ಮನುಷ್ಯ ಸಂಘ ಜೀವಿ: ಪ್ರಮೋದ ಹೆಗಡೆ

KannadaprabhaNewsNetwork |  
Published : Sep 20, 2026, 03:30 AM IST
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಭಾಸ್ಕರ್ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ವಿನಾಯಕ್ ಶೆಟ್ಟಿ, ಸಿಬ್ಬಂದಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಸಂಘದ ಅಡಾವೆ ಪತ್ರ ನೋಡಿದಾಗ ಈ ಸಂಘವು ಅತ್ಯಂತ ವ್ಯವಸ್ಥಿತವಾಗಿ ಪ್ರತಿ ವರ್ಷವೂ ಲಾಭದಲ್ಲಿ ಮುನ್ನುಗ್ಗುತ್ತಿದೆ.

ಶಿರಸಿ: ಪ್ರಾಣಿಗಳು ತಮ್ಮ ಪಾಡಿಗೆ ತಾವು ಬದುಕನ್ನು ಕಟ್ಟಿಕೊಳ್ಳುತ್ತವೆ. ಆದರೆ ಮನುಷ್ಯ ಯಾವಾಗಲೂ ಸಂಘ ಜೀವಿ ಮತ್ತು ಜನರ ಮಧ್ಯ ಇದ್ದು ತನಗೆ ಬೇಕಾದ ಎಲ್ಲವನ್ನೂ ಜನರಿಂದ ಪಡೆದು ಕೊಳ್ಳುತ್ತಾನೆ ಎಂದು ಹಿರಿಯ ಸಹಕಾರಿ ಧುರೀಣ ಪ್ರಮೋದ್ ಹೆಗಡೆ ಅಭಿಪ್ರಾಯಪಟ್ಟರು.

ಅವರು ಶನಿವಾರ ನಗರದ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಶ್ರಿ ಭೂತೇಶ್ವರ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಪಾಲ್ಗೊಂಡು ಸಹಕಾರ ವಸಂತ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ದಿ. ವಸಂತ ಶೆಟ್ಟಿ ಅವರು ಜನರ ಮಧ್ಯೆ ಇದ್ದು ಶ್ರಿ ಭೂತೇಶ್ವರ ಪತ್ತಿನ ಸಹಕಾರಿ ಸಂಘ ಸ್ಥಾಪಿಸಿದ ಪ್ರತಿಫಲದಿಂದ ಇಂದು ಅವರ ನೆರಳಲ್ಲಿ 25 ವರ್ಷಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ ಎಂದರು.

ಸಂಘದ ಅಡಾವೆ ಪತ್ರ ನೋಡಿದಾಗ ಈ ಸಂಘವು ಅತ್ಯಂತ ವ್ಯವಸ್ಥಿತವಾಗಿ ಪ್ರತಿ ವರ್ಷವೂ ಲಾಭದಲ್ಲಿ ಮುನ್ನುಗ್ಗುತ್ತಿದೆ. ಸಂಘದ ಕಾರ್ಯವೈಖರಿಗಳು ಜನರ ಮೆಚ್ಚುಗೆಯನ್ನು ಎಷ್ಟೊಂದು ಪ್ರಮಾಣದಲ್ಲಿ ಪಡೆದುಕೊಂಡಿದೆ ಎಂದು ಇದರಿಂದ ತಿಳಿದು ಬರುತ್ತದೆ ಎಂದು ಹೇಳಿದರು.

ಸಹಕಾರಿ ಸಂಘದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಉದ್ಯೋಗ ಸೃಷ್ಟಿಯಾಗಿವೆ ಮತ್ತು ಪ್ರತಿ ವರ್ಷ ಸುಮಾರು 10 ಸಾವಿರ ಪದವೀಧರರು ನಾನಾ ರೀತಿಯಲ್ಲಿ ಉದ್ಯೋಗ ಪಡೆಯಲು ಶಕ್ತರಾಗಿದ್ದಾರೆ ಎಂದರು.

ಉತ್ತರ ಕನ್ನಡ ಜಿಲ್ಲೆಗೆ ಬರಿ ದೊಡ್ಡ ದೊಡ್ಡ ಕಾರ್ಖಾನೆಗಳನ್ನು ತರುವುದರ ಮೂಲಕ ಉದ್ಯೋಗ ಸೃಷ್ಟಿ ಮಾಡಲು ನೋಡಬಾರದು ಇಲ್ಲಿಯ ಪರಿಸರಕ್ಕೆ ತಕ್ಕಂತೆ ಜಿಲ್ಲೆಯಲ್ಲಿ ಹೆಚ್ಚೆಚ್ಚು ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಬೇಕು ಮತ್ತು ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಬೇಕು ಅಂದಾಗ ಮಾತ್ರ ವಲಸೆ ಹೋಗುವುದನ್ನು ತಪ್ಪಿಸಿ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಬಹುದು ಎಂದರು.

