ಕನ್ನಡಪ್ರಭ ವಾರ್ತೆ ಮೈಸೂರು
ಭಾರತೀಯ ಕ್ಲಫ್ಟ್ ತುಟಿ ಅಂಗುಳ ಮತ್ತು ಕ್ರೇನಿಯೊಫೇಶಿಯಲ್ ಅನೋಮಲಿಗಳ ಸಂಘದಿಂದ ಇಂಡೋಕ್ಲೆಫ್ಟ್ಕಾನ್ 2026ರ 24ನೇ ವಾರ್ಷಿಕ ಸಮ್ಮೇಳನವನ್ನು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನೈಮಿಷಂ ಕ್ಯಾಂಪಸ್‌ನ ನಾಲೆಡ್ಜ್ ಪಾರ್ಕ್ ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಅರಿವಿನ ಕೊರತೆ ಮತ್ತು ಸಮಯೋಚಿತ ಚಿಕಿತ್ಸೆ ನೀಡದೆ ಇರುವುದರಿಂದ ಸೀಳು ತುಟಿ ಮತ್ತು ಸೀಳು ಅಂಗುಳ ಸಮಸ್ಯೆ ಜನನದಿಂದಲೇ ಬರುವಂತದ್ದಾಗಿದೆ. ಆದರೆ ಸರಿಯಾದ ಸಮಯದಲ್ಲಿ ತಜ್ಞರ ಸಲಹೆ ಮತ್ತು ಸಮಸ್ಯೆಯ ಗುರುತಿಸುವಿಕೆ ಆಗದಿದ್ದರೆ ಮುಂದಿನ ದಿನಗಳಲ್ಲಿ ಮಕ್ಕಳು ಹೆಚ್ಚಿನ ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.ಗ್ರಾಮೀಣ ಭಾಗದಲ್ಲಿ ಮತ್ತು ಸಣ್ಣ ಪಟ್ಟಣಗಳಲ್ಲಿ ವಾಸಿಸುವ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕಿದೆ. ನಮ್ಮ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿದಾಗ ಇಂತಹ ಸಮಸ್ಯೆ ಇರುವ ಮಕ್ಕಳನ್ನು ಗುರುತಿಸಿ, ಅವರಿಗೆ ಎಲ್ಲಿ ಮತ್ತು ಹೇಗೆ ಚಿಕಿತ್ಸೆ ಪಡೆಯಬೇಕೆಂದು ಮಾರ್ಗದರ್ಶನ ನೀಡಬೇಕು. ಸಮಗ್ರ ಚಿಕಿತ್ಸಾ ವಿಧಾನ ಈ ಸಮಸ್ಯೆಯ ಚಿಕಿತ್ಸೆಯು ಕೇವಲ ಒಂದು ಬಾರಿಯ ಶಸ್ತ್ರ ಚಿಕಿತ್ಸೆಯಿಂದ ಸಾಧ್ಯವಿಲ್ಲ. ಇದಕ್ಕೆ ಹಲವು ತಜ್ಞರ ಅವಶ್ಯಕತೆ ಇರುತ್ತದೆ ಎಂದು ಹೇಳಿದರು.
ಬಡ ಜನರಿಗೆ ಚಿಕಿತ್ಸೆ ಪಡೆಯಲು ಬೆಂಗಳೂರಿನಂತಹ ದೊಡ್ಡ ನಗರಗಳಿಗೆ ಬರಲು ಸಮಯ ಪ್ರಯಾಣ ಮತ್ತು ಇತರ ವೆಚ್ಚಗಳ ಸಮಸ್ಯೆ ಇರುತ್ತದೆ. ಇದನ್ನು ಸರಿದೂಗಿಸಲು ಮತ್ತು ಅತ್ಯುತ್ತಮ ಚಿಕಿತ್ಸೆ ನೀಡಲು ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡುತ್ತಿದ್ದು ಮೈಸೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಮ್ಮೇಳನದ ಘೋಷ ವಾಕ್ಯವಾದ ಸಂಪರ್ಕಿಸಿ, ಸಂವಹನ ನಡೆಸಿ, ಮತ್ತು ಸಹಕರಿಸಿ ಎಂಬುದು ಅತ್ಯಂತ ಸೂಕ್ತವಾಗಿದೆ. ಸರ್ಕಾರ ಮತ್ತು ಸ್ವಯಂಸೇವಾ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಇಂತಹ ಸಮಸ್ಯೆಗಳನ್ನು ಸಮರ್ಥವಾಗಿ ನಿವಾರಿಸಲು ಸಾಧ್ಯ ಎಂದು ಹೇಳಿದರು.
