ಮೃದು ಕೌಶಲ ಉದ್ಯೋಗಾವಕಾಶಕ್ಕೆ ಪೂರಕ

KannadaprabhaNewsNetwork |  
Published : Nov 08, 2025, 01:03 AM IST
ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ಲಯನ್ಸ್‌ ಸಂಸ್ಥೆ ಹಾಗೂ ಬೆಂಗಳೂರಿನ ಲಯನ್ಸ್‌ ಕ್ಲಬ್‌ ಆಫ್‌ ಸೋಮೇಶ್ವರಪುರ ಸಹಯೋಗದಲ್ಲಿ ನಡೆದ ಮೃದುಕೌಶಲ ತರಬೇತಿ ಸಮಾರೋಪ ಹಾಗೂ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ಇಲ್ಲಿನ ಲಯನ್ಸ್‌ ಕ್ಲಬ್‌ ಆಫ್‌ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ ಹಾಗೂ ಬೆಂಗಳೂರಿನ ಲಯನ್ಸ್‌ ಕ್ಲಬ್‌ ಆಫ್‌ ಸೋಮೇಶ್ವರಪುರ ಸಹಯೋಗದಲ್ಲಿ ಕಳೆದ 3 ತಿಂಗಳುಗಳಿಂದ ನಡೆದ ಮೃದುಕೌಶಲ ತರಬೇತಿ ಸಮಾರೋಪ ಹಾಗೂ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಶುಕ್ರವಾರ ಎಸ್‌ಡಿಯುಐಎಂ ಸಭಾಂಗಣದಲ್ಲಿ ನಡೆಯಿತು.

ದೊಡ್ಡಬಳ್ಳಾಪುರ: ಇಲ್ಲಿನ ಲಯನ್ಸ್‌ ಕ್ಲಬ್‌ ಆಫ್‌ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ ಹಾಗೂ ಬೆಂಗಳೂರಿನ ಲಯನ್ಸ್‌ ಕ್ಲಬ್‌ ಆಫ್‌ ಸೋಮೇಶ್ವರಪುರ ಸಹಯೋಗದಲ್ಲಿ ಕಳೆದ 3 ತಿಂಗಳುಗಳಿಂದ ನಡೆದ ಮೃದುಕೌಶಲ ತರಬೇತಿ ಸಮಾರೋಪ ಹಾಗೂ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಶುಕ್ರವಾರ ಎಸ್‌ಡಿಯುಐಎಂ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಡಾ.ಎಸ್.ನಾಗರಾಜರಾವ್‌ ಮಾತನಾಡಿ, ವಿಶೇಷವಾಗಿ 10ನೇ ತರಗತಿ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ. 13 ವಾರಗಳ ನಿರಂತರ ಮೃದು ಕೌಶಲ ತರಬೇತಿ ನೀಡಲಾಗಿದ್ದು, ಉದ್ಯೋಗಾವಕಾಶಗಳಿಗೆ ಪೂರಕವಾದ ವ್ಯಕ್ತಿಗತ ಬೆಳವಣಿಗೆ, ಭಾಷೆ, ನಡೆವಳಿಕೆ, ಸಾಮಾಜಿಕ ಜ್ಞಾನ ಹಾಗೂ ಸಂವಹನ ಕೌಶಲಗಳನ್ನು ಹೇಳಿಕೊಡಲಾಗಿದೆ ಎಂದರು.

ಯಾವುದೇ ಉದ್ಯೋಗಾವಕಾಶಗಳು ಉತ್ತಮ ಮೃದು ಕೌಶಲ್ಯ ಮತ್ತು ಸಮಯೋಚಿತ ಅಭಿವ್ಯಕ್ತಿ ಹೊಂದಿರುವವರಿಗೆ ಸುಲಭವಾಗಿ ದೊರೆಯುತ್ತವೆ. ಹೀಗಾಗಿ ಪ್ರತಿಯೊಬ್ಬರು ವಿಷಯ ಜ್ಞಾನದ ಜೊತೆಗೆ ಸಾಮಾಜಿಕ ಜ್ಞಾನವನ್ನೂ ಹೊಂದಬೇಕು ಎಂದು ತಿಳಿಸಿದರು.

