ಬೆಳೆ ಕಟಾವು ಪ್ರಯೋಗ ವಾರದೊಳಗೆ ಮುಗಿಸಿ: ಡಿಸಿ

KannadaprabhaNewsNetwork | Published : Oct 8, 2023 12:01 AM

ಸಾರಾಂಶ

ಬೆಳೆ ಕಟಾವು ಪ್ರಯೋಗ ವಾರದೊಳಗೆ ಮುಗಿಸಿ ಡಿಸಿ
ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಸೂಚನೆ ಕನ್ನಡಪ್ರಭ ವಾರ್ತೆ ಕಲಬುರಗಿ ಕರ್ನಾಟಕ ರೈತಾ ಸುರಕ್ಷಾ ಪ್ರಧಾನ ಮಂತ್ರಿ ಭೀಮಾ ಫಸಲ್ ಭಿಮಾ (ವಿಮಾ) ಯೋಜನೆ ಅಡಿಯಲ್ಲಿ ಬೆಳೆ ಕಟಾವು ಪ್ರಯೋಗಗಳು ಕುರಿತು ತರಬೇತಿ ಈಗಾಗಲೇ ನೀಡಲಾಗಿದೆ. ಜೇವರ್ಗಿ, ಶಹಾಬಾದ, ಯಡ್ರಾಮಿ ಬೆಳೆ ಕಟಾವು ಪ್ರಯೋಗಗಳು ಕಡಿಮೆ ಪ್ರಮಾಣದಲ್ಲಿ ಕೈಗೊಂಡಿರುವುದರಿಂದ ಒಂದು ವಾರದೊಳಗೆ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಬಿ ಫೌಜಿಯ್ ತರನ್ನುಮ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ವಿಡಿಯೋ ಕಾನ್ಪೆರನ್ಸ್ ಹಾಲ್‍ನಲ್ಲಿ ಶನಿವಾರ ಕಲಬುರಗಿ ರವರ ಕೃಷಿ ಅಂಕಿ-ಅಂಶ ಹಾಗೂ ಜನನ-ಮರಣ ನೋಂದಣಿಯ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಒಟ್ಟು 3510 ಪ್ರಯೋಗಗಳು ಹಂಚಿಕೆಯಾಗಿದೆ. ಅದರಲ್ಲಿ ನಮೂನೆ-1 ರಲ್ಲಿ 50 ಪ್ರತಿಶತ ಕ್ಕಿಂತ ಕಡಿಮೆಯಾಗಿದೆ ಎಂದರು. 2022-23 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಬೆಳೆ ಕಟಾವು ಪ್ರಯೋಗಗಳಿಗೆ ಸಂಬಂಧಿಸಿದಂತೆ ಬಿಡುಗಡೆಯಾದ ಹಾಗೂ ಪಾವತಿಸಲಾದ ಫೋತ್ಸಾಹಧನದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು. ಬೆಳೆ ಕಟಾವು ಪ್ರಯೋಗಗಳಿಗೆ ನಮೂನೆ-2ನ್ನು ಕೈಗೊಳ್ಳುವಾಗ ನಿಯಾಮನುಸಾರ ಕೈಗೊಳ್ಳವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 5 ವರ್ಷದ ಬೆಳೆಗಳ ಮಾಹಿತಿ ಬೆಳೆ ಸಮೀಕ್ಷೆ ತಂತ್ರಾಂಶದ ಮೂಲಕ ನಿಖರವಾದ ಮಾಹಿತಿ ವರದಿಯನ್ನು ಪಡೆಯಲಾಗುತ್ತಿದೆ. ಬೆಳೆ ಸಮೀಕ್ಷೆ ಕೈಗೊಳ್ಳುವಾಗ ಯಾವುದೇ ರೀತಿಯ ಬೆಳೆ ಬಿಟ್ಟು ಹೋಗದಂತೆ, ಎಲ್ಲಾ ಬೆಳೆಗಳ ಸಮೀಕ್ಷೆಯನ್ನು ಕಡ್ಡಾಯವಾಗಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ನೀತಿ ಆಯೋಗದ ಸಂಯೋಜಿತ ನೀರು ನಿರ್ವಹಣೆ ಸೂಚ್ಯಂಕ ಕುರಿತು ಬೆಳೆ ಕ್ಷೇತ್ರ ಮರು ಹೊಂದಾಣಿಕೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. 2023-24 ನೇ ಸಾಲಿನಿಂದ ಬೆಳೆ ಕಟಾವು ಪ್ರಯೋಗಗಳು ಗೌರವಧನ 200 ರು.ಗಳಿಂದ 500/- ರು.ಗಳಿಗೆ ಹೆಚ್ಚಳವಾಗಿರುವ ಕುರಿತು ಹಾಗೂ ನಮೂನೆ -2ನ್ನು ನಿಯಮಾನುಸಾರ ಕೈಗೊಳ್ಳುವ ಕುರಿತು ಸವಿಸ್ತಾರವಾಗಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಪಿಟಿಪಿ ಮೂಲಕ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಯುಸೂಫ್ ಅಲಿ ಸಭೆಯಲ್ಲಿ ವಿವವರಿಸಿದರು. ಜನನ ಮತ್ತು ಮರಣ ಶಾಖೆ: ಎಲ್ಲಾ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳಿಗೆ ಜನನ ಮತ್ತು ಮರಣ ನೋಂದಣಿ ವಿಳಂಬವಾಗದಂತೆ ಹಾಗೂ ಇ-ಜನ್ಮ ತಂತ್ರಾಂಶದಲ್ಲಿ ಯಾವುದೇ ನೋಂದಣಿ ಕೈಬಿಟ್ಟು ಹೋಗದಂತೆ ಸೂಚಿಸಿದರು. ಆನ್ಯರಿಗೆ ಅರಿವು ಮೂಡಿಸಲು ಎಲ್ಲಾ ನೋಂದಣಿ ಘಟಕಗಳಲ್ಲಿ ಜನನ ಮರಣ ಘಟಕ ಅಳವಡಿಸಬೇಕು. ಎಲ್ಲಾ ಜನರ ಮರಣ ನೋಂದಣಾಧಿಕಾರಿಗಳಿಗೆ ತರಬೇತಿ ನೀಡಬೇಕು. 21 ದಿವಸದೊಳಗೆ ಕಡ್ಡಾಯವಾಗಿ ನೋಂದಣಿ ಮಾಡಲು ಹಾಗೂ ತಡ ನೋಂದಣಿ ಆಗಲಾರದೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ ಪಟೇಲ್, ಸಹಾಯಕ ಆಯುಕ್ತೆ ಮಮತಾ ಕುಮಾರಿ, ಗ್ರೇಡ್ -1 ನಾಗಮ್ಮ ಕಟ್ಟಿಮನಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನವೀನ ಯು ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸಭೆಯಲ್ಲಿ ಭಾಗವಹಿಸಿದ್ದರು. ಫೋಟೋ- ಜಿಲ್ಲಾಡಳಿತ

Share this article