ನೆಲಮಂಗಲ ರೋಟರಿ ಸಂಸ್ಥೆಗೆ ಸಮುದಾಯ ಸೇವಾ ಪ್ರಶಸ್ತಿ

KannadaprabhaNewsNetwork |  
Published : Apr 01, 2026, 01:45 AM IST
ಪೊಟೊ-30ಕೆಎನ್‌ಎಲ್‌ಎಮ್‌1-ರೋಟರಿ ನೆಲಮಂಗಲದ  2025-26 ನೇ ಸಾಲಿನ ಸಮುದಾಯ ಸೇವೆಯನ್ನು ಗುರ್ತಿಸಿ ರೋಟರಿ ಸಂಸ್ಥೆ ನೆಲಮಂಗಲಕ್ಕೆ ಹಾಗೂ ಹೊಸದಾಗಿ ಸ್ಥಾಪನೆಯಾದ ಅರುಣೋದಯ ರೋಟರಿ ಸಂಸ್ಥೆ ಗಳಿಗೆ ಸಮುದಾಯ ಸೇವಾ ಪ್ರಶಂಶೆ ಅವಾರ್ಡ್  ರೋಟರಿ ಜಿಲ್ಲೆ 3192 ನಿಂದ ಪ್ಯಾಲೇಸ್ ಗ್ರೌಂಡ್ ನಲ್ಲಿ ಒಟ್ಟು 93 ರೋಟರಿ ಸಂಸ್ಥೆಗಳಿಂದ ನೆಡೆದ ಸಮುದಾಯ ಸೇವೆ ಐ. ಸಿ .ಜಿ.ಎಫ್ ಕಾರ್ಯಕ್ರಮದಲ್ಲಿ ಜಿಲ್ಲಾ ಪಾಲಕರಾದ ರೊ. ಎಲಿಜಬತ್ ಚೆರಿಯನ್ ಮತ್ತು ಸಮುದಾಯ ಸೇವಾ ನಿರ್ದೇಶಕರಾದ ದಿಲೀಪ್ ಆರ್. ಪಿಳ್ಯೆ ಹಾಗೂ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಮುಗಳಿ ರವರು ನೀಡಿದರು. | Kannada Prabha

ಸಾರಾಂಶ

ನೆಲಮಂಗಲ: 2025-26ನೇ ಸಾಲಿನ ಸಮುದಾಯ ಸೇವೆ ಗುರುತಿಸಿ ನೆಲಮಂಗಲ ರೋಟರಿ ಸಂಸ್ಥೆ ಹಾಗೂ ಅರುಣೋದಯ ರೋಟರಿ ಸಂಸ್ಥೆಗಳಿಗೆ ಸಮುದಾಯ ಸೇವಾ ಪ್ರಶಂಶನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು

ನೆಲಮಂಗಲ: 2025-26ನೇ ಸಾಲಿನ ಸಮುದಾಯ ಸೇವೆ ಗುರುತಿಸಿ ನೆಲಮಂಗಲ ರೋಟರಿ ಸಂಸ್ಥೆ ಹಾಗೂ ಅರುಣೋದಯ ರೋಟರಿ ಸಂಸ್ಥೆಗಳಿಗೆ ಸಮುದಾಯ ಸೇವಾ ಪ್ರಶಂಶನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ರೋಟರಿ ಜಿಲ್ಲೆ 3192ನಿಂದ 93 ರೋಟರಿ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಮುದಾಯ ಸೇವೆ ಐಸಿಜಿಎಫ್ ಕಾರ್ಯಕ್ರಮದಲ್ಲಿ ಜಿಲ್ಲಾ ಪಾಲಕರಾದ ರೊ. ಎಲಿಜಬತ್ ಚೆರಿಯನ್ ಮತ್ತು ಸಮುದಾಯ ಸೇವಾ ನಿರ್ದೇಶಕರಾದ ದಿಲೀಪ್ ಆರ್. ಪಿಳ್ಳೈ ಹಾಗೂ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಮುಗಳಿ ಅವರು ವಿತರಿಸಿದರು.

ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲೆ 3192ವಿನಲ್ಲಿ ಬರುವ ಒಟ್ಟು 93 ಕ್ಲಬ್‌ಗಳಿಂದ ಸುಮಾರು 1000ಕ್ಕೂ ಹೆಚ್ಚು ರೋಟರಿ ಸದಸ್ಯರು ಭಾಗವಹಿಸಿದ್ದರು. ಮಾಜಿ ಜಿಲ್ಲಾ ಪಾಲಕರು, ಜಿಲ್ಲಾ ಕಾರ್ಯದರ್ಶಿಗಳಾದ ಹೊನ್ನೇಗೌಡ, ಎಂ.ಎಸ್.ಉಮೇಶ್, ರೇಣುಕೇಶ್ವರ ಸ್ವಾಮಿ, ದೇವದಾಸನ್, ನವೀನ್ ಕಾರಿಯಪ್ಪ ಇತರರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ನೆಲಮಂಗಲ ರೋಟರಿ ಸಂಸ್ಥೆ ಅಧ್ಯಕ್ಷ ರೊ.ಜಿ.ಆರ್.ನಾಗರಾಜು, ಕಾರ್ಯದರ್ಶಿ ಆರ್.ರವಿಕುಮಾರ್, ಖಜಾಂಚಿ ಎಸ್.ಗಂಗರಾಜು, ಮಾಜಿ ಅಧ್ಯಕ್ಷರಾದ ಎಚ್.ಜಿ.ರಾಜು, ಎನ್.ಜಿ.ನಾಗರಾಜು, ಎಂ.ಟಿ.ನವೀನ್ ಕುಮಾರ್, ಕೆ.ಮಂಜುನಾಥ್, ಕೆ.ಎಸ್.ಲೋಕೇಶ್, ಎನ್.ಜಿ.ಚಂದ್ರ ಕುಮಾರ್, ಜಂಟಿ ಕಾರ್ಯದರ್ಶಿ ಸಿ.ಸೋಮಶೇಖರ್,

ನಿರ್ದೇಶಕರಾದ ಶಿವಶಂಕರ್, ಪ್ರಸಾದ್, ಬಸವರಾಜು, ಸುಶೀಲ್ ಆರ್.ನಾಗರಾಜು, ಶಿವರಾಮಯ್ಯ, ದೊಡ್ಡ ನರಸಿಂಹಯ್ಯ, ರುದ್ರೇಗೌಡ, ಎಂ.ಸಿ.ಮಂಜುನಾಥ್, ರವಿಕುಮಾರ್, ರಾಜಶೇಖರ್, ಹಾಗೂ ರೋಟರಿ ಅರುಣೋದಯ ಅಧ್ಯಕ್ಷರಾದ ರೊ.ಎಂ.ಗಂಗಣ್ಣ, ಕಾರ್ಯದರ್ಶಿ ಕೇಶವಮೂರ್ತಿ, ಸದಸ್ಯರಾದ ಚಂದ್ರಶೇಖರ್, ರವಿಕುಮಾರ್, ನಾಗೇಂದ್ರ, ಹಾಜರಾಗಿದ್ದರು.

ಪೊಟೊ-30ಕೆಎನ್‌ಎಲ್‌ಎಮ್‌1-

ರೋಟರಿ ನೆಲಮಂಗಲದ 2025-26ನೇ ಸಾಲಿನ ಸಮುದಾಯ ಸೇವೆಯನ್ನು ಗುರುತಿಸಿ ನೆಲಮಂಗಲ ರೋಟರಿ ಸಂಸ್ಥೆ ಹಾಗೂ ಅರುಣೋದಯ ರೋಟರಿ ಸಂಸ್ಥೆಗಳಿಗೆ ಸಮುದಾಯ ಸೇವಾ ಪ್ರಶಂಶನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಮೂಲ್‌ ಸೌಲಭ್ಯಗಳ ಪ್ರಯೋಜನ ಪಡೆಯಿರಿ
ಸ್ವಷ್ಟ ಗುರಿಯೊಂದಿಗೆ ಸಕರಾತ್ಮಕ ಚಿಂತನೆ ಮಾಡಿ