ರಾಮನಗರ: ಜ್ಞಾನವಾಪಿ ವಿವಾದಕ್ಕೆ ಸಂಬಂಧಿಸಿದಂತೆ ವಾರಣಾಸಿ ನ್ಯಾಯಾಲಯದ ತೀರ್ಪು ಹಿನ್ನೆಲೆಯಲ್ಲಿ ಅಲ್ಲಿನ ನ್ಯಾಯಾಧೀಶರ ಬಗ್ಗೆ ಅವಹೇಳನಾಕಾರಿ ಪೋಸ್ಟ್ ಹಾಕಿರುವ ವಕೀಲನ ವಿರುದ್ಧ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಜಿಲ್ಲಾ ವಕೀಲರ ಸಂಘಕ್ಕೆ ದೂರು ನೀಡಿವೆ.
ಹಿಂದೂ ದೇವತೆಗಳು, ಬಿಜೆಪಿ ಹಾಗೂ ನ್ಯಾಯಾಧೀಶರ ಬಗ್ಗೆ ಅವಹೇಳನ ಮಾಡುವ ಪೋಸ್ಟ್ ಅನ್ನು ಫೇಸ್ ಬುಕ್ ಖಾತೆಯಲ್ಲಿ ಹಾಕಿಕೊಂಡಿರುವ ವಕೀಲ ಚಾಂದ್ ಪಾಷಾ ವಿರುದ್ಧ ಕ್ರಮ ಜರುಗಿಸುವಂತೆ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳ ಮುಖಂಡರು ವಕೀಲರ ಸಂಘದ ಅಧ್ಯಕ್ಷರಿಗೆ ಸಲ್ಲಿಸಿರುವ ದೂರಿನಲ್ಲಿ ಆಗ್ರಹಿಸಿದ್ದಾರೆ.ಫೆ.1ರಂದು 500 ವರ್ಷಗಳಿಂದ ಪಾದಪೂಜೆ ಮಾಡಿದರೂ ತನಗೆ ಒಂದು ಗುಡಿ ಕಟ್ಟಿಸಲಿಲ್ಲ ಎಂದು ರಾಮನ ಮೇಲೆ ಭೀಕರ ಯುದ್ಧವನ್ನೇ ಮಾಡುತ್ತಿರುವ ಪವನಸುತ ಹನುಮ ಹೇ ರಾಮ್ ಎಂದು ಬರೆದು ವಿಡಿಯೋ ತುಣಕನ್ನು ಫೇಸ್ ಬುಕ್ ಖಾತೆಯಲ್ಲಿ ಚಾಂದ್ ಪಾಷಾ ಹಂಚಿಕೊಂಡಿದ್ದಾರೆ.
ಆನಂತರ ಫೆ.2ರಂದು ಬಿಜೆಪಿಯ ಎಂಜಲು ಕಾಸಿಗೆ, ಕುರ್ಚಿಗೆ ನ್ಯಾಯ ದೇವತೆಯನ್ನು ದೇಶದ ಮುಂದೆ ಬೆತ್ತಲೆಗೊಳಿಸಿ ನ್ಯಾಯ ದೇವತೆಯ ಮಾನವನ್ನು ಮೂರು ಕಾಸಿಗೆ ಹರಾಜು ಹಾಕುವ ಉತ್ತರ ಪ್ರದೇಶ ರಾಜ್ಯದ ವಾರಣಾಸಿ ಜಿಲ್ಲಾ ನ್ಯಾಯಾಲಯದ ನಾಲಾಯಕ್ ಚಡ್ಡಿ ನ್ಯಾಯಧೀಶನಿಗೆ ಧಿಕ್ಕಾರವಿರಲಿ. ನಿವೃತ್ತಿಗೆ 1 ದಿನ ಮುಂಚೆ ತೀರ್ಪು ನೀಡಿದ.... ಎಂಬ ಕೆಟ್ಟ ಬರಹಗಳನ್ನು ಚಾಂದ್ ಪಾಷಾ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ವಕೀಲ ಚಾಂದ್ ಪಾಷಾ ನ್ಯಾಯಾಲಯದ ಆದೇಶವನ್ನೇ ಪ್ರಶ್ನಿಸಿ ತಮ್ಮ ಫೇಸ್ ಬುಕ್ ಮುಖಪುಟದಲ್ಲಿ ನ್ಯಾಯಾಧೀಶರ ಬಗ್ಗೆ ಕೆಟ್ಟದಾಗಿ ಚಿತ್ರಿಸಿರುವುದರಿಂದ ಸಾರ್ವಜನಿಕರಲ್ಲಿ ನ್ಯಾಯಾಂಗದ ಮೇಲೆ ಇರುವ ಗೌರುವ ಕಡಿಮೆಯಾಗುತ್ತದೆ. ಅದೇ ರೀತಿ ದಿನ ನಿತ್ಯ ಒಂದು ಧರ್ಮದ ಬಗ್ಗೆ ಈ ರೀತಿಯ ಕೆಟ್ಟ ಬರಹಗಳನ್ನು ತಮ್ಮ ಫೇಸ್ ಬುಕ್ ಮುಖಪುಟದಲ್ಲಿ ಹಾಕಿ ಒಂದು ಧರ್ಮದ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ ಸಮಾಜದಲ್ಲಿ ಒಡಕನ್ನುಂಟು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಚಾಂದ್ ಪಾಷಾ ವಕೀಲರ ಸಂಘದ ಸದಸ್ಯರಾಗಿದ್ದು, ತಾವು ಆ ವ್ಯಕ್ತಿಗೆ ಈ ರೀತಿ ಧಾರ್ಮಿಕ ಭಾವನೆಗಳಿಗೆ ಕೆಡಕುನ್ನುಂಟು ಮಾಡುವ ಬರಹಗಳನ್ನು ತಕ್ಷಣ ನಿಲ್ಲಿಸುವಂತೆ ಅದೇ ರೀತಿ ನ್ಯಾಯಾಂಗವನ್ನು ಅಣುಕಿಸುತ್ತಿರುವ ಚಾಂದ್ ಪಾಷಾರವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮುಖಂಡರು ಒತ್ತಾಯಿಸಿದ್ದಾರೆ.3ಕೆಆರ್ ಎಂಎನ್ 2.ಜೆಪಿಜಿಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳ ಮುಖಂಡರು ವಕೀಲ ಚಾಂದ್ ಪಾಷಾ ವಿರುದ್ಧ ವಕೀಲರ ಸಂಘಕ್ಕೆ ದೂರು ಸಲ್ಲಿಸಿದರು.