ಖರ್ಗೆ-ಸಿದ್ದು ಪ್ರತಿಮೆ ಸ್ಥಾಪನೆಗೆ ಪೈಪೋಟಿ

KannadaprabhaNewsNetwork |  
Published : Sep 30, 2026, 01:30 AM IST
ಫೋಟೋ- ಖರ್ಗೆ 1, ಖರ್ಗೆ 2, ಖರ್ಗೆ 4ಕಲಬುರಗಿಯಲ್ಲಿರುವ ಜಿಲ್ಲಾಡಳಿತ ಕಚೇರಿಗಳ ಸಮುಚ್ಚಯ ಮಿನಿ ವಿಧಾನ ಸೌಧ ಅಂಗಳದಲ್ಲೇ ಡಾ. ಮಲ್ಲಿಕಾರ್ಜುನ ಖರ್ಗೆ ಪ್ರತಿಮೆ ಸ್ಥಾಪನೆಗೆ ಕೋರಿ ಮನವಿ ಸಲ್ಲಿಕೆಯಾಗಿದೆ | Kannada Prabha

ಸಾರಾಂಶ

ಕಲಬುರಗಿಯಲಗಲ್ಲಿಗ ಎಐಸಿಸಿ ಅಧ್ಯಕ್ಷ, ರಾಜ್ಯಸಭಾ ವಿಪಕ್ಷ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಮೆ ಸ್ಥಾಪನೆಗೆ ತೀವ್ರ ಪೈಪೋಟಿ ಶುರುವಾಗಿದೆ. ಸೆ. 17 ರ ಕಲ್ಯಾಣ ಕರ್ನಾಟಕ ಉತ್ಸವದ ದಿನ ಹೈಕೋರ್ಟ್‌ ಪಕ್ಕದ ಅಫಜಲ್ಪುರ ರಸ್ತೆಯ ತಿರುವಲ್ಲಿರುವ ತ್ರಿಕೋನ ಸ್ಥಳದಲ್ಲಿ ಮಾಜಿ ಸಿಎಂ ಸಿದ್ದರಾಮ್ಯನವರ ಪುತ್ಥಳಿ ರಾತ್ರೋರಾತ್ರಿ ಸ್ಥಾಪನೆ, ತೆರವಿನ ಪ್ರಸಂಗದ ನಂತರ ಕಂಡಿರುವ ಈ ಹೊಸ ಬೆಳವಣಿಗೆ ರಾಜಕೀಯ ರಂಗದಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

- ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿಕಲಬುರಗಿಯಲಗಲ್ಲಿಗ ಎಐಸಿಸಿ ಅಧ್ಯಕ್ಷ, ರಾಜ್ಯಸಭಾ ವಿಪಕ್ಷ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಮೆ ಸ್ಥಾಪನೆಗೆ ತೀವ್ರ ಪೈಪೋಟಿ ಶುರುವಾಗಿದೆ. ಸೆ. 17 ರ ಕಲ್ಯಾಣ ಕರ್ನಾಟಕ ಉತ್ಸವದ ದಿನ ಹೈಕೋರ್ಟ್‌ ಪಕ್ಕದ ಅಫಜಲ್ಪುರ ರಸ್ತೆಯ ತಿರುವಲ್ಲಿರುವ ತ್ರಿಕೋನ ಸ್ಥಳದಲ್ಲಿ ಮಾಜಿ ಸಿಎಂ ಸಿದ್ದರಾಮ್ಯನವರ ಪುತ್ಥಳಿ ರಾತ್ರೋರಾತ್ರಿ ಸ್ಥಾಪನೆ, ತೆರವಿನ ಪ್ರಸಂಗದ ನಂತರ ಕಂಡಿರುವ ಈ ಹೊಸ ಬೆಳವಣಿಗೆ ರಾಜಕೀಯ ರಂಗದಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.ಪಾಲಿಕೆಯಿಂದ ಅನುಮತಿ ಪಡೆದಿಲ್ಲವೆಂಬ ಕಾರಣ ಮುಂದೊಡ್ಡಿ ಅಫಜಲ್ಪುರ ರಸ್ತೆಯಲ್ಲಿ ರಾತ್ರೋರಾತ್ರಿ ಸ್ಥಾಪಿಸಿದ್ದ ಸಿದ್ದರಾಮಯ್ಯನವರ 9 ಅಡಿ ಎತ್ತರದ ಪ್ರತಿಮೆಯನ್ನು ಪಾಲಿಕೆಯವರು ತೆರವುಗೊಳಿಸಿದ್ದರು.ಇದೀಗ ಕರ್ನಾಟಕ ರಾಜ್ಯ ಕುರುಬ ಸಂಘ ಜಿಲ್ಲಾ ಘಟಕ ಅಫಜಲಪುರ ಮುಖ್ಯ ರಸ್ತೆಯ ಹೈಕೋರ್ಟ್‍ಗೆ ಹೋಗುವ ರಸ್ತೆಯ ಮಧ್ಯದಲ್ಲಿನ ತ್ರಿಕೋನ ಸ್ಥಳಕ್ಕೆ ರಾಜ್ಯದ ಮಾಜಿ ಸಿಎಂ ಸಿದ್ದರಾಮಯ್ಯ ವೃತ್ತ ಮತ್ತು ಸಿದ್ದರಾಮಯ್ಯ ಮೂರ್ತಿ ಸ್ಥಾಪನೆಗೆ ಅನುಮತಿ ನೀಡುವಂತೆ ಕಲಬುರಗಿ ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ ಪಾಲಿಕೆಯ ವಲಯ ಆಯುಕ್ತರ ಕಚೇರಿ-1ರ ವಲಯ ಆಯುಕ್ತರು ಸಾರ್ವಜನಿಕರಿಂದ ಆಕ್ಷೇಪಣೆ ಕೂಡಾ ಆಹ್ವಾನಿಸಿರುವುದರಿಂದ ಸಿದ್ದು ಪ್ರತಿಮೆ ಸ್ಥಾಪನೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.ಏತನ್ಮಧ್ಯೆ ಸೆ.19 ರಂದು ಮಾದನ ಹಿಪ್ಪರಗಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ಕಾಂಗ್ರೆಸ್‌ ಜಿಲ್ಲಾ ಮಾಧ್ಯಮ ವಕ್ತಾರ ಅಮೃತ ಸಜ್ಜನ್‌ ಅವರು ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಿ ಎಐಸಿಸಿ ಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಪುತ್ಥಳಿಯನ್ನು ಡಿಸಿ ಕಚೇರಿ ಇರುವ ಮಿನಿ ವಿಧಾನ ಸೌಧ ಪ್ರಾಂಗಣದಲ್ಲಿ ಸ್ಥಾಪಿಸಲು ಅನುಮತಿ ಕೋರಿ ಮನವಿ ಸಲ್ಲಿಸಿದ್ದಾರೆ.ಡಾ. ಮಲ್ಲಿಕಾರ್ಜುನ ಖರ್ಗೆ ಹೆಸರಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ 2 ಎಕರೆ ಜಮೀನು ಕೋರಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಜಿಲ್ಲಾ ಉಸ್ತುವಾರಿ ಸಚಿವ, ಎಂಎಲ್‌ಸಿ, ಶಾಸಕರಿಗೂ ಮನವಿ ಸಲ್ಲಿಸಿ ಗಮನ ಸೆಳೆದಿದ್ದಾರೆ.ಅತ್ತ ರಾಜ್ಯ ಕುರುಬ ಸಂಘದಿಂದ ಸಿದ್ದರಾಮಯ್ಯ ವೃತ್ತ, ಪ್ರತಿಮೆ ಸ್ಥಾಪನೆಗೆ ಅನುಮತಿ ಕೋರಿ ಅಧಿಕೃತ ಮನವಿ ಪಾಲಿಕೆಗೆ ಸಲ್ಲಿಕೆಯಾದರೆ, ಇತ್ತ ಡಾ. ಖರ್ಗೆಯವರ ಪ್ರತಿಮೆ, ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಮನುಮತಿ, ನಿವೇಶನ ಕೋರಿ ಮನವಿ ಪತ್ರ ಸಲ್ಲಿಕೆಯಾಗಿರುವುದರಿಂದ 2 ವಾರದಳಗೇ ಕಂಡಿರುವ ಈ ಬೆಳವಣಿಗೆ ರಾಜಕೀಯವಾಗಿ ತೀವ್ರ ಸಂಚಲನ ಹುಟ್ಟು ಹಾಕಿದೆ.

ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಸೇವೆ ಕಲಬುರಗಿ ಸಹಿತ ಕಲ್ಯಾಣ ಕರ್ನಾಟಕ ಬಾಗದಲ್ಲಿ ಅಪಾರವಾಗಿದೆ. ಇದನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕಿದ್ದು, ಅವರ ಪುತ್ಥಳಿ ಡಿಸಿ ಕಚೇರಿ ಮುಂದೆ ಸ್ಥಾಪನೆಯಾಗಬೇಕಿದೆ. ಜತೆಗೆ 2 ಎಕರೆಯಲ್ಲಿ ಅವರ ಹೆಸರಲ್ಲೇ ಸಾಂಸ್ಕೃತಿಕ ಭವನವಾಗಬೇಕು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಾಗೂ ಜಿಲ್ಲೆಯ ಶಾಸಕರಿಗೂ ಮನವಿ ಸಲ್ಲಿಸಿರುವೆ ಎಂದು ಮಾದನ ಹಿಪ್ಪರಗಾ ಬ್ಲಾಕ್‌ ಕಂಗ್ರೆಸ್‌ ಕಮೀಟಿ ಅಧ್ಯಕ್ಷ ಅಮೃತ ಸಜ್ಜನ್‌ ಹೇಳಿದರು.

