ಹುಬ್ಬಳ್ಳಿ: ದೇಶದ ಅಭಿವೃದ್ಧಿಯಲ್ಲಿ ರಸಾಯನಶಾಸ್ತ್ರಜ್ಞರ, ವಿಜ್ಞಾನಿಗಳು, ಸಂಶೋಧಕರು ಹಾಗೂ ಕೈಗಾರಿಕೋದ್ಯಮಿಗಳ ಕೊಡುಗೆ ಅಪಾರವಾಗಿದೆ. ಇನ್ನೂ ಹೆಚ್ಚಿನ ಸುಧಾರಣೆಗೆ ರಸಾಯನಶಾಸ್ತ್ರಜ್ಞರು, ವಿಜ್ಞಾನಿಗಳು ಚಿಂತನೆ ನಡೆಸುವ ಅವಶ್ಯಕತೆಯಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಕೇಂದ್ರ ಸರ್ಕಾರ ಆತ್ಮನಿರ್ಭರ ಭಾರತ ಯೋಜನೆಯಡಿ ಸಾಕಷ್ಟು ಸುಧಾರಣೆಗಳಾಗುತ್ತಿವೆ. ಸಂಶೋಧನಾ ಕೇಂದ್ರ, ತಂತ್ರಜ್ಞಾನ, ಕೈಗಾರಿಕೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ಸ್ಥಾಪಿಸಲಾಗಿದೆ. ದೇಶದಲ್ಲಿ ಕೋವಿಡ್ ಬರುವ ವರೆಗೂ ಒಂದು ಲಸಿಕೆ ಇರಲಿಲ್ಲ. ಇಡೀ ಜಗತ್ತು ಬಿಕ್ಕಟ್ಟು ಎದುರಿಸುವಾಗ ಭಾರತ ವಿಜ್ಞಾನಿಗಳ ಶ್ರಮ ಹಾಗೂ ಜ್ಞಾನದಿಂದ ಸುಲುಭವಾಗಿ ಪರಿಹರಿಸಲು ಸಾಧ್ಯವಾಯಿತು ಎಂದರು.
ನವೀಕರಿಸಬಹುದಾದ ಇಂಧನ ಕ್ಷೇತ್ರ, ರೈಲ್ವೆ ವಿದ್ಯುದೀಕರಣ, ತಂತ್ರಜ್ಞಾನ, ಸೋಲಾರ ಬಹಳಷ್ಟು ಸುಧಾರಣೆಯಾಗುತ್ತಿದೆ. ದೇಶದ ಆರ್ಥಿಕತೆ ಬಹಳ ಸದೃಢವಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಸುಧಾರಣೆಗಳನ್ನು ಕಾಣುತ್ತಿದ್ದೇವೆ. ಭಾರತ 100ಕ್ಕೂ ಹೆಚ್ಚು ಮೊಬೈಲ್‌ಗಳನ್ನು ಇಲ್ಲಿಯೇ ತಯಾರಿಸುತ್ತಿದೆ. ಇಲ್ಲಿ ಸೇರಿರುವ ರಸಾಯನಶಾಸಜ್ಞರು, ವಿಜ್ಞಾನಿಗಳು, ವಿದ್ಯಾರ್ಥಿಗಳು ವಿಚಾರ ಸಂಕೀರ್ಣದಲ್ಲಿ ಭಾಗವಹಿಸಿ ಹೆಚ್ಚಿನ ವಿಷಯಗಳ ಅರಿಯಬೇಕು. ಈ ಮೂಲಕ ದೇಶ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.ಭಾರತೀಯ ವಿಜ್ಞಾನ ಅಕಾಡೆಮಿ ಅಧ್ಯಕ್ಷ ಅಶುತೋಷ ಶರ್ಮಾ ಮಾತನಾಡಿ, ಸದ್ಯ ಕೃತಕ ಬುದ್ಧಿ ಮತ್ತೆ(ಎಐ) ಎಲ್ಲ ಕ್ಷೇತ್ರವನ್ನು ಆವರಿಸುತ್ತಿದೆ. ಕೆಮಿಕಲ್‌ಗಳ ಬಗ್ಗೆ ಅರಿಯಲು ಎಐ ಬಳಸಲಾಗುತ್ತಿದೆ. ಆದ್ದರಿಂದ ಕೃತಕ್ ಬುದ್ಧಿ ಮತ್ತೆ ಬಗ್ಗೆ ಪ್ರತಿಯೊಬ್ಬರು ಅರಿವು ಹೊಂದುವುದು ಅವಶ್ಯಕವಾಗಿದೆ. ತಂತ್ರಜ್ಞಾನ ಪರಿಣಾಮ ರಸಾಯನಶಾಸ್ತ್ರ ಅಧ್ಯಯನ ಬಹಳ ಬದಲಾಗಿದೆ. ಪರಿಸರ ಸಂರಕ್ಷಣೆ ಏನು ಮಾಡಬೇಕು ಎಂಬ ನಿಟ್ಟಿನಲ್ಲಿ ರಸಾಯನಶಾಸಜ್ಞರು ಯೋಚಿಸಬೇಕು ಎಂದರು.
