ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಸ್ಪತ್ರೆಗೆ ಬೇಕಾದ ಅಗತ್ಯ ಬೇಡಿಕೆ, ಬದಲಾವಣೆಗಳ ಬಗ್ಗೆ ಚರ್ಚೆ ನಡೆಸಿ ಹಲವು ನಿರ್ಧಾರ ಕೈಗಳ್ಳಲಾಗಿದೆ ಎಂದರು.
ಆಸ್ಪತ್ರೆ ಒಳ ಆವರಣದಲ್ಲಿ ಟ್ರಾನ್ಸ್ ಫಾರ್ಮರ್ ಬದಲಾವಣೆ ಮಾಡಿ ಪಾರ್ಕಿಂಗ್ ನಿರ್ಮಾಣ ಹಾಗೂ ಸಿಸಿ ಕ್ಯಾಮೆರಾ ಅಳವಡಿಕೆ ಮಾಡುವುದು, ರೋಗಿಗಳ ಸಂಬಂಧಿಸಿದ ವಾಹನಗಳು ಮಾತ್ರ ಆಸ್ಪತ್ರೆ ಒಳಗೆ ಪ್ರವೇಶ ಮಾಡುವುದು, ಖಾಸಗಿ ವಾಹನಗಳು ಕಂಡು ಬಂದರೇ ಸೀಜ್ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.ಆಸ್ಪತ್ರೆ ಮುಂಭಾಗ ಆಟೋ ನಿಲ್ದಾಣ ಇರುವುದರಿಂದ ತುರ್ತು ಚಿಕಿತ್ಸಾ ವಾಹನಗಳು ಸಂಚರಿಸಲು ಅಡೆತಡೆಗಳು ಉಂಟಾಗುತ್ತದೆ. ತಕ್ಷಣದಲ್ಲಿಯೇ ಆಟೋ ನಿಲ್ದಾಣವನ್ನು ಸ್ಥಳಾಂತರ ಮಾಡಿಸುವುದರ ಬಗ್ಗೆ ಆಡಳಿತಾಧಿಕಾರಿಗಳು ಕ್ರಮ ವಹಿಸಬೇಕೆಂದು ಸೂಚನೆ ನೀಡಲಾಗಿದೆ ಎಂದರು.
ಈ ವೇಳೆ ಉಪವಿಭಾಗಧಿಕಾರಿ ಎಂ.ಶಿವಮೂರ್ತಿ, ತಹಸೀಲ್ದಾರ್ ಡಾ.ಎಸ್.ವಿ ಲೊಕೇಶ್, ತಾಪಂ ಇಒ ಎಚ್.ಜಿ ಶ್ರೀನಿವಾಸ್, ತಾಲೂಕು ವೈದ್ಯಾಧಿಕಾರಿ ಪಿ.ವೀರಭದ್ರಪ್ಪ, ಆಡಳಿತಾಧಿಕಾರಿ ಎಂಡಿ ಡಾ.ಸಂಜಯ್, ಸೆಸ್ಕಾಂ ಎಇಇ ಪ್ರೇಮ್‌ಕುಮಾರ್ ಸೇರಿದಂತೆ ಇತರರು ಇದ್ದರು.