪತಿ ಪೂಜೆ ಪುಣ್ಯಾಹವಾಚನ, ಕಳಸ ಸ್ಥಾಪನೆ , ವಾಸ್ತು ರಾಕ್ಷೋಜ್ಞ ಹೋಮ, ನಂತರ ತೀರ್ಥ ಪ್ರಸಾದ ವಿನಿಯೋಗವಿದೆ. 18 ರಂದು ಬೆಳಿಗ್ಗೆ ಗುರು ಪ್ರಾರ್ಥನೆ ,ಅಭಿಷೇಕ,ಗಣಪತಿ ಪೂಜೆ, ಸಹಸ್ರ ಮೋದಕ ಗಣಪತಿ ಹೋಮ ನಂತರ ತೀರ್ಥ ಪ್ರಸಾದ ವಿನಿಯೋಗವಿದೆ. ಸಂಜೆ 6ಕ್ಕೆ ವಿದುಶೇಖರ ಭಾರತಿ ಸ್ವಾಮಿಜಿ ಅವರು ಪಟ್ಟಣಕ್ಕೆ ಆಗಮಿಸಲಿದ್ದು ವೇದಘೋಷ ,ಭಕ್ತಾಧಿಗಳ ಭಜನೆ,ಮಂಗಳವಾದ್ಯ ಸಹಿತ ಪೂರ್ಣಕುಂಭಗಳೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಲಾಗುವುದು ಎಂದರು.

ಸಮುದಾಯ ಭವನ ಉದ್ಘಾಟನೆ ನಂತರ ಧೂಳಿ ಪಾದಪೂಜೆ, ಅನುಗ್ರಹ ಭಾಷಣ ರಾತ್ರಿ 8.30ಕ್ಕೆ ಶ್ರೀಶಾರದಾ ಚಂದ್ರಮೌಳೇಶ್ವರ ಸ್ವಾಮಿ ಪೂಜಾ ಕಾರ್ಯಕ್ರಮವಿರುತ್ತದೆ. ನಂತರ ಭಕ್ತಾಧಿಗಳಿಗೆ ಫಲಮಂತ್ರಾಕ್ಷತೆ ಪ್ರಸಾದ ವಿನಿಯೋಗವಿರುತ್ತದೆ. ಜಗದ್ಗುರುಗಳಿಗೆ ಕಾಣಿಕೆ ಸಮರ್ಪಣೆ ,ಭಿಕ್ಷೆ ವಂದನಾದಿ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಗೋಷ್ಠಿಯಲ್ಲಿ ಸಮಿತಿ ಗೌರವಾಧ್ಯಕ್ಷ ಎಸ್‌.ವಿ.ಸೂರ್ಯನಾರಾಯಣ್‌ರಾವ್‌, ಖಜಾಂಚಿ ಆಡಿಟರ್ ಲಕ್ಷ್ಮೀಪ್ರಸಾದ್‌, ನಿರ್ದೇಶಕರುಗಳಾದ ಕೆ.ನಾರಾಯಣ್‌,ಬಡಕನಹಳ್ಳಿ ರಾಘವೇಂದ್ರ, ಎಂ.ಎಸ್‌.ಸಂತೋಷ್‌, ಶ್ರೀನಿವಾಸಶಾಸ್ತ್ರಿ, ಜಿ.ಎನ್‌.ರಾಘವೇಂದ್ರ,ವಿ.ಭೀಮೇಶ್‌,ಎಂ.ಎಸ್‌.ಬದ್ರಿನಾಥ್‌,ಕೆ.ಎಸ್‌.ರಾಮಚಂದ್ರರಾವ್‌,ಬಾಲಕೃಷ್ಣ,ವಿನಯ್‌ ಶರ್ಮ,ಅಶ್ವತ್ಥ್‌ ಶರ್ಮ,ಎಂ.ಎನ್‌.ನಾಗಭೂಷಣ್‌ ಹಾಗೂ ಅರ್ಚಕ ಶ್ರೀನಿವಾಸ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