ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ಕಾಳಿಕಾಂಬಾ ದೇವಸ್ಥಾನದ ರಸ್ತೆ ಸಂಪೂರ್ಣವಾಗಿ ಹಾಳಾಗಿ ಐದಾರು ವರ್ಷಗಳೇ ಕಳೆದಿದ್ದರೂ ಸರಿಪಡಿಸದ ಪುರಸಭೆಯ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನ ಹೊರಹಾಕಿರುವ ನಾಗರಿಕರು, ಪುರಸಭೆ ಕಚೇರಿಗೆ ಆಗಮಿಸಿ ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಿ ತಮ್ಮ ಅಳಲನ್ನು ತೋಡಿಕೊಂಡರು. ಮುಖ್ಯಾಧಿಕಾರಿ ಶಿವಶಂಕರ್ ಮನವಿ ಸ್ವೀಕರಿಸಿ ಮಾತನಾಡಿ, ಸದ್ಯ ಪುರಸಭೆಯಲ್ಲಿ ಅನುದಾನದ ಕೊರತೆ ಇರುವುದರಿಂದ ತಕ್ಷಣವೇ ಹೊಸ ರಸ್ತೆ ನಿರ್ಮಿಸಲು ತೊಡಕಾಗಿದೆ. ನಾಗರಿಕರ ಹಾಗೂ ವಾಹನ ಸವಾರರ ಹಿತದೃಷ್ಟಿಯಿಂದ ತಕ್ಷಣವೇ ತಾತ್ಕಾಲಿಕವಾಗಿ ರಸ್ತೆ ರಿಪೇರಿ ಮಾಡಿಸಿಲಾಗುವುದು. ಮುಂದಿನ ಹಂತದಲ್ಲಿ ಸರ್ಕಾರದ ಅನುದಾನ ಬಂದ ತಕ್ಷಣವೇ ನೂತನ ರಸ್ತೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.
ಪುರಸಭೆ ಮಾಜಿ ಅಧ್ಯಕ್ಷ ಎಚ್. ಕೆ. ಪ್ರಸನ್ನ, ಮುತ್ತುರಾಜ್, ಮೆಡಿಕಲ್ ರಾಘವೇಂದ್ರ, ಗುತ್ತಿಗೆದಾರ ಮುತ್ತುರಾಜ್, ರೋಹಿತ್, ಮಂಜುನಾಥ ಶೆಟ್ಟಿ, ನಾಗೇಂದ್ರ, ವೆಂಕಟೇಶ್ ಬಾಬು, ಪತ್ರಕರ್ತ ಸುದರ್ಶನ್, ಇತರರು ಇದ್ದರು.