*ಖರ್ಗೆ ಪುತ್ಥಳಿಗೂ ಅನುಮತಿ: ಸಜ್ಜನ್‌ ಒತ್ತಾಯ: ಡಾ. ಮಲ್ಲಿಕಾರ್ಜುನ ಖರ್ಗೆಯವರ ಪುತ್ಥಳಿ ಜಿಲ್ಲಾಡಳಿತ ಕಚೇರಿ ಸಮುಚ್ಚಯವಿರುವ ವಿಕಾಸ ಭವನದ ಅಂಗಳದಲ್ಲಿ ಸ್ಥಾಪಿಸಬೇಕು, 2 ಎಕರೆ ಜಾಗಲ್ಲಿ ಖರ್ಗೆ ಸಾಂಸ್ಕೃತಿಕ ಭವನಕ್ಕಾಗಿ ನಿವೇಶನ ನೀಡಬೇಕೆಂದು ಮಾದನ ಹಿಪ್ಪರಗಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಮೃತ ಸಜ್ಜನ್‌ ಪಾಲಿಕೆ ಆಯುಕ್ತರಿಗೆ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಕಲಂ 371 ಜೆ ರೂವಾರಿ ಖರ್ಗೆ ಅವರಾಗಿದ್ದು, ಇದರಿಂದ ಕಲಬುರಗಿ ಸೇರಿದಂತೆ ಕಲ್ಯಾಣದ ಭಾಗ್ಯದ ಬಾಗಿಲು ತೆರೆದಿದೆ. ಕಲಬುರಗಿಯಿಂದಲೇ ಸುದೀರ್ಘ 5 ದಶಕಕ್ಕೂ ಅಧಿಕ ಸಾರ್ವಜನಿಕ ಬದುಕಲ್ಲಿದ್ದುಕೊಂಡು ದಾಖಲೆ ಬರೆದಿದ್ದಾರೆ. ಅವರ ಈ ಸುದೀರ್ಘ ಸೇವೆ ಮುಂದಿನ ಪೀಳಿಗೆಗೆ ತಿಳಿಯಬಕೆಂಬ ಉದ್ದೇಶದಿಂದ ಪ್ರತಿಮೆ ಸ್ಥಾಪಿಸಲು ಹಾಗೂ 2 ಎಕರೆ ಜಾಗ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಮೃತ ಸಜ್ಜನ್‌ ಒತ್ತಾಯಿಸಿದ್ದಾರೆ.

ಸಿದ್ದು ಪ್ರತಿಮೆ: ಆಕ್ಷೇಪಣೆ ಆಹ್ವಾನ: ಅಫಜಲ್ಪುರಗೆ ಸಾಗುವ ರಸ್ತೆಯಲ್ಲಿ ಬರುವ ತ್ರಿಕೋನ ಸ್ಥಳ ಮತ್ತು ರಸ್ತೆಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧೀನದಲ್ಲಿದ್ದು, ಈ ಸ್ಥಳಕ್ಕೆ ಸಿದ್ದರಾಮಯ್ಯರವರ ವೃತ್ತ ಮತ್ತು ಸಿದ್ದರಾಮಯ್ಯರವರ ಮೂರ್ತಿ ಸ್ಥಾಪನೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸಲಹೆ/ ಆಕ್ಷೇಪಣೆ/ ತಕರಾರುಗಳನ್ನು ಪಾಲಿಕೆ ಆಹ್ವಾನಿಸಿದೆ. ಈ ಕುರಿತು 30 ದಿನದೊಳಗಾಗಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಅಥವಾ ವಲಯ ಆಯುಕ್ತರಿಗೆ ಸಲ್ಲಿಬೇಕು ಎಂದು ಕಚೇರಿ ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರ್ಥಪೂರ್ಣವಾಗಿ ದಸರಾಗೆ ಅಗತ್ಯ ಕ್ರಮವಹಿಸಿ: ಜುಬಿನ್‌ ಮೊಹಾಪಾತ್ರ
ತಾಯಿ ಮಕ್ಕಳ ಆರೈಕೆ, ಗುಣಮಟ್ಟದ ಸೇವೆ ನಿಗಾವಹಿಸಿ: ಡಾ.ರಜನಿ ಎಂ