ಗೌರಿಬಿದನೂರು: ನವೆಂಬರ್ 17, ಭಾನುವಾರ 10 ಗಂಟೆಯಿಂದ ಒಂದು ದಿನದ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ಕಾರ್ಯಾಗಾರವನ್ನು ಇಲ್ಲಿನ ಡಾ.ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ, ಸಮಾನತಾ ಸೌಧದಲ್ಲಿ ಹಮ್ಮಿಕೊಳ್ಳಲಾಗಿದೆ.
ತರಬೇತಿ ಕೇಂದ್ರವು ಸುಸಜ್ಜಿತವಾದ ಗ್ರಂಥಾಲಯ, ವಾಚನಾಲಯ ಸೌಲಭ್ಯವನ್ನು ಹೊಂದಿದೆ. ಬೆಂಗಳೂರು, ಧಾರವಾಡ ಹಾಗೂ ವಿಜಯಪುರದ ಬೋಧಕ ಸಿಬ್ಬಂದಿಯವರಿಂದ ಬೋಧನೆ ನೆಡೆಯುತ್ತಿದೆ. ಉಚಿತ ವೈ-ಫೈ(WI-FI) ಸೌಲಭ್ಯವನ್ನು ಗ್ರಂಥಾಲಯದಲ್ಲಿ ಅಳವಡಿಸಲಾಗಿದೆ. ಯಾವುದೇ ಹುದ್ದೆಗಳಿಗೆ ಅಂತರ್ಜಾಲದ ಮೂಲಕ ಅರ್ಜಿ ಸಲ್ಲಿಸಲು ಸಹಾಯ ಮಾಡಲಾಗುತ್ತಿದೆ. ತರಗತಿಗಳು ನಡೆಯುವ ದಿನಗಳಂದು ಮಧ್ಯಾಹ್ನ ಉಚಿತವಾಗಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ.
ಈಗ ವಾರಾಂತ್ಯದ ತರಗತಿಗಳ ಜೊತೆಗೆ ವಾರದ ಎಲ್ಲಾ ದಿನಗಳಲ್ಲಿ ನಿರಂತರವಾದ ತರಬೇತಿಯನ್ನು ಆಯೋಜಿಸಲು ನಿರ್ಧರಿಸಲಾಗಿದೆ.