ಕಲಾರಂಗ ಕ್ರೀಡಾಂಗಣಕ್ಕೆ ಮೂರು ತಿಂಗಳಲ್ಲಿ ಕಾಂಕ್ರಿಟ್ ಪಿಚ್: ಲಾರೆನ್ಸ್ ಸಿಕ್ವೇರಾ

KannadaprabhaNewsNetwork |  
Published : Feb 08, 2025, 12:32 AM IST
೦೬ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ಬಾಳೆಹೊನ್ನೂರು ಕ್ರಿಕೆಟ್ ಗೆಳೆಯರ ಬಳಗ ಆಯೋಜಿಸಿದ್ದ ಲೆದರ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ ಬೆಂಗಳೂರಿನ ಗಟ್ಸ್ ಅಂಡ್ ಗ್ಲೋರಿ ತಂಡವು ಅತಿಥಿಗಳಿಂದ ಟ್ರೋಫಿ ಪಡೆಯಿತು. | Kannada Prabha

ಸಾರಾಂಶ

ಬಾಳೆಹೊನ್ನೂರು, ಪಟ್ಟಣದ ಕಲಾರಂಗ ಕ್ರೀಡಾಂಗಣ ಮೂಲಸೌಲಭ್ಯಗಳ ಕೊರತೆಯಿಂದ ನಲುಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕ್ರಿಕೆಟ್ ಆಟಗಾರರ ಅನುಕೂಲಕ್ಕಾಗಿ ಮುಂದಿನ 3 ತಿಂಗಳಲ್ಲಿ ತನ್ನ ಸ್ವಂತ ಖರ್ಚಿನಿಂದ ಉತ್ತಮ ಕಾಂಕ್ರಿಟ್ ಪಿಚ್ ನಿರ್ಮಾಣ ಮಾಡಿಕೊಡ ಲಾಗುವುದು ಎಂದು ಕುವೈಟ್‌ನ ಉದ್ಯಮಿ ಕ್ಲಿಫರ್ಡ್ ಲಾರೆನ್ಸ್ ಸಿಕ್ವೇರಾ ಭರವಸೆ ನೀಡಿದರು.

ಬೆಂಗಳೂರು ಗಟ್ಸ್ ಅಂಡ್ ಗ್ಲೋರಿ ತಂಡಕ್ಕೆ ಬಿಸಿಬಿ ಕಪ್ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಪಟ್ಟಣದ ಕಲಾರಂಗ ಕ್ರೀಡಾಂಗಣ ಮೂಲಸೌಲಭ್ಯಗಳ ಕೊರತೆಯಿಂದ ನಲುಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕ್ರಿಕೆಟ್ ಆಟಗಾರರ ಅನುಕೂಲಕ್ಕಾಗಿ ಮುಂದಿನ 3 ತಿಂಗಳಲ್ಲಿ ತನ್ನ ಸ್ವಂತ ಖರ್ಚಿನಿಂದ ಉತ್ತಮ ಕಾಂಕ್ರಿಟ್ ಪಿಚ್ ನಿರ್ಮಾಣ ಮಾಡಿಕೊಡ ಲಾಗುವುದು ಎಂದು ಕುವೈಟ್‌ನ ಉದ್ಯಮಿ ಕ್ಲಿಫರ್ಡ್ ಲಾರೆನ್ಸ್ ಸಿಕ್ವೇರಾ ಭರವಸೆ ನೀಡಿದರು.ಪಟ್ಟಣದ ಕಲಾರಂಗ ಕ್ರೀಡಾಂಗಣದಲ್ಲಿ ಬಾಳೆಹೊನ್ನೂರು ಕ್ರಿಕೆಟ್ ಗೆಳೆಯರ ಬಳಗ ಆಯೋಜಿಸಿದ್ದ ಟಿ10 ಮತ್ತು ಟಿ20 ರಾಜ್ಯ ಮಟ್ಟದ ಲೆದರ್‌ಬಾಲ್ ಕ್ರಿಕೆಟ್ ಪಂದ್ಯಾವಳಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಬಾಳೆಹೊನ್ನೂರು ವ್ಯಾಪ್ತಿ ಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಸಾವಿರಾರು ಸಂಖ್ಯೆ ಯುವಜನರು, ಕ್ರೀಡಾಪಟುಗಳು ಸಹ ಇದ್ದಾರೆ. ಆದರೆ ಇಲ್ಲಿ ಸೂಕ್ತ ಕ್ರೀಡಾಂಗಣದ ವ್ಯವಸ್ಥೆ ಇಲ್ಲವಾಗಿದ್ದು, ಆಟಗಾರರು ಉತ್ತಮ ಪಂದ್ಯಗಳನ್ನು ಆಡಲು, ಅಭ್ಯಾಸ ಮಾಡಲು ವ್ಯವಸ್ಥೆ ಇಲ್ಲವಾಗಿದೆ ಎಂದರು.

