ದೊಡ್ಡಕೆರೆ ಖಾಲಿ ಖಾಲಿ: ಶಿರಾ ನಗರಕ್ಕೆ ನೀರಾತಂಕ: ಜೀಷಾನ್ ಮೊಹಮದ್‌

KannadaprabhaNewsNetwork |  
Published : Sep 30, 2026, 01:30 AM IST
೨೯ಶಿರಾ೩: ಶಿರಾ ನಗರದ ದೊಡ್ಡಕೆರೆ ಆವರಣದಲ್ಲಿರುವ ನೀರು ಶುದ್ಧೀಕರಣ ಘಟಕದಲ್ಲಿ ನಗರಸಭಾ ಅಧ್ಯಕ್ಷ ಜೀಷಾನ್ ಮೊಹಮದ್ ಪತ್ರಿಕಾಗೋಷ್ಠಿ ನಡೆಸಿದರು. ನಗರಸಭೆ ಉಪಾಧ್ಯಕ್ಷ ಲಕ್ಷ್ಮೀಕಾಂತ್, ಪೌರಾಯುಕ್ತ ರುದ್ರೇಶ್ ಸೇರಿದಂತೆ ಹಲವರು ಹಾಜರಿದ್ದರು. | Kannada Prabha

ಸಾರಾಂಶ

ಶಿರಾ ನಗರದ ಕುಡಿಯುವ ನೀರಿನ ಪ್ರಮುಖ ಜಲ ಸಂಗ್ರಹಗಾರವಾಗಿರುವ ದೊಡ್ಡ ಕೆರೆಯಲ್ಲಿ ನೀರು ಖಾಲಿಯಾಗಿದ್ದು, ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಲಿದೆ. ನೀರಿನ ಲಭ್ಯತೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ನೀರನ್ನು ವ್ಯರ್ಥ ಮಾಡದೆ, ಅಗತ್ಯಕ್ಕೆ ತಕ್ಕಂತೆ ಮಿತವಾಗಿ ಬಳಸಬೇಕು ಎಂದು ನಗರಸಭಾ ಅಧ್ಯಕ್ಷ ಜೀಷಾನ್ ಮೊಹಮದ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ಶಿರಾ ನಗರದ ಕುಡಿಯುವ ನೀರಿನ ಪ್ರಮುಖ ಜಲ ಸಂಗ್ರಹಗಾರವಾಗಿರುವ ದೊಡ್ಡ ಕೆರೆಯಲ್ಲಿ ನೀರು ಖಾಲಿಯಾಗಿದ್ದು, ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಲಿದೆ. ನೀರಿನ ಲಭ್ಯತೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ನೀರನ್ನು ವ್ಯರ್ಥ ಮಾಡದೆ, ಅಗತ್ಯಕ್ಕೆ ತಕ್ಕಂತೆ ಮಿತವಾಗಿ ಬಳಸಬೇಕು ಎಂದು ನಗರಸಭಾ ಅಧ್ಯಕ್ಷ ಜೀಷಾನ್ ಮೊಹಮದ್ ಹೇಳಿದರು.

ಮಂಗಳವಾರ ನಗರದ ದೊಡ್ಡಕೆರೆ ಆವರಣದಲ್ಲಿರುವ ನೀರು ಶುದ್ಧೀಕರಣ ಘಟಕದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಈ ವರ್ಷ ಹೇಮಾವತಿ ಜಲಾನಯದ ಪ್ರದೇಶದಲ್ಲಿಯೂ ಮಳೆ ಇಲ್ಲದೆ ಜಲಾಶಯದಲ್ಲೂ ನೀರಿನ ಲಭ್ಯತೆ ಕಡಿಮೆ ಇದೆ. ಆದರೂ ಕಳೆದ ಒಂದು ತಿಂಗಳು ಹೇಮಾವತಿ ನೀರನ್ನು ಶಿರಾ ದೊಡ್ಡ ಕೆರೆಗೆ ಹರಿಸಲಾಗಿತ್ತು. ಆ ನೀರು ಸಹ ಮುಗಿಯುವ ಹಂತದಲ್ಲಿದ್ದು, ಇನ್ನೊಂದು ಹದಿನೈದು ದಿನಗಳಲ್ಲಿ ಸಂಪೂರ್ಣ ನೀರು ಖಾಲಿಯಾಗಲಿದೆ. ಈ ಹಿನ್ನೆಲೆಯಲ್ಲಿ ನಗರದ ಕುಡಿಯುವ ನೀರಿನ ವ್ಯವಸ್ಥೆ ಕುರಿತು ಆತಂಕ ಮೂಡಿದೆ. ಭವಿಷ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಇತಿಮಿತಿಯಲ್ಲಿ ನೀರನ್ನು ಬಳಸಬೇಕು ಎಂದು ತಿಳಿಸಿದರು.

