ಸವಣೂರು: ಶಿಗ್ಗಾಂವಿ ರಸ್ತೆಯಲ್ಲಿ ಸ್ಮಶಾನಕ್ಕೆ ಮೀಸಲಿರಿಸಿದ ಜಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆ ನೀಡಲಾಗಿದೆ ಎಂಬ ಗಂಭೀರ ಆರೋಪ ಬುಧವಾರ ಉಪವಿಭಾಗಾಧಿಕಾರಿ ಸಭಾಂಗಣದಲ್ಲಿ ಹಾವೇರಿ ಲೋಕಾಯುಕ್ತ ಉಪ ಅಧೀಕ್ಷಕರ ನೇತೃತ್ವದಲ್ಲಿ ನಡೆದ ಸಾರ್ವಜನಿಕರ ಕುಂದು-ಕೊರತೆಗಳ ಸಭೆಯಲ್ಲಿ ಸಾರ್ವಜನಿಕರಿಂದ ಕೇಳಿ ಬಂದಿತು.
ಅದೇ ಇಲಾಖೆಯ ಅಧಿಕಾರಿಯೊಬ್ಬರು ಲೋಕಾಯುಕ್ತರ ಪ್ರಶ್ನೆಗೆ ಮಾಹಿತಿ ಹಕ್ಕು ಏನು ಎಂಬುದು ಗೊತ್ತಿಲ್ಲ, ನಾಳೆಯಿಂದ ಕಲಿಯುತ್ತೇನೆ ಎಂದು ಹೇಳಿದ್ದು ಹಾಸ್ಯಾಸ್ಪದವಾಗಿತ್ತು. ಈ ವಿಷಯ ಸಾರ್ವಜನಿಕರ ಹಾಗೂ ಅಧಿಕಾರಿಗಳ ಆಕ್ರೋಶಕ್ಕೆ ಕಾರಣವಾಯಿತು. ಕಳಸೂರ ಗ್ರಾ.ಪಂ. ವ್ಯಾಪ್ತಿಯಲ್ಲಿ ಜೆಜೆಎಂ ಯೋಜನೆಯಡಿಯಲ್ಲಿ ಅಳವಡಿಸಲಾದ ಕೊಳಾಯಿ ಹಾಗೂ ಇತರ ಸಾಮಗ್ರಿಗಳು ಸಂಪೂರ್ಣ ಕಳಪೆ ಪ್ರಮಾಣದಾಗಿದ್ದರಿಂದ ನೀರು ಹರಿಸಿದಾಗ ಪೈಪಗಳು ಒಡೆದು ಹೋಗುತ್ತಿರುವ ಕಾರಣದಿಂದಾಗಿ ಕೊಳಾಯಿಗಳಲ್ಲಿ ಹನಿ ನೀರು ಬರುತ್ತಿಲ್ಲ. ಈ ಕುರಿತು ಸೂಕ್ತ ತನಿಖೆ ಕೈಗೊಂಡು ಕ್ರಮ ಕೈಗೊಳ್ಳಲು ಮನವಿ ಮಾಡಲಾಯಿತು. ಹಿರೇಮೂಗದೂರ ಗ್ರಾಮದ ವೃತ್ತದಲ್ಲಿ ಮನೆಗಳು ಹಾಗೂ ಕಿರಾಣಿ ಅಂಗಡಿಗಳು ನಿರ್ಮಿಸಿದ್ದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು 2021ರಲ್ಲಿ ಅವುಗಳನ್ನು ತೆರವುಗೊಳಿಸಲು ಆದೇಶ ನೀಡಿದರು ಸಹಿತ ಈವರೆಗೂ ಅವುಗಳನ್ನು ತೆರವುಗೊಳಿಗೊಳಿಸದೇ ಇರುವದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ಕುರಿತು ಲೋಕಾಯುಕ್ತ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಯಿತು.