ಬಿಳಿಸುಳಿ ರೋಗಕ್ಕೆ ತುತ್ತಾದ ಮೆಕ್ಕೆಜೋಳ ನಷ್ಟಕ್ಕೆ ಪರಿಹಾರ ನೀಡಲಿ

KannadaprabhaNewsNetwork |  
Published : Jun 12, 2025, 12:44 AM IST
11ಎಚ್ಎಸ್ಎನ್13 :  | Kannada Prabha

ಸಾರಾಂಶ

ರಾಜ್ಯ ಸರ್ಕಾರದ ಅಧಿಕಾರಿಗಳು ಹಾಗೂ ವಿಜ್ಞಾನಿಗಳ ಒಳಗೊಂಡ ತಂಡಗಳನ್ನು ಜಿಲ್ಲೆಗೆ ಕಳುಹಿಸಿ ಬಿಳಿಸುಳಿ ರೋಗದಿಂದ ನಾಶವಾಗುತ್ತಿರುವ ಮೆಕ್ಕೆಜೋಳ ನಷ್ಟದ ಬಗ್ಗೆ ರೈತರಿಂದ ಮಾಹಿತಿ ಪಡೆದು ಸರಿಯಾದ ಪರಿಹಾರ ನೀಡಬೇಕು. ಇಲ್ಲದಿದ್ದರೆ ತೋಟಗಾರಿಕೆ ಬೆಳೆಯನ್ನೂ ಕೂಡ ರೈತರು ಕಳೆದುಕೊಳ್ಳಬೇಕಾಗುತ್ತದೆ. ಇನ್ನು ಕಾನೂನು ಸುವ್ಯವಸ್ಥೆ ಬಗ್ಗೆ ಸುಳ್ಳು ಹೇಳುವ ಅಗತ್ಯತೆ ನನಗಿಲ್ಲ ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿಕೆಗೆ ಮಾಜಿ ಸಚಿವ ಎಚ್.ಡಿ. ರೇವಣ್ಣ ತಿರುಗೇಟು ನೀಡಿದರು.