ಭೂತೇಶ್ವರ ಸೇವಾ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಧಾರವಾಡ ಹೈಕೋರ್ಟ್ ನ್ಯಾಯವಾದಿ ಅರುಣಾಚಲ ಪಿ. ಹೆಗಡೆ ಜಾನ್ಮನೆ, ನಿನ್ನ ಕೆಲಸವನ್ನು ನೀನು ಪ್ರಾಮಾಣಿಕತೆಯಿಂದ , ದಕ್ಷತೆಯಿಂದ ಮತ್ತು ಶ್ರದ್ಧೆಯಿಂದ ಮಾಡು ಅದರೆ ಯಶಸ್ಸು ಮತ್ತು ಜಯ ಲಭಿಸುವುದು ದೈವ ಇಚ್ಛೆ ಎಂದು ಹೇಳಿದರು.

ನಮ್ಮ ಕುಟುಂಬ ಸುಮಾರು 120 ವರ್ಷಗಳಿಂದ ನಿರಂತರವಾಗಿ ಕಾನೂನು ಕ್ಷೇತ್ರದಲ್ಲಿ ವಕೀಲ ವೃತ್ತಿಯನ್ನು ಮಾಡುತ್ತಾ ಬಂದಿದೆ ನಾನು 3ನೇ ತಲೆಮಾರಿನವನು ಎಂದರು.

ಇಂದು ವೈದ್ಯಕೀಯ ವೃತ್ತಿ ಮತ್ತು ವಕೀಲ ವೃತ್ತಿ ವಾಣಿಜ್ಯಕರಣಗಳಾಗಿ ಬದಲಾಗಿವೆ. ಹಾಗಾಗಿ ಇಂದು ಒಬ್ಬ ವೈದ್ಯ ತಪ್ಪು ಮಾಡಿದರೆ ರೋಗಿಯ ಜೀವ ಹೋಗುತ್ತದೆ. ಆದರೆ ಒಬ್ಬ ವಕೀಲ ತಪ್ಪು ಮಾಡಿದರೆ ಇಡೀ ಕುಟುಂಬಕ್ಕೆ ಹಾನಿಯಾಗುತ್ತದೆ ಆದುದರಿಂದ ವಕೀಲರು ಕಕ್ಷಿದಾರರ ಹಿತವನ್ನು ಕಾಪಾಡಬೇಕು. ಮತ್ತು ವೈದ್ಯರು ರೋಗಿಗಳ ಹಿತವನ್ನು ಕಾಪಾಡಬೇಕು ಎಂದರು

ನಿರಂತರವಾಗಿ 16 ವರ್ಷಗಳಿಂದ ಹೈಕೋರ್ಟ್ ನ್ಯಾಯವಾದಿಯಾಗಿ ಕೆಲಸ ಕೊಡುತ್ತಿದ್ದೇನೆ. ಜೊತೆಗೆ ಶಿರಸಿಯ ಕಕ್ಷಿದಾರರ ಹಿತ ದೃಷ್ಟಿಯಿಂದ ಟ್ರಯಲ್ ಕೋರ್ಟ್ ಗಳ ಪ್ರಕರಣಗಳನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿದರು.

ಅಧ್ಯಕ್ಷ ಶ್ರೀಧರ್ ಮೊಗೇರ ಅವರು ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಭಾಸ್ಕರ್ ಶೆಟ್ಟಿ, ಕಾರ್ಯ ನಿರ್ವಹಣಾಧಿಕಾರಿ ವಿನಾಯಕ್ ಶೆಟ್ಟಿ, ಸಿಬ್ಬಂದಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಂಪ್ಯೂಟರ್ ತಂತ್ರಜ್ಞರು ವೃತ್ತಿ ಮೌಲ್ಯ ಹೆಚ್ಚಿಸಿಕೊಳ್ಳಲಿ: ರಫೀಕ್‌ಅಹ್ಮದ್ ಅಣ್ಣಿಗೇರಿ
ಅಧಿವೇಶನದಲ್ಲಿ 5 ಅಂಶಗಳ ಬಗ್ಗೆ ಗಮನ ಸೆಳೆಯಲು ಶಾಸಕರಿಗೆ ಆಗ್ರಹ