ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಕಾಲೇಜಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜು ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭಗೊಂಡ ಶಿಕ್ಷಣ ಸಂಸ್ಥೆಯಾಗಿದೆ. ಆರಂಭದಿಂದಲೂ ಸಂಸ್ಥೆ ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಿದೆ ಎಂದರು.
ಈಗ ಗ್ರಾಮೀಣ ಪ್ರದೇಶದ ಮಕ್ಕಳು ಸರ್ಕಾರಿ ಉದ್ಯೋಗ ದೊರಕಿಸಿಕೊಡುವ ಉದ್ದೇಶದಿಂದ ವಿಶೇಷ ಕೋಚಿಂಗ್ ತರಗತಿ ಆರಂಭಿಸಲಾಗಿದೆ. ಮುಂದಿನ ಅ.2 ಮತ್ತು 4 ರಂದು ಗ್ರಾಮ ಆಡಳಿತ ಅಧಿಕಾರಿಗಳ ಪರೀಕ್ಷೆ ಇರುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಸಂಸ್ಥೆಯಲ್ಲಿ ಕೋಚಿಂಗ್ ಸೆಂಟರ್ ಆರಂಭಿಸಲಾಗಿದೆ ಎಂದರು.ಸೆ.21ರಂದ ತರಗತಿ ಆರಂಭಗೊಳ್ಳುತ್ತಿದೆ. ಇದಕ್ಕೆ ದಾಖಲಾತಿ ಶುಲ್ಕವಾಗಿ ವಿದ್ಯಾರ್ಥಿಗಳಿಂದ ಕೇವಲ 500 ರು. ಪಡೆದುಕೊಳ್ಳಲಾಗಿದೆ. 6 ದಿನಗಳ ಕಾಲ ಕೋಚಿಂಗ್ ನೀಡಲಾವುವುದು. ಪ್ರತಿ ನಿತ್ಯ ಕನಿಷ್ಠ 5 ಗಂಟೆಗಳು ಕಾಲ ತರಗತಿಗಳು ನಡೆಯಲಿವೆ ಎಂದರು.
ಗ್ಲೋಬಲ್ ಅಕಾಡೆಮಿ ಸಂಸ್ಥಾಪಕ ರಾಜೇಶ್ ಮಾತನಾಡಿ, ರಾಜ್ಯ ಸರ್ಕಾರ ಹಲವು ಇಲಾಖೆಗಳಲ್ಲಿ ಸುಮಾರು 2062 ಹುದ್ದೆಗಳನ್ನು ಆಹ್ವಾನಿಸುತ್ತಿದೆ. ಗ್ರಾಮ ಆಡಳಿತಾಧಿಕಾರಿಗಳ ಹುದ್ದೆ ಪರೀಕ್ಷೆ ನಡೆಯುಲಿ, ಅದಕ್ಕೆ ಅನುಕೂಲವಾಗಲು, ಮುಂದೆ ಪೊಲೀಸ್, ಅರಣ್ಯ ಇಲಾಖೆ,ವಾರ್ಡ್ ನ್, ಸಾರಿಗೆ, ಪಿಡಿಒ, ಕಾರ್ಯದರ್ಶಿ ಹುದ್ದೆಗೆ ಅರ್ಜಿ ಆಹ್ವಾನಿಸಲಿದ್ದಾರೆ. ಇದಕ್ಕೆ ವಿದ್ಯಾರ್ಥಿಗಳು ಸಿದ್ದಗೊಳ್ಳಬೇಕು, ಅದಕ್ಕಾಗಿ ಆರಂಭಿಸಿರುವ ಕೋಚಿಂಗ್ ಸೆಂಟರ್ ಗಳನ್ನು ಆರಂಭಿಸಲಾಗಿದೆ ಎಂದರು.
ಭೈರವೈಕ್ಯ ಶ್ರೀಗಳ ಪಟ್ಟಾಭಿಷೇಕ ನೆನಪಿಗಾಗಿ ಚಿಣ್ಣರ ಜಾಣರ ಜಗುಲಿ ಕಾರ್ಯಕ್ರಮ
ಸಂಸ್ಥೆ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದಿನ ಜೀವನ ಶೈಲಿ ಸರಿಯೇ, ಆಧುನೀಕ ಜೀವನ ಶೈಲಿ ಸರಿಯೇ ಎಂಬ ವಿಚಾರ ಕುರಿತು ಚರ್ಚಿಸಲಾಯಿತು.ಹಾಸ್ಯನಟ ನರಸಿಂಹಜೋಶಿ ಕಾರ್ಯಮದ ನಿರ್ವಹಣೆ ಮಾಡಿದರು. ಹಿಂದಿನ ಜೀವನ ಶೈಲಿಯೇ ಸರಿ ಎಂಬ ವಿಷಯ ಕುರಿತು ಜನನಿ, ತ್ರಿಷಿಕಗೌಡ, ರುಚಿತ, ವಿದ್ಯಾಶ್ರೀ, ನೂತನ್ ವಾಧಿಸಿದರು. ಆಧುನೀಕ ಜೀವನ ಶೈಲಿಯೇ ಸರಿ ಎಂಬುದಾಗಿ ವಿದ್ಯಾರ್ಥಿಗಳಾದ ಲೇಖನಾ, ದೃತಿ, ಹರ್ಷಲ, ಗಾನವಿ, ಮದನ್ ಗೌಡ ಅವರು ವಾದಿಸಿದರು.
ಡಾ.ಜೆ.ಎನ್.ರಾಮಕೃಷ್ಣೇಗೌಡ ಮಾತನಾಡಿ, ಭೈರವೈಕ್ಯ ಶ್ರೀಗಳ ಪಟ್ಟಾಭಿಷೇಕದ ನೆನೆಪಿಗಾಗಿ ಈಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಈ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದ್ದೇವೆ ಎಂದರು.ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ಅಧ್ಯಕ್ಷ ಎಸ್.ಎ.ಮಲ್ಲೇಶ್, ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಬಿಜೆಪಿ ಅಧ್ಯಕ್ಷ ಧನಂಜಯ್, ಕಾಂಗ್ರೆಸ್ ಮುಖಂಡ ಎಲ್.ಸಿ.ಮಂಜುನಾಥ್, ಎಲ್.ಅಶೋಕ್, ಅಶ್ವಥ್ ಕುಮಾರೇಗೌಡ, ಮೇನಾಗರ ಪ್ರಕಾಶ್, ಬಿ.ಎಸ್.ಜಯರಾಮು, ನಾಗಸುಂದರ್, ಪ್ರಾಂಶುಪಾಲ ರಘು, ಮುಖ್ಯಶಿಕ್ಷಕಿ ಚಂಪಕ ಸೇರಿದಂತೆ ಹಲವರು ಹಾಜರಿದ್ದರು.