ಕಂಪ್ಯೂಟರ್ ತಂತ್ರಜ್ಞರು ವೃತ್ತಿ ಮೌಲ್ಯ ಹೆಚ್ಚಿಸಿಕೊಳ್ಳಲಿ: ರಫೀಕ್‌ಅಹ್ಮದ್ ಅಣ್ಣಿಗೇರಿ

KannadaprabhaNewsNetwork |  
Published : Sep 20, 2026, 03:30 AM IST
ಕಾರ್ಯಕ್ರಮದಲ್ಲಿ ರಫೀಕ್‌ಅಹ್ಮದ್ ಅಣ್ಣಿಗೇರಿ ಮಾತನಾಡಿದರು. | Kannada Prabha

ಸಾರಾಂಶ

ಕಂಪ್ಯೂಟರ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ತಂತ್ರಜ್ಞರು ಮತ್ತು ಎಂಜಿನಿಯರ್‌ಗಳು ಪರಸ್ಪರ ಸಹಕಾರ ಹಾಗೂ ಸಂಘಟಿತ ಪ್ರಯತ್ನದ ಮೂಲಕ ತಮ್ಮ ವೃತ್ತಿಯ ಮೌಲ್ಯವನ್ನು ಹೆಚ್ಚಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಗದಗ

ಕಂಪ್ಯೂಟರ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ತಂತ್ರಜ್ಞರು ಮತ್ತು ಎಂಜಿನಿಯರ್‌ಗಳು ಪರಸ್ಪರ ಸಹಕಾರ ಹಾಗೂ ಸಂಘಟಿತ ಪ್ರಯತ್ನದ ಮೂಲಕ ತಮ್ಮ ವೃತ್ತಿಯ ಮೌಲ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಇನ್ಪೋಟೆಕ್ ಅಸೋಸಿಯೇಷನ್ ಅಧ್ಯಕ್ಷ ರಫೀಕ್‌ಅಹ್ಮದ್ ಅಣ್ಣಿಗೇರಿ ಹೇಳಿದರು.

ನಗರದ ಇನ್ಫೋಟೆಕ್ ಅಸೋಸಿಯೇಷನ್‌ದ ಕಾರ್ಯಾಲಯದಲ್ಲಿ ನಡೆದ ಎಂಜಿನಿಯರ್ಸ್‌ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮೊಳಗೆ ಸಹಕಾರ, ಶಿಸ್ತು ಮತ್ತು ವೃತ್ತಿಪರತೆ ಇದ್ದರೆ ನಮ್ಮ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಬಹುದು. ಎಲ್ಲರೂ ಒಟ್ಟಾಗಿ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಬಳಸಿಕೊಂಡು ಉತ್ತಮ ಆದಾಯ ಗಳಿಸುವಂತಾಗಬೇಕು ಎಂದರು.

ಹಿರಿಯ ಕಂಪ್ಯೂಟರ್ ಎಂಜಿನಿಯರ್ ಶ್ರೀನಾಥ ಪಾಟೀಲ ಮಾತನಾಡಿ, ಆನ್‌ಲೈನ್ ವ್ಯಾಪಾರದಿಂದ ಸ್ಥಳೀಯ ಕಂಪ್ಯೂಟರ್ ಹಾಗೂ ಎಲೆಕ್ಟ್ರಾನಿಕ್ಸ್ ಉದ್ಯಮಕ್ಕೆ ಸವಾಲು ಎದುರಾಗುತ್ತಿದ್ದು, ಸ್ಥಳೀಯ ವ್ಯಾಪಾರಿಗಳು ತಮ್ಮ ಬಲವಾದ ಅಂಶವಾದ ತಾಂತ್ರಿಕ ಜ್ಞಾನ ಮತ್ತು ತ್ವರಿತ ಸೇವೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು.

ತಾಂತ್ರಿಕ ಸೇವೆ ನೀಡುವವರು ಕೇವಲ ಉಪಕರಣ ಮಾರಾಟಕ್ಕೆ ಸೀಮಿತವಾಗದೆ, ಮಾರಾಟದ ನಂತರದ ಸೇವೆ, ನಿರ್ವಹಣೆ ಹಾಗೂ ತಾಂತ್ರಿಕ ಸಲಹೆಗಳನ್ನು ಒದಗಿಸುವ ಮೂಲಕ ಗ್ರಾಹಕರ ವಿಶ್ವಾಸ ಗಳಿಸಬೇಕು. ಗ್ರಾಹಕರ ಅಗತ್ಯವನ್ನು ಅರ್ಥೈಸಿಕೊಂಡು ಅದಕ್ಕೆ ಅನುಗುಣವಾಗಿ ಸೇವೆ ನೀಡುವುದು ಮುಖ್ಯ. ಅನಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಥವಾ ಗ್ರಾಹಕರಿಗೆ ಅಗತ್ಯವಿಲ್ಲದ ಸೇವೆಗಳನ್ನು ಒತ್ತಾಯಿಸುವ ಪ್ರವೃತ್ತಿಯಿಂದ ವೃತ್ತಿಯ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗಬಹುದು ಎಂದರು.

ಹೊಸ ತಲೆಮಾರಿನ ತಂತ್ರಜ್ಞರಿಗೆ ಕೆಲಸದ ವಿಧಾನ, ಸೇವಾ ಮಾನದಂಡ, ದರ ನಿಗದಿ ಹಾಗೂ ಗ್ರಾಹಕರೊಂದಿಗೆ ವ್ಯವಹರಿಸುವ ಕ್ರಮಗಳ ಕುರಿತು ಸ್ಪಷ್ಟ ಮಾರ್ಗಸೂಚಿ ರೂಪಿಸಬೇಕು. ಪ್ರತಿಯೊಬ್ಬರೂ ತಮ್ಮ ವೃತ್ತಿಯ ಗೌರವ, ಕೌಶಲ್ಯ ಮತ್ತು ಶಿಸ್ತನ್ನು ಕಾಪಾಡಿಕೊಳ್ಳಬೇಕು ಎಂದರು.

ವಿಜಯ ಲಿಂಗದಾಳಮಠ, ವಿನಾಯಕ ಹಬೀಬ, ಪ್ರವೀಣ ಮಳ್ಳಿ, ಅಜರುದ್ಧೀನ್ ಮುಲ್ಲಾ, ಪ್ರವೀಣಗೌಡ ಪಾಟೀಲ, ಸಾಗರ ಸೇರಿ ಸದಸ್ಯರು ಇದ್ದರು. ಉಪಾಧ್ಯಕ್ಷ ಮಹಾಂತೇಶ ಹುಬ್ಬಳ್ಳಿಮಠ ಪ್ರಾರ್ಥಿಸಿದರು. ಕಾರ್ಯದರ್ಶಿ ಅರುಣ ಹಡಪದ ಸ್ವಾಗತಿಸಿದರು. ಜಂಟಿ ಕಾರ್ಯದರ್ಶಿ ಜುಬೇರ ಖಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಖಜಾಂಚಿ ಕೃಷ್ಣಾ ಜಾಧವ ನಿರೂಪಿಸಿದರು. ಸಂಜೀವ ನಾವಳ್ಳಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನದಲ್ಲಿ 5 ಅಂಶಗಳ ಬಗ್ಗೆ ಗಮನ ಸೆಳೆಯಲು ಶಾಸಕರಿಗೆ ಆಗ್ರಹ
ಮನುಷ್ಯ ಸಂಘ ಜೀವಿ: ಪ್ರಮೋದ ಹೆಗಡೆ