ಮೀಸಲಾತಿಯಿಂದ ಸಮುದಾಯದ ಅಭಿವೃದ್ಧಿ: ಕೆ.ಪಿ ನಂಜುಂಡಿ

KannadaprabhaNewsNetwork |  
Published : Oct 03, 2023, 06:06 PM ISTUpdated : Oct 03, 2023, 06:07 PM IST
ಗುಬ್ಬಿ ಪಟ್ಟಣದ ಎಸ್ ಸಿ ಎಸ್ ಕಲ್ಯಾಣ ಮಂಟಪದಲ್ಲಿ ವಿಶ್ವಕರ್ಮ ಜಯಂತಿ ಮಹೋತ್ಸವ ಉದ್ಘಾಟನೆಯನ್ನು ಎಂ ಎಲ್ ಸಿ ಕೆ ಪಿ ನಂಜುಂಡಿ ನೆರವೇರಿಸಲಾಯಿತು. | Kannada Prabha

ಸಾರಾಂಶ

ಮೀಸಲಾತಿಯಿಂದ ಸಮುದಾಯದ ಅಭಿವೃದ್ಧಿ: ಕೆ.ಪಿ ನಂಜುಂಡಿವಿಶ್ವಕರ್ಮ ಜಯಂತಿ ಮಹೋತ್ಸವ ಉದ್ಘಾಟಿಸಿ ವಿಧಾನಪರಿಷತ್‌ ಸದಸ್ಯ ಅಭಿಮತ