ರಾಜಕಾರಣಿಗಳಿಗೆ ಕ್ರೀಡಾಂಗಣದ ವಿಸ್ತರಣೆ ಮಾಡಬೇಕು ಎಂಬ ಇಚ್ಛಾಶಕ್ತಿ ಕೊರತೆಯಿದೆ. ಕ್ರೀಡಾಂಗಣ ವಿಸ್ತರಣೆಗೆ ಅಡಚಣೆಗಳು ಸಹ ಇವೆ. ಹಾಗಾಗಿ ಇರುವ ಕ್ರೀಡಾಂಗಣವನ್ನೇ ಉತ್ತಮಗೊಳಿಸಿ ಕ್ರೀಡಾಪಟುಗಳಿಗೆ ಅವಕಾಶ ನೀಡಲು ನನ್ನ ಸ್ವಂತ ಖರ್ಚಿನಿಂದ ಕಾಮಗಾರಿ ಮಾಡಲಾಗುವುದು ಎಂದು ತಿಳಿಸಿದರು.ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ ಮಾತನಾಡಿ, ಕಲಾರಂಗ ಕ್ರೀಡಾಂಗಣದ ಅಭಿವೃದ್ಧಿಗೆ ಗ್ರಾಪಂ ಸದಾ ಬದ್ಧವಿದೆ. ಇರುವ ಕ್ರೀಡಾಂಗಣವನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲು ಗ್ರಾಪಂ ಸಹಕಾರ ನೀಡಲಿದೆ ಎಂದರು.ಈ ಹಿಂದೆ ಕ್ರೀಡಾಂಗಣ ವಿಸ್ತರಣೆ ಮಾಡಬೇಕು ಎಂಬ ಉದ್ದೇಶದಿಂದ ಸಿದ್ಧತೆ ಕೈಗೊಳ್ಳಲಾಗಿತ್ತು. ಆದರೆ ಕ್ರೀಡಾಂಗಣದ ಪಕ್ಕದಲ್ಲಿರುವ ರಸ್ತೆ ಸರ್ಕಾರಿ ದಾಖಲೆಗಳ ಪ್ರಕಾರ ವಸ್ತಾರೆ-ಶೃಂಗೇರಿ ಮುಖ್ಯರಸ್ತೆ ಎಂದಿರುವ ಕಾರಣ ವಿಸ್ತರಣೆ ಕಾರ್ಯಕ್ಕೆ ಅಡ್ಡಿಯಾಗಿ ಕೈಬಿಡಲಾಯಿತು. ಕ್ರೀಡಾಂಗಣ ಸ್ವಚ್ಛತೆ, ನಿರ್ವಹಣೆಗೆ ಗ್ರಾಪಂ ಕ್ರೀಡಾಪಟುಗಳಿಗೆ ಕಾಲಕಾಲಕ್ಕೆ ಸೂಕ್ತ ಸಹಕಾರ ನೀಡಲಿದೆ ಎಂದು ತಿಳಿಸಿದರು.ವಿಹಿಂಪ ಹಾಸನ ವಿಭಾಗದ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಮಾತನಾಡಿ, ಕ್ರಿಕೆಟ್‌ನ ಜೀವಾಳ ಲೆದರ್ ಬಾಲ್ ಪಂದ್ಯಾಟ ಗಳಾಗಿದ್ದು, ಲೆದರ್ ಪಂದ್ಯಾವಳಿಗಳಿಂದ ಕ್ರೀಡಾಪಟುಗಳಿಗೆ ಹೆಚ್ಚಿನ ಸಂತಸ ದೊರೆಯಲಿದೆ. ಕ್ರೀಡಾಕೂಟ ನಡೆಸಲು ಸಾಕಷ್ಟು ಸಿದ್ಧತೆಗಳು ಬೇಕಿದೆ. ಈ ನಿಟ್ಟಿನಲ್ಲಿ ಬಿಸಿಬಿ ಕ್ರಿಕೆಟ್ ತಂಡ ಉತ್ತಮ ವ್ಯವಸ್ಥೆಗಳೊಂದಿಗೆ ಆಟಗಳನ್ನು ಆಡಿಸಿದೆ ಎಂದರು.ಟಿ೨೦ ಪಂದ್ಯಾವಳಿಯಲ್ಲಿ ಬೆಂಗಳೂರಿನ ಗಟ್ಸ್ ಅಂಡ್ ಗ್ಲೋರಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿ ಬಿಸಿಬಿ ಕಪ್ ತನ್ನದಾಗಿಸಿಕೊಂಡಿತು. ಹೇರೂರು ಡಿಸಿಸಿ ತಂಡ ರನ್ನರ್ಸ್ ಸ್ಥಾನ ಗಳಿಸಿತು. ಟಿ10 ಪಂದ್ಯಾವಳಿಯಲ್ಲಿ ಹೇರೂರು ಡಿಸಿಸಿ ತಂಡ ಚಾಂಪಿಯನ್ ಸ್ಥಾನ ಗಳಿಸಿದ್ದು, ಕಡಬಗೆರೆ ಕ್ರಿಕೆಟರ್ಸ್ ರನ್ನರ್ಸ್ ಸ್ಥಾನ ಗಳಿಸಿತು.ಹಿರಿಯ ಆಟಗಾರರಿಗೆ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ಅನಿಲ್ ಕುಲಾಸೋ ನಾಯಕತ್ವದ ತೆಂಗಿನಮನೆ ಕ್ರಿಕೆಟರ್ಸ್ ಚಾಂಪಿಯನ್, ಓ.ಡಿ.ಸ್ಟೀಫನ್ ನಾಯಕತ್ವದ ಬಾಳೆಹೊನ್ನೂರು ಲೆಜೆಂಡ್ಸ್ ತಂಡ ರನ್ನರ್ ಸ್ಥಾನ ಪಡೆಯಿತು.