ನಗರಸಭೆ ಪೌರಾಯುಕ್ತ ರುದ್ರೇಶ್ ಮಾತನಾಡಿ ಶಿರಾ ನಗರದಲ್ಲಿ ಸುಮಾರು ೧ ಲಕ್ಷ ಜನಸಂಖ್ಯೆ ಇದ್ದು, ಪ್ರತಿ ನಿತ್ಯ ನಗರದಲ್ಲಿನ ೮ ಓವರ್‌ ಹೆಡ್‌ ಟ್ಯಾಂಕ್ಗಳಿಂದ ೬೦ ಲಕ್ಷ ಲೀಟರ್ ಶುದ್ಧೀಕರಿಸಿದ ನೀರನ್ನು ಜನರಿಗೆ ನೀಡುತ್ತಿದ್ದೇವೆ. ದೊಡ್ಡ ಕೆರೆಯಲ್ಲಿ ನೀರಿನ ಲಭ್ಯತೆ ಕಡಿಮೆಯಾಗುತ್ತಿರುವುದರಿಂದ ಕುಡಿಯುವ ನೀರನ್ನು ಅನಗತ್ಯವಾಗಿ ಪೋಲು ಮಾಡದೆ, ಮಿತವಾಗಿ ಬಳಸುವ ಮೂಲಕ ನಗರದಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಸಹಕರಿಸಬೇಕು. ನಗರದಲ್ಲಿ ಅನಧಿಕೃತವಾಗಿ ಸಂಪರ್ಕ ಪಡೆದಿರುವ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು. ಇದಕ್ಕೆ ಎಲ್ಲಾ ವಾರ್ಡಿನ ನಗರಸಭಾ ಸದಸ್ಯರು ಸಹಕಾರಿ ನೀಡಬೇಕು ಎಂದು ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಉಪಾಧ್ಯಕ್ಷ ಲಕ್ಷ್ಮೀಕಾಂತ್, ನಗರಸಭೆ ಸದಸ್ಯರಾದ ಆರ್. ರಾಮು, ಧ್ರುವಕುಮಾರ್, ನಗರಸಭೆ ಮಾಜಿ ಸದಸ್ಯರಾದ ಆರ್. ರಾಘವೇಂದ್ರ, ಮುಖಂಡರಾದ ನಸ್ರುಲ್ಲಾ ಖಾನ್, ಮಜರ್ ಸಾಬ್, ಭಾನುಪ್ರಕಾಶ್, ರಫಿವುಲ್ಲಾ, ಫರ್ಮಾನ್, ನಗರಸಭೆ ಜೂನಿಯರ್ ಇಂಜಿನಿಯರ್ ಯೋಗೇಶ್ ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರ್ಥಪೂರ್ಣವಾಗಿ ದಸರಾಗೆ ಅಗತ್ಯ ಕ್ರಮವಹಿಸಿ: ಜುಬಿನ್‌ ಮೊಹಾಪಾತ್ರ
ತಾಯಿ ಮಕ್ಕಳ ಆರೈಕೆ, ಗುಣಮಟ್ಟದ ಸೇವೆ ನಿಗಾವಹಿಸಿ: ಡಾ.ರಜನಿ ಎಂ