)
ಕನ್ನಡಪ್ರಭ ವಾರ್ತೆ ಬೆಂಗಳೂರು
ಹೆಡ್ ಪೊಲೀಸ್ ಕಾನ್‌ಸ್ಟೇಬಲ್ ವೃಷಬೇಂದ್ರ ಅವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ವಿವರ: ಜ. 25 ರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ವೃಷಬೇಂದ್ರ ಅವರು ಗಸ್ತು ತಿರುಗುತ್ತಿದ್ದ ವೇಳೆ ತಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಗ್ರಾಂ ವೀಕ್ಷಿಸುತ್ತಿರುವಾಗ ಮೂಡ್ ಪ್ಲಿಕ್ಸ್ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಯುವತಿಯೊಬ್ಬಳು ಸಹಾಯಕ್ಕಾಗಿ ಜೋರಾಗಿ ಕೂಗುತ್ತಿದ್ದ ವಿಡಿಯೋವನ್ನು ಗಮನಿಸಿದ್ದಾರೆ. ಅರೆ ಬೆತ್ತಲೆಯಾಗಿ ಕಾರಿನಲ್ಲಿದ್ದ ಅಪರಿಚಿತ ವ್ಯಕ್ತಿ ಆಕೆಯನ್ನು ಒಳಗೆ ಬಾ ಎಂದು ಕಿರುಕುಳ ನೀಡಿರುವುದು ಆ ವಿಡಿಯೋದಲ್ಲಿ ಸೆರೆಯಾಗಿದೆ. ಆ ಅಪರಿಚಿತ ವ್ಯಕ್ತಿಯು ಯುವತಿಗೆ ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ಆಕೆಯನ್ನು ಕಾರಿನ ಒಳಗಡೆ ಬಾ ಎಂದು ಕರೆದಿದ್ದು, ಈ ಬಗ್ಗೆ ವಿಡಿಯೋದಲ್ಲಿ ಯುವತಿಯೇ ಆರೋಪಿಸಿದ್ದಾಳೆ. ಆದ್ದರಿಂದ ಅಪರಿಚಿತ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಹೆಡ್ ಪೊಲೀಸ್ ಕಾನ್‌ಸ್ಟೇಬಲ್ ವೃಷಬೇಂದ್ರ ಉಲ್ಲೇಖಿಸಿದ್ದಾರೆ.ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ತ್ರಿಪುರ ಮೂಲದ ಯುವತಿಯನ್ನು ಸಂಪರ್ಕಿಸಿ ಘಟನೆಯ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದಾರೆ. ಆದರೆ ಆಕೆ ವಿಡಿಯೋವನ್ನು ಡಿಲೀಟ್ ಮಾಡಿದ್ದು, ತನಿಖೆಗೆ ಸಹಕರಿಸಿಲ್ಲ. ಜತೆಗೆ ಘಟನಾ ಸ್ಥಳದಲ್ಲಿ ಯಾವುದೇ ಸಿಸಿ ಕ್ಯಾಮೆರಗಳು ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.