ಕುಕನೂರು: ಮುಂದಿನ ಪೀಳಿಗೆಗೆ ಹಿಂದುತ್ವದ ಪರಿಕಲ್ಪನೆ ನೀಡುವ ನಿಟ್ಟಿನಲ್ಲಿ ಹಿಂದೂ ಸಮಾಜೋತ್ಸವ ಮೂಲಕ ಹಿಂದುತ್ವದ ಪ್ರತಿಪಾದನೆ ಮಾಡುವ ಕಾರ್ಯ ಹೆಚ್ಚು ಆಗಬೇಕು ಎಂದು ಗ್ರಾಪಂ ಮಾಜಿ ಅಧ್ಯಕ್ಷ ಗವಿಸಿದ್ದನಗೌಡ ಮುದ್ದಾಬಳ್ಳಿ ಹೇಳಿದರು.
ದೇವಸ್ಥಾನ ಅರ್ಚಕ ಶ್ರೀಕಾಂತ ಪೂಜಾರ ಮಾತನಾಡಿ, ಇಟಗಿ ಗ್ರಾಮದಲ್ಲಿ ಮಾ. ೮ರಂದು ಮಧ್ಯಾಹ್ನ ೩ ಗಂಟೆಗೆ ಶ್ರೀ ಮಹೇಶ್ವರ ದೇವಸ್ಥಾನದಿಂದ ಶೋಭಾಯಾತ್ರೆ ಪ್ರಾರಂಭಗೊಳ್ಳಲಿದೆ. ಶೋಭಾಯಾತ್ರೆಯಲ್ಲಿ ವಿವಿಧ ಕಲಾ ವಾದ್ಯಗಳು ಭಾಗವಹಿಸಲಿದ್ದು, ಕರಡಿ ಮಜಲು, ಕೋಲಾಟ, ಭಜನೆಯ ಮೂಲಕ ಶೋಭಾಯಾತ್ರೆ ನಡೆಯಲಿದೆ ಎಂದರು.
ಮುಖಂಡ ಮಹೇಶ ದೊಡ್ಮನಿ ಮಾತನಾಡಿ, ಮಾ. 8ರಂದು ಸಂಜೆ ೫ ಗಂಟೆಗೆ ಶ್ರೀ ಮಹಾದೇವ ದಂಡನಾಯಕ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಡಾ. ಮಹಾದೇವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಗ್ರಾಮದ ಸಮಾಜ ಸೇವಕಿ ಹುಲಿಗೆಮ್ಮ ಹುರಕಣ್ಣವರ ಅಧ್ಯಕ್ಷತೆ ವಹಿಸುವರು. ರಾಷ್ಟ್ರಿಯ ಸ್ವಯಂ ಸೇವಕ ಸಂಘದ ಉತ್ತರ ಮತ್ತು ದಕ್ಷಿಣ ಪ್ರಾಂತ ಪ್ರಚಾರ ಅರುಣಕುಮಾರ ಭಾಗವಹಿಸಲಿದ್ದಾರೆ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ, ಸಾಹಿತಿ ಬಿ.ಎಂ. ಹಳ್ಳಿ, ಪ್ರಭು ಹಳ್ಳಿ, ರಾಮಣ್ಣ ಹಿರೇಮನಿ, ಪ್ರಮುಖರಾದ ಅಂದಪ್ಪ ಹುರಳ್ಳಿ, ಬಿ.ಎಂ. ಹಳ್ಳಿ, ಸೋಮಣ್ಣ ಬಡಿಗೇರ, ವಿರೂಪಾಕ್ಷಪ್ಪ ಹುರಳ್ಳಿ, ಶಾಂತಯ್ಯ ಕಂತಿ, ಮಹಾಂತೇಶ ಕೌದಿ, ಶಿವಕುಮಾರ ಗುಳಗಣ್ಣವರ, ಪ್ರವೀಣ ಗುಳಗಣ್ಣವರ, ಮಂಜುನಾಥ ಕೋವಿ ಇತತರಿದ್ದರು.