ಸಾಧಕರಿಗೆ ಪ್ರಶಸ್ತಿ ಪ್ರದಾನಕಾರ್ಯಕ್ರಮದಲ್ಲಿ ಪ್ರೊ. ತೇಜರಾಜ್ ಅಮಿನಾಭಾಯಿ (ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕೃತ), ಪ್ರೊ. ಶೇಷನಾಥ ಭೋಸಲೆ (ಪ್ರೊ. ಡಬ್ಲ್ಯೂ. ಯು. ಮಲಿಕ್ ಸ್ಮಾರಕ ಪ್ರಶಸ್ತಿ), ಪ್ರೊ. ಚಂದ್ರಶರ್ಮಾ (ಡಾ. ಎಸ್.ಪಿ. ಹಿರೇಮಠ ಸ್ಮಾರಕ ಪ್ರಶಸ್ತಿ), ಡಾ. ನಿಲಂಜನ್ ದೇ (ಡಾ. ಅರವಿಂದ್ ಕುಮಾರ್ ಸ್ಮಾರಕ ಪ್ರಶಸ್ತಿ), ಪ್ರೊ. ರಾವ್ ಪ್ರಶಸ್ತಿ), ಪ್ರೊ. ರಾಜೇಶ್ ಕೆ.ವಿಸ್ತಾ (ಪ್ರೊ. ಎಸ್.ಟಿ. ನಂದಿಬೇವೂರ್ ಪ್ರಶಸ್ತಿ), ಡಾ. ಅರವಿಂದ್ ಸಿಂಗ್ ನೇಗಿ (ಡಾ. ಎಸ್.ಎಂ.ಎಲ್. ಗುಪ್ತಾ ಸ್ಮಾರಕ ಪ್ರಶಸ್ತಿ) ಮತ್ತು ಪ್ರೊ. ಪ್ರಜ್ಞೇಶ್ ಎನ್. ದವೆ (ಡಾ. ಪಿ.ಎನ್. ಶರ್ಮಾ ಸ್ಮಾರಕ ಪ್ರಶಸ್ತಿ) ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೆಎಲ್‌ಇ ತಾಂತ್ರಿಕ ವಿವಿ ಸಮಕುಲಾಧಿಪತಿ ಪ್ರೊ. ಅಶೋಕ ಶೆಟ್ಟರ, ಕುಲಪತಿ ಪ್ರೊ. ಪ್ರಕಾಶ ತೆವರಿ, ವಿಚಾರ ಸಂಕೀರ್ಣದ ಆಯೋಜಕ ತೇಜರಾಜ ಅಮಿನಭಾಯಿ, ಪ್ರೊ. ರಂಜೀತ್ ವರ್ಮಾ, ಪ್ರೊ. ರಾಜೇಶ ಡಿ., ಮನೋಜಕುಮಾರ ರಾವತ್ ಸೇರಿದಂತೆ ಹಲವರಿದ್ದರು.