ಪಂದ್ಯಾವಳಿ ಆಯೋಜಕ ಜಗದೀಶ್ ಅರಳೀಕೊಪ್ಪ, ಪ್ರಮುಖರಾದ ಎಂ.ವಿ.ಶ್ರೀನಿವಾಸಗೌಡ, ಎ.ಎಸ್.ಕೃಷ್ಣಪ್ಪ, ಪೂರ್ಣೇಶ್, ಮಂಜು ಕೋಟ್ಯಾನ್, ಸ್ನೇಹಾಗೌಡ, ಸತೀಶ್ ಅರಳೀಕೊಪ್ಪ, ಕೌಶಿಕ್ ಪಟೇಲ್, ಎಸ್.ಎನ್.ನಾರಾಯಣ, ವಿನಯ್, ಜಂಶೀದ್ ಅಹ್ಮದ್, ದಿನೇಶ್ ತುಪ್ಪೂರು, ಎಚ್.ಜೆ.ರಚನ್, ಗುರುಪ್ರಸಾದ್, ಸುರೇಶ್, ಇಬ್ರಾಹಿಂ ಶಾಫಿ, ಸಂದೇಶ್, ಕೆ.ಪಿ.ಚಂದ್ರೇಗೌಡ ಮತ್ತಿತರರು ಹಾಜರಿದ್ದರು.

೦೬ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ಬಾಳೆಹೊನ್ನೂರು ಕ್ರಿಕೆಟ್ ಗೆಳೆಯರ ಬಳಗ ಆಯೋಜಿಸಿದ್ದ ಲೆದರ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ ಬೆಂಗಳೂರಿನ ಗಟ್ಸ್ ಅಂಡ್ ಗ್ಲೋರಿ ತಂಡ ಅತಿಥಿಗಳಿಂದ ಟ್ರೋಫಿ ಪಡೆಯಿತು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