ಶಿಕ್ಷಣದಿಂದ ಮಾತ್ರ ಸಮುದಾಯ ಉನ್ನತಿ ಸಾಧ್ಯ: ಸರ್ದಾರ್‌ ಸೇವಾಲಾಲ್‌ ಸ್ವಾಮೀಜಿ

KannadaprabhaNewsNetwork | Published : Feb 25, 2025 12:47 AM

ಸಾರಾಂಶ

ಸಂತ ಸೇವಾಲಾಲ್ ಮಹಾರಾಜ್‌ ಅವರ ಆದರ್ಶ ಬದುಕು ಎಲ್ಲರಿಗೂ ಮಾದರಿಯಾಗಿದೆ. ಶಿಕ್ಷಣದಿಂದ ಮಾತ್ರ ಸಮುದಾಯವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬಹುದು ಎಂದು ಚಿತ್ರಮರ್ಗ ಬಂಜಾರ ಗುರುಪೀಠದ ಪೀಠಾಧ್ಯಕ್ಷ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ದಾವಣಗೆರೆಯಲ್ಲಿ ನುಡಿದಿದ್ದಾರೆ.

- ಕಬ್ಬಳದಲ್ಲಿ ಸಂತ ಸೇವಾಲಾಲ್ ಮಹಾರಾಜ್‌ ಜಯಂತಿ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಸಂತ ಸೇವಾಲಾಲ್ ಮಹಾರಾಜ್‌ ಅವರ ಆದರ್ಶ ಬದುಕು ಎಲ್ಲರಿಗೂ ಮಾದರಿಯಾಗಿದೆ. ಶಿಕ್ಷಣದಿಂದ ಮಾತ್ರ ಸಮುದಾಯವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬಹುದು ಎಂದು ಚಿತ್ರಮರ್ಗ ಬಂಜಾರ ಗುರುಪೀಠದ ಪೀಠಾಧ್ಯಕ್ಷ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ನುಡಿದರು.

ಚನ್ನಗಿರಿ ತಾಲೂಕಿನ ಕಬ್ಬಳ ಗ್ರಾಮದಲ್ಲಿ ಶ್ರೀ ಸೇವಾಲಾಲ್ ಯುವಕರ ಸಂಘದಿಂದ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ 286ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಗತ್ತು ಇಂದು ಬಂಜಾರ ಸಮಾಜವನ್ನು ಕಲೆ, ಸಂಸ್ಕೃತಿ, ಸಾಹಿತ್ಯದ ಹಿನ್ನೆಲೆಯಲ್ಲಿ ಗುರುತಿಸಲು ಸೇವಾಲಾಲ್ ಬದುಕಿದ ರೀತಿ ಕಾರಣ. ಶಾಂತಿ, ಅಂಹಿಸೆಯ ತತ್ವ ಸಾರಿದ ಸೇವಾಲಾಲ್ ಯಾರಿಗೂ ಕೇಡನ್ನು ಬಯಸಬೇಡಿ ಎಂದು ಸಾರಿದ್ದರು ಎಂದರು.

ಸರ್ಕಾರಿ ನೌಕರರ ಸಂಘ ಸಹ ಕಾರ್ಯದರ್ಶಿ ಎ.ಸುಧೀರ್ ಮಾತನಾಡಿ, ಭರತ ಖಂಡದ ಧಾರ್ಮಿಕ ರಾಯಭಾರಿ ಎಂದೇ ಹೆಸರಾದ ಸೇವಾಲಾಲ್ ಮಹಾರಾಜರು ಅನೇಕ ಪವಾಡಗಳ ಮೂಲಕ ಜನಮನ ಗೆದ್ದವರು. ಸತ್ಯ, ಅಹಿಂಸೆ, ಕಳವು ಬೇಡ, ವ್ಯಸನಕ್ಕೆ ದಾಸರಾಗಬೇಡಿ, ಕೆಟ್ಟದ್ದನ್ನು ಮಾಡಬೇಡಿ ಎಂಬ ಐದು ವ್ಯಾಖ್ಯೆಗಳು ಅವರ ಪ್ರಮುಖ ತತ್ವಗಳಾಗಿದ್ದವು ಎಂದರು.

ಸರಿಗಮಪ ಖ್ಯಾತಿಯ ರಮೇಶ್ ಲಮಾಣಿ ಹಾಡುಗಳ ಮೂಲಕ ರಂಜಿಸಿದರು. ಗ್ರಾಪಂ ಅಧ್ಯಕ್ಷೆ ವಿ.ಸುಷ್ಮಾ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಶ್ರೀಧರ್ ನಿಜಗುಳಿ, ರಮೇಶ್ ಹಳ್ಳಿಮಲ್ಲಾಪುರ, ಸಹಕಾರ ಸಂಘದ ಉಪಾಧ್ಯಕ್ಷ ರವಿಪ್ರಕಾಶ್, ಹಟ್ಟಿ ನಾಯಕರಾದ ಮಲ್ಲಕಾರ್ಜುನ್ ನಾಯ್ಡ್, ಕಾಮನಾಯ್ಕ (ಡಾವ್), ದಾಗಿಸ್ವಾಮಿ ನಾಯ್ಕ (ಕಾರ್ಭಾರಿ), ಗ್ರಾಪಂ ಮಾಜಿ ಅಧ್ಯಕ್ಷ ಪಂಢರೀನಾಥ, ಶ್ರೀ ಸೇವಾಲಾಲ್ ಯುವಕರ ಸಂಘದ ಗೌರವಾಧ್ಯಕ್ಷ ಕೆ.ಬಿ.ಹರೀಶ, ಅಧ್ಯಕ್ಷ ಸಂತೋಷ್ ನಾಯ್ಕ, ಪ್ರಧಾನ ಕಾರ್ಯದರ್ಶಿ ಎಂ.ಅಭಿಲಾಷ, ಉಪಾಧ್ಯಕ್ಷ ಲೋಹಿತ್ ಕುಮಾರ್, ಖಜಾಂಚಿ ರುದ್ರೇಶ್, ಕಾರ್ಯದರ್ಶಿ ಸತೀಶ್, ಸೇವಾಲಾಲ್ ಮಾಲಾಧಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

- - - (** ಈ ಫೋಟೋ-ಕ್ಯಾಪ್ಷನ್ ಪ್ಯಾನೆಲ್‌ಗೆ ಬಳಸಿ)

-23ಕೆಡಿವಿಜಿ41:

ಚನ್ನಗಿರಿ ತಾಲೂಕು ಕಬ್ಬಳ ಗ್ರಾಮದಲ್ಲಿ ಸಂತ ಸೇವಾಲಾಲ್ ಜಯಂತಿ ಆಚರಿಸಲಾಯಿತು. ಚಿತ್ರಮರ್ಗ ಬಂಜಾರ ಗುರುಪೀಠದ ಪೀಠಾಧ್ಯಕ್ಷ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಸರ್ಕಾರಿ ನೌಕರರ ಸಂಘ ಸಹ ಕಾರ್ಯದರ್ಶಿ ಎ.ಸುಧೀರ್, ಗ್ರಾಪಂ ಅಧ್ಯಕ್ಷೆ ವಿ.ಸುಷ್ಮಾ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಶ್ರೀಧರ್ ನಿಜಗುಳಿ ಇತರರಿದ್ದರು.

Share this article