ಕನ್ನಡಪ್ರಭ ವಾರ್ತೆ ಕೋಲಾರ
ನಗರದ ಜಿಪಂ ಸಭಾಂಗಣದಲ್ಲಿ ವಿಶ್ವ ಗ್ರಾಹಕರ ಹಕ್ಕುಗಳ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ವರ್ಷದ ಧ್ಯೇಯ ವಾಕ್ಯ ‘ಗ್ರಾಹಕರಿಗೆ ನ್ಯಾಯಯುತ ಮತ್ತು ಜವಾಬ್ದಾರಿಯುತ ಕೃತಿ ಬುದ್ದಿ ಮತ್ತೆ’ ತಿಳಿಸುವುದಾಗಿದೆ ಗ್ರಾಹಕರಿಗಾಗಿ ಇರುವ ಹಕ್ಕುಗಳ ಪರಿಚಯ ಮಾಡಿಕೊಟ್ಟು ಅವರಲ್ಲಿ ಜಾಗೃತಿ ಮೂಡಿಸುವ ಉದ್ದೇಶವಾಗಿದೆ ಎಂದರು.
ಬ್ಯಾಂಕಿಂಗ್ ನ್ಯೂನತೆಗೂ ಪರಿಹಾರಇತ್ತೀಚಿಗೆ ವಿವಿಧ ಸೇವೆಗಳಾದ ವೈದ್ಯಕೀಯ, ಶಿಕ್ಷಣ, ವಿಮೆ ಮತ್ತು ಬ್ಯಾಂಕಿಂಗ್ ನ್ಯೂನಗಳ ಬಗ್ಗೆಯೂ ಸಹ ಪರಿಹಾರ ಪಡೆಯಲು ಅವಕಾಶ ಇರುತ್ತದೆ. ಗ್ರಾಹಕರ ಹಕ್ಕುಗಳ ಅರಿವು ಮತ್ತು ಹಕ್ಕುಗಳ ರಕ್ಷಣೆ ಪಡೆಯಲು ವಿಶ್ವ ಗ್ರಾಹಕರ ಹಕ್ಕುಗಳ ದಿನ ಆಚರಿಸಲಾಗುತ್ತದೆ ಎಂದರು.
ಜಿಲ್ಲಾ ಮಟ್ಟದಲ್ಲಿ ಪರಿಹಾರ ಪಡೆಯಲು ಜಿಲ್ಲಾ ಗ್ರಾಹಕರ ವೇದಿಕೆ, ರಾಜ್ಯ ಮಟ್ಟದಲ್ಲಿ ರಾಜ್ಯ ಗ್ರಾಹಕರ ಆಯೋಗ ಮತ್ತು ರಾಷ್ಟ್ರ ಮಟ್ಟದಲ್ಲಿ ರಾಷ್ಟ್ರೀಯ ಗ್ರಾಹಕರ ಆಯೋಗವನ್ನು ಸ್ಥಾಪನೆ ಮಾಡಲಾಗಿದೆ. ಗ್ರಾಹಕರು ಹಿತ ರಕ್ಷಣಾ ಕಾಯ್ದೆ ಬಗ್ಗೆ ಎಲ್ಲರೂ ಅರಿವು, ಹೊಂದಬೇಕು ಮತ್ತು ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ತಪ್ಪದೆ ರಸೀದಿ ಪಡೆಯಿರಿ
ಅಧ್ಯಕ್ಷತೆ ವಹಿಸಿದ್ದ ಜಿಪಂ ಸಿಇಒ ಪದ್ಮಬಸವಂತಪ್ಪ ಮಾತನಾಡಿ, ಗ್ರಾಹಕ ಕಾಯಿದೆಯಡಿ ಯಾವುದೇ ವಸ್ತು ಖರೀದಿಸಿದರೆ ರಸೀದಿ ಕೇಳಿ ಪಡೆಯಿರಿ ಆಗ ಮಾತ್ರ ಸರ್ಕಾರಕ್ಕೆ ತೆರಿಗೆಯೂ ತಲುಪುತ್ತದೆ, ನಿಮಗೆ ಅನ್ಯಾಯವಾದರೆ ಪ್ರಶ್ನಿಸಿ ನ್ಯಾಯ ಪಡೆದುಕೊಳ್ಳಲು ದಾಖಲೆಯೂ ಸಿಗುತ್ತದೆ ಎಂದರು.ಜಿಲ್ಲಾ ಗ್ರಾಹಕರ ವ್ಯಾಜ್ಯಗಲ ಪರಿಹಾರ ಆಯೋಗದ ಅಧ್ಯಕ್ಷ ಸೈಯದ್ ಅನ್ಸರ್ ಕಲೀಂ, ವಕೀಲರ ಸಂಘದ ಅಧ್ಯಕ್ಷ ಎಂ.ಮುನೇಗೌಡ, ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಎಂ.ಪಿ.ಪ್ರಭುದೇವ, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ವ್ಯವಸ್ಥಾಪಕ ಎಸ್.ಪ್ರಸಾದ್, ಆಹಾರ ಇಲಾಖೆ ಉಪನಿರ್ದೇಶಕಿ ಎಸ್.ಲತಾ ಜಿಪಂ ಯೋಜನಾಧಿಕಾರಿ ರವಿಚಂದ್ರ ಇದ್ದರು.