ಅಧಿಕಾರಿಗಳು ಮಾಹಿತಿ ಹಕ್ಕಿನಡಿಯಲ್ಲಿ ಕೇಳಿದ ವಿಷಯಕ್ಕೆ ಅನುಗುಣವಾಗಿ ಸ್ಪಷ್ಟ ಮಾಹಿತಿ ನೀಡುವದು ಅಧಿಕಾರಿಗಳ ಕರ್ತವ್ಯವಾಗಿದೆ ಅರೇಬರೇ ಉಡಾಫೆ ಉತ್ತರ ನೀಡಬೇಡಿ ತಮಗೆ ಗೊತ್ತು ಇರದೆ ಹೋದರೆ ಮಾಹಿತಿ ಹಕ್ಕು ಅಧಿನಿಯಮವನ್ನು ಓದಿಕೊಂಡು ಸಾರ್ವಜನಿಕರಿಗೆ ಸರ್ಮಪಕ ಉತ್ತರ ನೀಡಿ ಜನರಿಗೆ ಸಕಾಲಕ್ಕೆ ಸೇವೆಯನ್ನು ಒದಗಿಸುವದು ಅಧಿಕಾರಿಗಳ ಆದ್ಯ ಕರ್ತವ್ಯವಾಗಿದೆ. ಬಾಕಿ ಉಳಿದ ಕಡತಗಳನ್ನು ಕೂಡಲೇ ವಿಲೇವಾರಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಿ ಹೆಸ್ಕಾಂ ಇಲಾಖೆಯ ಇನ್ನೂ ಎಚ್ಚೆತುಕೊಂಡು ದೂರುಗಳು ಬಾರದ ರೀತಿಯಲ್ಲಿ ಸಾರ್ವಜನಿಕರಿಗೆ ರೈತರಿಗೆ ಸೇವೆಯನ್ನು ಒದಗಿಸುವುದು ಅವಶ್ಯವಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ತಂಬಾಕು ಉತ್ಪನ್ನಗಳ ಮಾರಾಟದ ಮೇಲೆ ನಿಗಾವಹಿಸಬೇಕು ಹಾಗೂ ಕಡಕೋಳ ಪ್ರಾಥಮಿಕ ಆರೋಗ್ಯ ಕೇಂದ್ರವು ಸದಾ ಮುಚ್ಚಿರುತ್ತದೆ ಎಂಬ ಆರೋಪ ಕೇಳಿಬಂದಿದೆ. ಆರೋಗ್ಯ ಅಧಿಕಾರಿಗಳು ಕೂಡಲೇ ಸಿಬ್ಬಂದಿಗಳನ್ನು ನೇಮಿಸಿ ಸಾರ್ವಜನಿಕರ ಆರೋಗ್ಯ ಕಾಪಾಡಬೇಕೆಂದು ಕಿವಿಮಾತನ್ನು ಹೇಳಿದರು. ಪುರಸಭೆಯ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಈ ಹಿಂದೆ ಗುತ್ತಿಗೆ ಆದಾರದ ಮೇಲೆ ಕಾರ್ಯನಿರ್ವಹಿಸಿದ ಕಾರ್ಮಿಕರಿಗೆ ಕೆಲಸ ನೀಡದೆ ಅನಧಿಕೃತವಾಗಿ 8 ಜನ ಅನನುಭವಿ ಕಾರ್ಮಿಕನ್ನು ನೇಮಿಸಿಕೊಂಡು ನಿಮ್ಮಗೆ ಮತ್ತೆ ಕೆಲಸ ಕೊಡುವದಾಗಿ ನಂಬಿಸಿ ವಂಚಿಸಿದಾರೆ. ಎಂದು ಪುರಸಭೆಯ ಗುತ್ತಿಗೆ ಕಾರ್ಮಿಕರು ಲೋಕಾಯುಕ್ತ ಉಪ ಅಧಿಕ್ಷಕರ ಎದುರು ತಮ್ಮ ಅಳಲನ್ನು ತೋಡಿಕೊಂಡರು. ಈ ವೇಳೆ ಪ್ರತಿಕ್ರೀಯಸಿದ ಅಧಿಕಾರಿಗಳು ನಿಮ್ಮ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಬಂದು ಹಾವೇರಿ ಕಛೇರಿಗೆ ಬಂದು ದೂರ ಸಲ್ಲಿಸದಲ್ಲಿ ಈ ಕುರಿತು ತನಿಖೆ ಕೈಗೊಳ್ಳಲು ಮೇಲ್ಧಾಕಾರಿಗಳಿಗೆ ಸೂಚಿಸಲಾಗುವದು ಎಂದು ತಿಳಿಸಿದರು.