ಕನ್ನಡಪ್ರಭ ವಾರ್ತೆ ಹಾಸನ

ರಾಜ್ಯ ಸರ್ಕಾರದ ಅಧಿಕಾರಿಗಳು ಹಾಗೂ ವಿಜ್ಞಾನಿಗಳ ಒಳಗೊಂಡ ತಂಡಗಳನ್ನು ಜಿಲ್ಲೆಗೆ ಕಳುಹಿಸಿ ಬಿಳಿಸುಳಿ ರೋಗದಿಂದ ನಾಶವಾಗುತ್ತಿರುವ ಮೆಕ್ಕೆಜೋಳ ನಷ್ಟದ ಬಗ್ಗೆ ರೈತರಿಂದ ಮಾಹಿತಿ ಪಡೆದು ಸರಿಯಾದ ಪರಿಹಾರ ನೀಡಬೇಕು. ಇಲ್ಲದಿದ್ದರೆ ತೋಟಗಾರಿಕೆ ಬೆಳೆಯನ್ನೂ ಕೂಡ ರೈತರು ಕಳೆದುಕೊಳ್ಳಬೇಕಾಗುತ್ತದೆ. ಇನ್ನು ಕಾನೂನು ಸುವ್ಯವಸ್ಥೆ ಬಗ್ಗೆ ಸುಳ್ಳು ಹೇಳುವ ಅಗತ್ಯತೆ ನನಗಿಲ್ಲ ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿಕೆಗೆ ಮಾಜಿ ಸಚಿವ ಎಚ್.ಡಿ. ರೇವಣ್ಣ ತಿರುಗೇಟು ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಮಧ್ಯಾಹ್ನ ಮಾಧ್ಯಮದೊಂದಿಗೆ ಮಾತನಾಡಿ, ಈ ಹಿಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ೪೦ ಸಾವಿರ ಹೆಕ್ಟೇರ್‌ ಆಲೂಗಡ್ಡೆ ಬೆಳೆಯುತ್ತಿದ್ದರು. ಈಗ ಕೇವಲ ೪ ಸಾವಿರ ಹೆಕ್ಟೇರ್‌ಗೆ ಬಂದು ನಿಂತಿದ್ದಾರೆ. ರೈತರು ಬೆಳೆ ಬೆಳೆಯುವ ವಿಧಾನ ಕಲಿಯಬೇಕು. ಜಿಲ್ಲೆಯ ತೋಟಗಾರಿಕೆ ಇಲಾಖೆ ೨೬೩ ಹುದ್ದೆಗಳಲ್ಲಿ ಕೇವಲ ೧೩೪ ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಇಲಾಖೆಯಲ್ಲಿ ಕೆಲಸ ಮಾಡುವವರ ಕೊರತೆ ಇದೆ ಎಂದರು. ಆಲೂಗಡ್ಡೆ ಬೆಳೆ ವಿಫಲವಾದ ಹಿನ್ನೆಲೆಯಲ್ಲಿ ರೈತರು ಜೋಳ ಬೆಳೆಯಲು ಪ್ರಾರಂಭಿಸಿ, ಜಿಲ್ಲೆಯ ಬೆಳೆ ಪರಿಶೀಲನೆಗೆ ವಿಜ್ಞಾನಿಗಳ ತಂಡ ಬಂದಿತ್ತು. ಜಿಲ್ಲೆಯಲ್ಲಿ ೨ಲಕ್ಷ ಹೆಕ್ಟೇರ್‌ನಲ್ಲಿ ಜೋಳ ಬೆಳೆಯುತ್ತಿದ್ದರು. ಈ ಬೆಳೆ ಕೂಡ ಈಗ ೪೦ ಸಾವಿರ ಹೆಕ್ಟೇರ್‌ಗೆ ಬಂದಿದೆ. ಮೆಕ್ಕೆಜೋಳ ನಷ್ಟದ ಅಧ್ಯಯನಕ್ಕೆ ರಾಜ್ಯ ಸರ್ಕಾರ ಅಧಿಕಾರಿಗಳು -ವಿಜ್ಞಾನಿಗಳನ್ನೊಳಗೊಂಡ ೪ ತಂಡಗಳನ್ನು ಜಿಲ್ಲೆಗೆ ಕಳಿಸಬೇಕು ಎಂದು ಒತ್ತಾಯಿಸಿದರು.