ಲಯನ್ಸ್‌ ಜಿಲ್ಲೆ 317ಇ ಉಪ ರಾಜ್ಯಪಾಲ ಪ್ರತಾಪ್‌ ಯಾದವ್‌, 317ಎಫ್‌ ಉಪ ರಾಜ್ಯಪಾಲ ಎ.ವಿಜಯ್‌ಕುಮಾರ್‌, ಜಿಇಟಿ ಸಂಯೋಜಕ ಎಂ.ಆರ್‌.ಶ್ರೀನಿವಾಸ್‌ ಮಾತನಾಡಿದರು.

ಲಯನ್ಸ್ ಕ್ಲಬ್‌ ಆಫ್‌ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ನ ಅಧ್ಯಕ್ಷ ಪ್ರೊ.ರವಿಕಿರಣ್ ಕೆ.ಆರ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂತೀಯ ಅಧ್ಯಕ್ಷ ಎಲ್.ಎನ್.ಪ್ರದೀಪ್‌ಕುಮಾರ್, ವಲಯ ಅಧ್ಯಕ್ಷ ಜೆ.ಆರ್.ರಾಕೇಶ್, ಸೋಮೇಶ್ವರಪುರ ಲಯನ್ಸ್‌ ಸಂಸ್ಥೆಯ ಉಪಾಧ್ಯಕ್ಷ ಶಿವಾನಂದ್, ಜಾಲಪ್ಪ ಲಯನ್ಸ್ ಸಂಸ್ಥೆ ಖಜಾಂಚಿ ಎಲ್.ಎನ್.ನಾಗರಾಜ್‌, ಉಪಾಧ್ಯಕ್ಷ ಬಾಬುಸಾಬಿ, ಕ್ವೆಸ್ಟ್‌ ಸಂಯೋಜಕ ಜಿಯಾವುಲ್ಲಾ ಖಾನ್ ಮತ್ತಿತರರು ಭಾಗವಹಿಸಿದ್ದರು.

ಶ್ರೀದೇವರಾಜ ಅರಸ್‌ ಪದವಿ ಪೂರ್ವ ಕಾಲೇಜು, ಶ್ರೀ ದೇವರಾಜ ಅರಸ್‌ ಅಂತಾರಾಷ್ಟ್ರೀಯ ವಸತಿ ಪ್ರೌಢಶಾಲೆಗಳಲ್ಲಿ ಮೃದು ಕೌಶಲ ತರಬೇತಿ ಪಡೆದ ವಿದ್ಯಾರ್ಥಿಗಳು, ಮಾರ್ಗದರ್ಶನ ನೀಡಿದ ಬೋದಕರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

7ಕೆಡಿಬಿಪಿ3-

ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ಲಯನ್ಸ್‌ ಸಂಸ್ಥೆ ಹಾಗೂ ಬೆಂಗಳೂರಿನ ಲಯನ್ಸ್‌ ಕ್ಲಬ್‌ ಆಫ್‌ ಸೋಮೇಶ್ವರಪುರ ಸಹಯೋಗದಲ್ಲಿ ನಡೆದ ಮೃದುಕೌಶಲ ತರಬೇತಿ ಸಮಾರೋಪ ಹಾಗೂ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೋರಾಟಗಾರರ ಮೇಲೆ ಹಲ್ಲೆ, ಕೆಂಗನಾಳ ಕಿಡಿ
ಬಿಡಿಸಿಸಿ ಬ್ಯಾಂಕ್ ಯುನಿಯನ್‌ ಅಧ್ಯಕ್ಷನ ಮೇಲೆ ಹಲ್ಲೆ