ಕಂದಾಯ ಇಲಾಖೆ ಒಳಪಡುವ ಕಂದಕದ ಜಾಗವನ್ನು ಅತಿಕ್ರಮಿಸಲಾಗಿದೆ. ಈ ಹಿಂದೆ ಉಪವಿಭಾಗಾಧಿಕಾರಿಯಾಗಿದ್ದ ಮೊಹ್ಮದ ರೋಷನ ಅವರು ಕಂದಕದ ಜಾಗೆಯನ್ನು ವಕ್ಫ್ ಆಸ್ತಿಗೆ ಸೇರಿಸಿದ್ದಾರೆ. ಸರ್ಕಾರದ ಜಗೆಯನ್ನು ಯಾವ ಮಾನದಂಡದ ಮೇಲೆ ವಕ್ಫ್ ಬೋರ್ಡ್ ಹೆಸರಿಗೆ ಮಾಡಲಾಗಿದೆ ಎಂಬುದನ್ನು ಸೂಕ್ತ ತನಿಖೆಯನ್ನು ಕೈಗೊಳ್ಳಬೇಕು, ಪುರಸಭೆಯವರು ಕಂದಕ ಜಾಗೆಯನ್ನು ಖಾಸಗಿ ವ್ಯಕ್ತಿಯ ಹೆಸರಿಗೆ ಪಹಣಿ ಮಾಡಿಕೊಟ್ಟಿರುವುದನ್ನು ತನಿಖೆ ಕೈಗೊಳ್ಳಬೇಕೆಂದು ಸಾರ್ವಜನಿಕರು ಮನವಿಯನ್ನು ಸಲ್ಲಿಸಿದರು.ಸಾರ್ವಜನಿಕರ ಅಹವಾಲುಗಳು 3, ಪೊಲೀಸ ಇಲಾಖೆ 1, ಶಿಕ್ಷಣ ಇಲಾಖೆ 1, ಹೆಸ್ಕಾಂ ಇಲಾಖೆ 2, ಆರ್‌ಡಬ್ಲೂಎಸ್ 1, ಆರೋಗ್ಯ 1, ಕಾರ್ಮಿಕ ಇಲಾಖೆ 1, ಅಬಕಾರಿ1, ನಾಡಕಚೇರಿ ಹತ್ತಿಮತ್ತೂರ 1, ಲೋಕೋಪಯೋಗಿ 2 ಸಲ್ಲಿಕೆಯಾದವು.
ಅಧ್ಯಕ್ಷತೆಯನ್ನು ತಹಸೀಲ್ದಾರ್ ರವಿಕುಮಾರ ಕೊರವರ, ಲೋಕಾಯುಕ್ತ ಪಿಐ ಪಿ.ವಿ. ಸಾಲಿಮಠ, ಸಿಬ್ಬಂದಿ ಸಿ.ಎಂ.ಬಾರ್ಕಿ, ಪ್ರಭಾರಿ ತಾ.ಪಂ. ಕಾರ್ಯನಿರ್ವಾಹಕ ಮಂಜುನಾಥ ಸಾಳುಂಕೆ ಸೇರಿದಂತೆ ತಾಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಕಂದಾಯ ಇಲಾಖೆ, ಪುರಸಭೆ, ಅಬಕಾರಿ, ಹೆಸ್ಕಾಂ ಇಲಾಖೆಗಳ ಕಾರ್ಯವೈಖರಿಗೆ ಬೇಸತ್ತ ಸಾಕಷ್ಟು ದೂರಗಳು ಕೇಳಿಬಂದಿದ್ದರಿಂದ ತಾಲೂಕು ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂಬ ಅಭಿಪ್ರಾಯ ಲೋಕಾಯುಕ್ತ ಉಪ ಅಧೀಕ್ಷಕರಿಂದ ವ್ಯಕ್ತವಾಯಿತು.