ನರೇಗಲ್ಲ: ಸ್ಪರ್ಧಾಳುಗಳು ಯಾವುದೇ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕಾದರೆ ಆತ್ಮಸ್ಥೈರ್ಯ ಮತ್ತು ತಾಳ್ಮೆ ಅಗತ್ಯವಾಗಿರುತ್ತದೆ. ಅಂದಾಗ ಒಳ್ಳೆಯ ಫಲಿತಾಂಶವನ್ನು ಕಾಣಲು ಸಾಧ್ಯ ಎಂದು ರಾಜ್ಯ ಪ್ರದೇಶ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಅಕ್ಷಯ ಪಾಟೀಲ ತಿಳಿಸಿದರು.ಸಮೀಪದ ಹಾಲಕೆರೆ ಗ್ರಾಮದ ಅನ್ನದಾನ ಮಹಾ ಶಿವಯೋಗಿಗಳ 175ನೇ ಜಾತ್ರಾ ಮಹೋತ್ಸವದ ಅಂಗವಾಗಿ ಅನ್ನದಾನೇಶ್ವರ ಗೆಳೆಯರ ಬಳಗದ ವತಿಯಿಂದ ನಡೆದ ಸ್ಲೋ ಬೈಕ್ ಓಡಿಸುವ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಎಇಇ ಮುದುಕಪ್ಪ ಪ್ರಭಣ್ಣವರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಯುವಕರು ಕೇವಲ ಟಿವಿ, ಮೊಬೈಲ್, ಸಾಮಾಜಿಕ ಜಾಲತಾಣಗಳ ಕೈಗೊಂಬೆಯಾಗಿದ್ದು, ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಕ್ರೀಡೆಗಳಿಗೆ ಉತ್ತೇಜಿಸುವುದು ಕ್ರೀಡೆಗಳನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಅದನ್ನು ಮುನ್ನಡೆಸಿಕೊಂಡು ಹೋಗಬೇಕು ಎಂದರು.
ಈ ವೇಳೆ ಗ್ರಾಪಂ ಅಧ್ಯಕ್ಷ ಗಿರೀಶ ಗೌಡ್ರ ಮುಲ್ಕಿಪಾಟೀಲ, ರಮೇಶ್ ಕುರಿ, ಶರಣಪ್ಪ ನವಲಗುಂದ, ಮಹೇಶ ಕುರಿ, ಪ್ರವೀಣ ಬೈರಗೊಂಡ, ಅಯ್ಯನಗೌಡ್ರು ಯಲ್ಲಪ್ಪಗೌಡ್ರು, ಆನಂದ ಹಳ್ಳಿ, ಬಸವರಾಜ ಮೇಟಿ, ನವೀನ ಮಾದಿನೂರ, ರಾಘು ಕುರಿ, ಮಂಜು ಕರಡಿ, ಶಿವು ಶಿರೂರ, ಕುಮಾರ ಕರಡಿ, ಗುರುರಾಜ ಬಂಡಿಹಾಳ, ಬಸವರಾಜ ಸಸಬಾಳ, ಸಾಗರ ಅಂಗಡಿ, ಮಂಜುನಾಥ ನವಲಗುಂದ ಹಾಗೂ ಅನ್ನದಾನೇಶ್ವರ ಗೆಳೆಯರ ಬಳಗದ ಸದಸ್ಯರು ಇದ್ದರು.