- ಬಿಎಲ್‌ಒಗಳಿಂದ ಮನೆ ಮನೆ ಭೇಟಿ, ಪ್ರಗತಿ ಪರಿಶೀಲನೆ: ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಮಾಹಿತಿ
ಕನ್ನಡಪ್ರಭ ವಾರ್ತೆ ದಾವಣಗೆರೆ
ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ದಾವಣಗೆರೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ ಕಾರ್ಯಕ್ರಮವು ಯಶಸ್ವಿಯಾಗಿ ಜರುಗುತ್ತಿದೆ. ಜೂನ್ 30ರಿಂದಲೇ ಎಲ್ಲ ಮತಗಟ್ಟೆಗಳ ಬೂತ್‌ಮಟ್ಟದ ಅಧಿಕಾರಿಗಳು ಎನುಮರೇಷನ್ ನಮೂನೆಗಳೊಂದಿಗೆ ಮತದಾರರ ಮನೆ ಮನೆಗೆ ಭೇಟಿ ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ.ಜಿಲ್ಲೆಯಲ್ಲಿ ಜೂನ್ 16, 2026 ರವರೆಗೆ ಒಟ್ಟು 14,99,282 ಮತದಾರರಿದ್ದು, ಇವರಿಗಾಗಿ ಎನುಮರೇಷನ್ ನಮೂನೆಗಳನ್ನು ಮುದ್ರಿಸಿ ಸಂಬAಧಪಟ್ಟ ಬಿಎಲ್‌ಒಗಳಿಗೆ ಒದಗಿಸಲಾಗಿದೆ. ಈ ನಮೂನೆಗಳ ಸಂಗ್ರಹಣೆ ಹಾಗೂ ಗಣಕೀಕರಣದ ಅವಧಿಯು ದಿನಾಂಕ: 30-06-2026 ರಿಂದ 29-07-2026 ರವರೆಗೆ ಇರಲಿದೆ.
ಜಿಲ್ಲೆಯ ಒಟ್ಟು 7 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಎಲ್‌ಒಗಳು ಭರದಿಂದ ಕಾರ್ಯನಿರ್ವಹಿಸುತ್ತಿದ್ದು, ಕ್ಷೇತ್ರವಾರು ಪ್ರಗತಿ ವಿವರ ಇಂತಿದೆ:ಜಗಳೂರು (103): ಈ ಕ್ಷೇತ್ರದಲ್ಲಿ ಒಟ್ಟು 2,00,836 ಮತದಾರರಿದ್ದು, ಬಿಎಲ್‌ಒ ರವರು 1,79,403 ಎನುಮರೇಷನ್ ನಮೂನೆಗಳನ್ನು ವಿತರಿಸಿದ್ದಾರೆ. ಈ ಪೈಕಿ 14,122 ನಮೂನೆಗಳನ್ನು ಈಗಾಗಲೇ ಗಣಕೀಕರಿಸಲಾಗಿದೆ.
ದಾವಣಗೆರೆ ಉತ್ತರ (106): ಒಟ್ಟು 2,58,718 ಮತದಾರರಿದ್ದು, 2,29,516 ನಮೂನೆಗಳನ್ನು ವಿತರಿಸಲಾಗಿದೆ ಮತ್ತು 5,578 ನಮೂನೆಗಳನ್ನು ಗಣಕೀಕರಣಗೊಳಿಸಲಾಗಿದೆ.
ಮಾಯಕೊಂಡ (108): ಒಟ್ಟು 1,97,048 ಮತದಾರರಿದ್ದು, 1,95,461 ನಮೂನೆಗಳನ್ನು ವಿತರಿಸಲಾಗಿದೆ ಹಾಗೂ ಅತ್ಯಧಿಕ ಅಂದರೆ 33,445 ನಮೂನೆಗಳನ್ನು ಗಣಕೀಕರಿಸಲಾಗಿದೆ.
ಹೊನ್ನಾಳಿ (110): ಒಟ್ಟು 2,00,033 ಮತದಾರರಿದ್ದು, 1,74,447 ನಮೂನೆಗಳನ್ನು ವಿತರಿಸಲಾಗಿದೆ ಮತ್ತು 7,770 ನಮೂನೆಗಳನ್ನು ಗಣಕೀಕರಿಸಲಾಗಿದೆ.
ಜಿಲ್ಲಾದ್ಯಂತ ಒಟ್ಟು 13,44,124 ನಮೂನೆಗಳನ್ನು ಬಿಎಲ್‌ಒಗಳು ವಿತರಿಸಿದ್ದು, ಈ ಪೈಕಿ ಒಟ್ಟು 1,20,294 ನಮೂನೆಗಳ ಗಣಕೀಕರಣ ಪ್ರಗತಿಯಲ್ಲಿದೆ.