ವಿಶ್ವಕರ್ಮ ಜಯಂತಿ ಮಹೋತ್ಸವ ಉದ್ಘಾಟಿಸಿ ವಿಧಾನಪರಿಷತ್‌ ಸದಸ್ಯ ಅಭಿಮತ ಕನ್ನಡಪ್ರಭ ವಾರ್ತೆ ಗುಬ್ಬಿ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಸರ್ಕಾರಕ್ಕೆ ಆದಾಯ ತರುವಂತ ದೇವಾಲಯಗಳಿಗೆ ವಿಶ್ವಕರ್ಮ ಜನಾಂಗದವರನ್ನು ದೇವಾಲಯದ ಕಮಿಟಿಗೆ ಒಬ್ಬರನ್ನು ಸದಸ್ಯರನ್ನಾಗಿ ಮಾಡಿಕೊಳ್ಳಿ ಎಂದು ಸರ್ಕಾರವನ್ನು ಒತ್ತಾಯಿಸಿದರು, ಈವರೆಗೆ ಯಾರನ್ನು ಮಾಡಿಕೊಳ್ಳಲಿಲ್ಲ ಎಂದು ಎಂಎಲ್ಸಿ ಕೆ.ಪಿ ನಂಜುಂಡಿ ವಿಷಾದ ವ್ಯಕ್ತಪಡಿಸಿದರು. ಎಸ್ಸಿಎಸ್ ಕಲ್ಯಾಣ ಮಂಟಪದಲ್ಲಿ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಒಂದು ಸಮಾಜದಲ್ಲಿ ಹುಟ್ಟಿದ ಮೇಲೆ ಆ ಸಮಾಜಕ್ಕೆ ಏನಾದರೂ ಶಾಶ್ವತವಾಗಿ ಕೊಡುಗೆ ನೀಡುವುದು ಅದರ ಇತಿಹಾಸವಾಗಿರಬೇಕು. ಸಮುದಾಯವು ಬಹಳ ಪುರಾತನ ಕಾಲದಿಂದ ದೇವರ ವಿಗ್ರಹ ಮಾಡುವ ಮೂಲಕ ವಿಶ್ವ ಶ್ರೇಷ್ಠರಾಗಿದ್ದೇವೆ. ಆದರೆ, ಆರ್ಥಿಕ, ರಾಜಕೀಯ, ನಾವು ಬಹಳಷ್ಟು ಹಿಂದೆ ಬಿದ್ದಿದ್ದು, ಸರಕಾರದಿಂದ ಹೆಚ್ಚಿನ ಮೀಸಲಾತಿ ಪಡೆದಾಗ ಮಾತ್ರ ನಾವು ಅಭಿವೃದ್ಧಿಯಾಗಲು ಸಾಧ್ಯ. ಈಗಾಗಲೇ ಸಮುದಾಯದ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಲು ಕಲುತಳಿ ಶಾಸ್ತ್ರ ನಡೆಯುತ್ತಿದ್ದು, ಇದರ ಮೂಲಕ ಮೀಸಲಾತಿಯನ್ನು ಪಡೆಯಬೇಕಾಗಿದೆ. ಹಿಂದುಳಿದ ವರ್ಗದ ಎಸ್ಸಿ-ಎಸ್ಟಿ ಗೆ ಸೇರಿಸುವುದರಿಂದ ಆಚಾರ ವಿಚಾರಕ್ಕೆ ಯಾವುದೇ ಧಕ್ಕೆ ಬರುವುದಿಲ್ಲ. ಮೀಸಲಾತಿ ಅಡಿಯಲ್ಲಿ ಹೋದಾಗ ಸರಕಾರದಿಂದ ಹೆಚ್ಚಿನ ಅವಕಾಶ ಪಡೆಯಬಹುದಾಗಿದೆ ಎಂದರು. ಶಾಸಕ ಎಸ್ಆರ್ ಶ್ರೀನಿವಾಸ್ ಮಾತನಾಡಿ, ಪ್ರತಿಯೊಂದು ಸಮುದಾಯವು ಸಹ ಸಂಘಟನೆ. ಹೋರಾಟ ಮಾಡುವುದರಿಂದ ಮಾತ್ರ ಎಲ್ಲಾ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ. ಮಕ್ಕಳಿಗೆ ಹೆಚ್ಚಿನ ಶಿಕ್ಷಣ ನೀಡಿ ಆರ್ಥಿಕವಾಗಿ ಅಭಿವೃದ್ಧಿಯಾಗಲು, ಬಲಿಷ್ಠರಾಗಲು ಮುಂದಾಗಿ, ಈಗ ತಾವೆಲ್ಲರೂ ವಸತಿ ನಿಲಯ ಮಾಡುವುದಕ್ಕೆ ಮುಂದಾಗಿರುವುದು ಹೆಚ್ಚಿನ ಸಂತೋಷವನ್ನು ತಂದಿದೆ. ಅನುದಾನದಲ್ಲಿ ₹20ಲಕ್ಷ ಹಾಗೂ ಮುಖ್ಯಮಂತ್ರಿ ಅವರ ಅನುದಾನದಲ್ಲಿ ಹೆಚ್ಚಿನ ಅನುಕೂಲ ಮಾಡಿಕೊಡುತ್ತೇನೆ ಎಂದು ತಿಳಿಸಿದರು. ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುನ್ನ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯದ ಆವರಣದಿಂದ ಕಲ್ಯಾಣ ಮಂಟಪದವರೆಗೆ ಸಾಂಸ್ಕೃತಿಕ ಕಲಾತಂಡದೊಂದಿಗೆ ಕಾಳಿಕಾಂಬ ದೇವಿ ಹಾಗೂ ವಿಶ್ವಕರ್ಮ ರ ಭಾವಚಿತ್ರದೊಂದಿಗೆ ಮೆರವಣಿಗೆ ಮಾಡಲಾಯಿತು. ತಾಲೂಕು ವಿಶ್ವಕರ್ಮ ಸಮುದಾಯದ ಅಧ್ಯಕ್ಷ ಬಿ. ಎನ್ ಕಮಲನಾಭಾಚಾರ್, ಉಪಾಧ್ಯಕ್ಷ ಎಸ್ ರಾಜಶೇಖರ ಆಚಾರ್, ಜಿ.ಪಂ. ಮಾಜಿ ಸದಸ್ಯ ಜಗನ್ನಾಥ್, ಜಿಲ್ಲಾ ಅಧ್ಯಕ್ಷ ಹೆಬ್ಬೂರು ನಾಗರಾಜ ಆಚಾರ್, ಮುಖಂಡರಾದ ಜಿ ಸಿ ಬಸವರಾಜು, ಅಶೋಕ್, ಗಂಗಾಧರ್ ಶಶಿಧರ ಆಚಾರ್ ನಾಗರಾಜು ಆಚಾರ್, ಸುಧೀರ್, ನಾಗೇಶ್ ಚಾರ್, ಹರಿ ಚಾರ್, ಪೂನಿತ್ ಚಾರ್, ಹೆಬ್ಬೂರು ನಾಗರಾಜಚಾರ್, ಕುಮಾರ್, ಅಶೋಕ್, ಜಿ ಎಚ್ ಜಗನ್ನಾಥ್, ಗಂಗಾರಾಜು, ಶಶಿಧರಚಾರ್, ಸುಧೀರ್, ಬಸವರಾಜು, ರಾಜಶೇಖರ್, ಕೃಷ್ಣಚಾರ್, ರಾಜಶೇಖರಚಾರ್, ವಿವೇಕಾನಂದಚಾರ್, ಯೋಗಮೂರ್ತಚಾರ್, ದಯಾನಂದ್, ನವೀನ್ ಕುಮಾರ್, ಕಾಂತರಾಜು, ನಾಗಶೇಖರಚಾರ್, ಜಗದೀಶ್, ನಾಗೇಶಚಾರ್, ಹರೀಶ್, ಹಾಗೂ ವಿಶ್ವಕರ್ಮ ಸಮಾಜದ ಮುಖಂಡರು ಸಂಘದ ನಿರ್ದೇಶಕರು ಉಪಸ್ಥಿತರಿದ್ದರು. --- 30 ಜಿ ಯು ಬಿ 1 ಗುಬ್ಬಿ ಎಸ್ಸಿಎಸ್ ಕಲ್ಯಾಣ ಮಂಟಪದಲ್ಲಿ ವಿಶ್ವಕರ್ಮ ಜಯಂತಿ ಮಹೋತ್ಸವ ಉದ್ಘಾಟನೆಯನ್ನು ಎಂಎಲ್ಸಿ ಕೆ ಪಿ ನಂಜುಂಡಿ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