ಒಂದೇ ಬೆಳೆ ಬೆಳೆಯುವುದರಿಂದ ಮತ್ತು ಔಷಧಿ ಸಿಂಪಡಣೆ ಮಾಡುವುದರಿಂದ ಸುಮಾರು ಹತ್ತು ವರ್ಷ ಆ ಭೂಮಿಯಲ್ಲಿ ಯಾವುದೇ ಬೆಳೆ ಬೆಳೆಯಲು ಆಗಲ್ಲ. ಆಲೂಗಡ್ಡೆ, ಜೋಳದ ಬೆಳೆ ಅವನತಿ ಅಂಚಿಗೆ ಬಂದಿದ್ದು, ಇದನ್ನು ಪರಿಶೀಲನೆಗೆ ರಾಜ್ಯ ಸರ್ಕಾರ ಒಂದು ತಜ್ಞರ ನಿಯೋಗ ಕಳಿಸಬೇಕು. ಈ ಪರಿಸ್ಥಿತಿ ಬಗ್ಗೆ ಸಮಗ್ರ ಅವಲೋಕನ ಆಗಬೇಕು. ಕೃಷಿ ಇಲಾಖೆಯ ೪೮೩ ಹುದ್ದೆಗಳಲ್ಲಿ ೩೫೦ ಪೋಸ್ಟ್ ಖಾಲಿ ಇದ್ದು, ಈ ರೀತಿ ಆದ್ರೆ ಹೇಗೆ ಕಾರ್ಯ ನಿರ್ವಹಿಸಲು ಆಗುತ್ತದೆ. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಬೆಳೆ ಕಳೆದುಕೊಂಡ ಸಣ್ಣ ಹಿಡುವಳಿದಾರರಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು. ಹೊಳೆನರಸೀಪುರ ಬಸ್ ನಿಲ್ದಾಣದಲ್ಲಿ ಅನೇಕ ಬಾರಿ ಕಳ್ಳತನವಾಗಿದ್ದು, ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದ್ದು, ದರೋಡೆ ಮಾಡುತ್ತಿದ್ದಾರೆ. ನಮ್ಮ ಕಾರ್ಯಕರ್ತರಿಗೆ ನೋವಾಗಿರುವುದರಿಂದ ಹೇಳುವುದು ನನ್ನ ಕರ್ತವ್ಯ. ರಾಜಕಾರಣ ಬರುತ್ತೆ ಹೋಗುತ್ತೆ ಅದಕ್ಕೆ ಸಂಬಂಧವಿಲ್ಲ. ನಮ್ಮವರು ತಪ್ಪು ಮಾಡಿದರೂ ಕ್ರಮ ತೆಗೆದುಕೊಳ್ಳಿ ನಾನು ಕೇಳುವುದಕ್ಕೆ ಹೋಗುವುದಿಲ್ಲ. ಮೊಬೈಲ್ ಕ್ಯಾಮರಾ ಹಿಡಿಯುವುದು ನನಗೆ ಗೊತ್ತಿಲ್ಲ. ಟೈಂ ಬಂದಾಗ ತಿಳಿಸುತ್ತೇನೆ. ನಾನು ಆರು ಬಾರಿ ಶಾಸಕನಾಗಿದ್ದೇನೆ. ಜಿಲ್ಲೆಯಲ್ಲಿ ಕಾನೂನು-ಸುವ್ಯವಸ್ಥೆ ಬಗ್ಗೆ ಸುಳ್ಳು ಹೇಳುವ ಅಗತ್ಯವಿಲ್ಲ. ಅವರು ದೊಡ್ಡವರಿದ್ದಾರೆ, ಮಾತನಾಡಲ್ಲ. ಬಸವಘಟ್ಟ ಗ್ರಾಮ ಪಂಚಾಯಿತಿ ಸದಸ್ಯ, ಗುತ್ತಿಗೆದಾರರ ನಡುವಿನ ಜಗಳವನ್ನು ಬಗೆಹರಿಸುವ ಬದಲು ೩೦೭ ಕೇಸ್ ದಾಖಲಿಸಿ ರೌಡಿಶೀಟರ್ ಹಾಕಿದ್ದಾರೆ. ಕೊಲೆ ಮಾಡಿರುವ ಎಷ್ಟು ಜನರ ಮೇಲೆ ರೌಡಿಶೀಟರ್ ಹಾಕಿದ್ದಾರೆ ಎಂದು ಮತ್ತೆ ಪ್ರಶ್ನಿಸಿದರು. ದೂರು ನೀಡಲು ಹೋದರೆ ತೆಗೆದುಕೊಳ್ಳುವುದಿಲ್ಲ ಎಂದರೆ ಯಾರ ಬಳಿ ಹೇಳಬೇಕು, ನಾನು ಪೊಲೀಸ್ ಠಾಣೆಗೆ ಕರೆ ಮಾಡಿ, ರೌಡಿಶೀಟರ್ ದಾಖಲಿಸಿ ಎಂದು ಹೇಳಿರುವುದನ್ನು ತೋರಿಸಿದರೆ ರಾಜಕೀಯ ಬಿಟ್ಟು ಹೋಗುತ್ತೇನೆ. ಪ್ರತಿದಿನ ಮೊಬೈಲ್ ಕಳುವಾಗುತ್ತಿದ್ದು, ನಾಲ್ಕೈದು ಮನೆ ದೋಚಲಾಗುತ್ತಿದೆ. ಇದನ್ನು ಕೇಳಬಾರದ, ಜೆಡಿಎಸ್ ಕಾರ್ಯಕರ್ತರು ತಪ್ಪು ಮಾಡಿದ್ದರೆ ಕ್ರಮ ತೆಗೆದುಕೊಳ್ಳಲಿ ಅದುಬಿಟ್ಟು ಪಕ್ಷಪಾತ ಮಾಡುವ ಕೆಲಸ ಮಾಡಬಾರದು ಎಂದು ಸಲಹೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''