ದಕ್ಷಿಣ ಏಷ್ಯಾದ ಸ್ಮೈಲ್ ಟ್ರೈನ್ ನ ಪ್ರಾದೇಶಿಕ ನಿರ್ದೇಶಕ ರೇಣು ಮೆಹ್ತಾ ಮಾತನಾಡಿ, ಸೀಳು ತುಟಿ ಮತ್ತು ಸೀಳು ಅಂಗುಳಿನ ಸಮಸ್ಯೆಯೊಂದಿಗೆ ಜನಿಸಿದ ಪ್ರತಿಯೊಂದು ಮಗುವಿನ ಬಗ್ಗೆ ಸ್ಮೈಲ್ ಟ್ರೈನ್ ಸ್ಥಳೀಯವಾಗಿ ಕಾಳಜಿ ವಹಿಸುತ್ತದೆ ಎಂದು ಹೇಳಿದರು.
ತರಬೇತಿ ಮಾರ್ಗದರ್ಶನ ಮತ್ತು ನಿರಂತರ ಶಿಕ್ಷಣದ ಮೂಲಕ ಪರಿಣತಿಯನ್ನು ಕೇವಲ ಕೆಲವು ಕೇಂದ್ರಗಳಿಗೆ ಸೀಮಿತಗೊಳಿಸದೆ, ಸಂಪೂರ್ಣ ಜಾಲಕ್ಕೆ ಹಂಚುವುದು ನಮ್ಮ ಗುರಿ. ಇತ್ತೀಚೆಗೆ ನಡೆದ ಕಾರ್ಯಾಗಾರದಲ್ಲಿ 30 ಯುವ ಶಸ್ತ್ರಚಿಕಿತ್ಸಕರಿಗೆ ಅಲ್ವಿಯೋಲರ್ ಬೋನ್ ಗ್ರಾಫ್ಟ್ ಶಸ್ತ್ರಚಿಕಿತ್ಸೆಯ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಾಗಿದೆ ಎಂದು ಹೇಳಿದರು.
ಐ.ಎಸ್.ಸಿ.ಎಲ್.ಪಿ.ಸಿ.ಎ ಕಾರ್ಯದರ್ಶಿ ಡಾ. ಪ್ರೀತಮ್ ಶೆಟ್ಟಿ ಮಾತನಾಡಿ, ತಮ್ಮ ಸಂಘವು ಒಂದು ಉತ್ತಮ ತಂಡವಾಗಿದ್ದು, ಇದರಲ್ಲಿ ಶಸ್ತ್ರಚಿಕಿತ್ಸಕರು, ಸ್ಪೀಚ್ ಪ್ಯಾಥೋಲಜಿಸ್ಟ್ಗಳು, ಆರ್ಥೊಡಾಂಟಿಸ್ಟ್ಗಳು, ಪೀಡಿಯಾಟ್ರಿಶಿಯನ್ಸ್, ಅರಿವಳಿಕೆ ತಜ್ಞರು ಮತ್ತು ನ್ಯೂರೋ ಸರ್ಜನ್ ಗಳನ್ನು ಹೊಂದಿದೆ ಎಂದು ಹೇಳಿದರು.
ಸದಸ್ಯರಿಗಾಗಿ ಫೆಲೋಶಿಪ್ ಮತ್ತು ಅಬ್ಸರ್ವರ್ಶಿಪ್ ಕಾರ್ಯಕ್ರಮ ನಡೆಸಲಾಗುತ್ತದೆ. ಅಲ್ಲದೆ ವರ್ಷಕ್ಕೆ ಎರಡು ಬಾರಿ ಪ್ರಕಟವಾಗುವ ಉನ್ನತ ಗುಣಮಟ್ಟದ ಜರ್ನಲ್ ಅನ್ನು ಸಂಘವು ಹೊಂದಿದೆ. 25ನೇ ವರ್ಷದ ಅಂಗವಾಗಿ, ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಸೀಳು ತುಟಿ ಮತ್ತು ಅಂಗುಳಿನ ಚಿಕಿತ್ಸೆಗೆ ಸಂಬಂಧಿಸಿದಂತೆ ಒಂದು ಓಪನ್ ಆಕ್ಸೆಸ್ ಪಠ್ಯಪುಸ್ತಕ ಹೊರತರಲಾಗುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಐ.ಎಸ್.ಸಿ.ಎಲ್.ಪಿ.ಸಿ.ಎ ಅಧ್ಯಕ್ಷ ಡಾ.ಎಂ.ಪುಷ್ಪಾವತಿ ಮತ್ತು ಸಿಬ್ಬಂದಿ ಇದ್ದರು.