ಜುಲೈ 1ರ ವರದಿಯ ಅನ್ವಯ, ಜಿಲ್ಲೆಯಲ್ಲಿ ಮನೆ ಮನೆ ಸಮೀಕ್ಷೆ ಸಂದರ್ಭದಲ್ಲಿ ಸ್ಥಳಾಂತರ, ವಲಸೆ, ಮರಣ ಹಾಗೂ ದ್ವಿಪ್ರತಿ ಮತದಾರರನ್ನು ಗುರುತಿಸುವ ಕಾರ್ಯವೂ ಗಣನೀಯವಾಗಿ ನಡೆದಿದೆ. ಜಿಲ್ಲಾದ್ಯಂತ ಒಟ್ಟು 1,307 ಇಂತಹ ಪ್ರಕರಣಗಳನ್ನು ಗುರುತಿಸಲಾಗಿದ್ದು, ಈ ಪೈಕಿ 19 ಜನ ಗೈರಾಗಿದ್ದಾರೆ/ ಮಾಹಿತಿ ಸಂಗ್ರಹವಾಗಿಲ್ಲ. 490 ಮತದಾರರು ಶಾಶ್ವತವಾಗಿ ವಲಸೆ ಹೋಗಿದ್ದಾರೆ, 576 ಮತದಾರರು ಮರಣ ಹೊಂದಿದ್ದಾರೆ, 208 ದ್ವಿಪ್ರತಿ ನಮೂನೆಗಳು ಹಾಗೂ 14 ಇತರೆ ಪ್ರಕರಣಗಳು ಕಂಡುಬಂದಿವೆ.
ಕ್ಷೇತ್ರವಾರು ವಿವರಗಳು:ಜಗಳೂರು: ಒಟ್ಟು 86 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ ಶಾಶ್ವತ ವಲಸೆ 25, ಮರಣ 25, ದ್ವಿಪ್ರತಿ 34 ಹಾಗೂ ಇತರೆ 2 ಪ್ರಕರಣಗಳು ಸೇರಿವೆ.
ಹರಿಹರ: ಒಟ್ಟು 118 ಪ್ರಕರಣಗಳಲ್ಲಿ 2 ಸಂಗ್ರಹವಾಗದ, 40 ಶಾಶ್ವತ ವಲಸೆ, 54 ಮರಣ, 20 ದ್ವಿಪ್ರತಿ ಮತ್ತು 2 ಇತರೆ ಪ್ರಕರಣಗಳು ಸೇರಿವೆ.ದಾವಣಗೆರೆ ಉತ್ತರ: ಒಟ್ಟು 211 ಪ್ರಕರಣಗಳು ವರದಿಯಾಗಿದ್ದು, 4 ಸಂಗ್ರಹವಾಗದ, 83 ಶಾಶ್ವತ ವಲಸೆ, 96 ಮರಣ ಹಾಗೂ 28 ದ್ವಿಪ್ರತಿ ಪ್ರಕರಣಗಳು ಕಂಡುಬಂದಿವೆ.
ದಾವಣಗೆರೆ ದಕ್ಷಿಣ: ಒಟ್ಟು 119 ಪ್ರಕರಣಗಳಲ್ಲಿ 1 ಸಂಗ್ರಹವಾಗದ, 62 ಶಾಶ್ವತ ವಲಸೆ, 34 ಮರಣ, 20 ದ್ವಿಪ್ರತಿ ಹಾಗೂ 2 ಇತರೆ ಪ್ರಕರಣಗಳಿವೆ.ಮಾಯಕೊಂಡ: ಒಟ್ಟು 261 ಪ್ರಕರಣಗಳು ದಾಖಲಾಗಿದ್ದು, 3 ಸಂಗ್ರಹವಾಗದ, 91 ಶಾಶ್ವತ ವಲಸೆ, 133 ಮರಣ, 33 ದ್ವಿಪ್ರತಿ ಹಾಗೂ 1 ಇತರೆ ಪ್ರಕರಣ ಸೇರಿದೆ.
ಚನ್ನಗಿರಿ: ಜಿಲ್ಲೆಯಲ್ಲೇ ಅತಿ ಹೆಚ್ಚು ಅಂದರೆ ಒಟ್ಟು 346 ಪ್ರಕರಣಗಳು ವರದಿಯಾಗಿದ್ದು, 8 ಸಂಗ್ರಹವಾಗದ, 125 ಶಾಶ್ವತ ವಲಸೆ, 148 ಮರಣ, 58 ದ್ವಿಪ್ರತಿ ಮತ್ತು 7 ಇತರೆ ಪ್ರಕರಣಗಳು ಒಳಗೊಂಡಿವೆ.ಹೊನ್ನಾಳಿ: ಒಟ್ಟು 166 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 1 ಸಂಗ್ರಹವಾಗದ, 64 ಶಾಶ್ವತ ವಲಸೆ, 86 ಮರಣ ಹಾಗೂ 15 ದ್ವಿಪ್ರತಿ ಪ್ರಕರಣಗಳು ಸೇರಿವೆ.
ಸಾರ್ವಜನಿಕರು ಹಾಗೂ ಮತದಾರರು ತಮ್ಮ ಮನೆಗೆ ಭೇಟಿ ನೀಡುವ ಬಿಎಲ್‌ಒಗಳಿಗೆ ನಿಖರ ಮಾಹಿತಿ ನೀಡಿ, ಮತದಾರರ ಪಟ್ಟಿಯ ಈ ಸಮಗ್ರ ಪರಿಷ್ಕರಣಾ ಕಾರ್ಯ ಯಶಸ್ವಿಗೊಳಿಸಲು ಸಹಕರಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.- - -
-5ಕೆಡಿವಿಜಿ37: ಜಿ.ಎಂ. ಗಂಗಾಧರ ಸ್ವಾಮಿ