ಬಾಂಗ್ಲಾ ಹಿಂದುಗಳ ಮೇಲೆ ದೌರ್ಜನ್ಯಕ್ಕೆ ಖಂಡನೆ

KannadaprabhaNewsNetwork | Published : Dec 10, 2024 12:33 AM

ಸಾರಾಂಶ

ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಅರಾಜಕತೆ ಸೃಷ್ಟಿಯಾಗಿದ್ದು, ಅಲ್ಲಿರುವ ಹಿಂದೂಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿದೆ. ಬಾಂಗ್ಲಾ ದೇಶದಲ್ಲಿರುವ ಮುಸ್ಲಿಮರು ಹಿಂದೂಗಳ ಮನೆ, ದೇವಾಲಯಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಇದನ್ನು ತಡೆಯಲು ಭಾರತ ಸರ್ಕಾರವು ಮಧ್ಯಸ್ಥಿಕೆ ವಹಿಸಬೇಕು.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿ ಖಂಡಿಸಿ ಹಿಂದೂ ಜಾಗೃತಿ ಸಮಿತಿ ಹಾಗೂ ಹಿಂದೂಪರ ಸಂಘಟನೆಗಳು ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದವು.ನಗರದ ಶ್ರೀ ಶನಿಮಹಾತ್ಮಸ್ವಾಮಿ ದೇವಸ್ಥಾನದಿಂದ ಮುಖ್ಯರಸ್ತೆ ಮಾರ್ಗವಾಗಿ ಮಹಾತ್ಮಗಾಂಧಿ ವೃತ್ತದವರೆಗೆ ಮೆರವಣಿಗೆ ನಡೆಯಿತು. ವಿವಿಧ ಸಮುದಾಯಗಳ ಮುಖಂಡರು, ಯುವಕರು ಪ್ರತಿಭಟನೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿ ಬೆಂಬಲ ಸೂಚಿಸಲಾಯಿತು. ಹಿಂದೂಗಳ ಮೇಲೆ ದಾಳಿ

ರಾಜ್ಯ ಬಿಜೆಪಿ ವಕ್ತಾರ ಎಚ್.ಎನ್. ಚಂದ್ರಶೇಖರ್ ಮಾತನಾಡಿ, ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಅರಾಜಕತೆ ಸೃಷ್ಟಿಯಾಗಿದ್ದು, ಅಲ್ಲಿರುವ ಹಿಂದೂಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿದೆ. ಬಾಂಗ್ಲಾ ದೇಶದಲ್ಲಿರುವ ಮುಸ್ಲಿಮರು ಹಿಂದೂಗಳ ಮನೆ, ದೇವಾಲಯಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಈ ನಡುವೆ ಹಿಂದುಗಳನ್ನು ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವಂತೆ ಇಲ್ಲವೇ ದೇಶ ಬಿಟ್ಟುತೊಲಗುವಂತೆ ಹಿಂಸೆ ನೀಡುತ್ತಿದ್ದಾರೆ. ಇದು ಅತ್ಯಂತ ಖಂಡನೀಯ ಎಂದರು.ಬಾಂಗ್ಲಾದೇಶದಲ್ಲಿ ಹಿಂದೂಗಳ ಪರಿಸ್ಥಿತಿ ನೋಡಿದರೆ, ಮುಂದೆ ನಮ್ಮ ಊರಿನಲ್ಲೂ ಇಂಥದ್ದೇ ಪರಿಸ್ಥಿತಿ ಉಂಟಾದರೂ ಆಶ್ಚರ್ಯಪಡುವಂತಿಲ್ಲ. ಹಿಂದೂಗಳ ಸೇರಿದರೆ ಕೋಮುಗಲಭೆ ಆಗುತ್ತದಂತೆ, ಎಲ್ಲರಿಗೂ ಅಮಾಯಕ ಹಿಂದೂಗಳು ಮಾತ್ರ ಕಾಣಿಸ್ತಾರೆ, ಲವ್ ಜಿಹಾದ್ ಕಾಣುತ್ತಿಲ್ಲ, ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಹಿಂದೂ ದ್ವೇಷ, ನಾಳೆ ಇಲ್ಲೂ ನಡೆಯುತ್ತದೆ.ಬಾಂಗ್ಲಾ ಸೃಷ್ಟಿಸಿದ್ದು ಭಾರತ

ಬಾಂಗ್ಲಾದೇಶ ಪಾಕಿಸ್ತಾನದ ಅಧೀನದಲ್ಲಿದ್ದಾಗ ಅಲ್ಲಿ ಅತ್ಯಾಚಾರಗಳು ನಡೆಯುತ್ತಿದ್ದವು, ಅಪಹರಣಗಳಾಗಿದ್ದವು, ಅಂತಹ ಸಂದರ್ಭದಲ್ಲಿ, ಪಾಕಿಸ್ತಾನದ ಸ್ನೇಹ ಬೇಡ ಎಂದಾಗ ಬಾಂಗ್ಲಾದೇಶವನ್ನು ರಕ್ಷಣೆ ಮಾಡಿದ್ದ ಭಾರತ. ನಮ್ಮ ಸೈನಿಕರ ಬಲಿದಾನದ ಮೇಲೆ ಬಾಂಗ್ಲಾದೇಶ ನಿರ್ಮಾಣವಾಗಿದೆ. ಯಾರು ಅನ್ನಹಾಕಿದರೋ ಅವರ ಕತ್ತು ಕೊಯುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.ಇವರ ದೇಶದ ವಿರೋಧಿ ಚಟುವಟಿಕೆಗಳಿಗೆ ಇಲ್ಲಿರುವ ನಪುಂಸಕರು ಹಮಾಸ್‌ಗೆ ಬೆಂಬಲ ವ್ಯಕ್ತಪಡಿಸುತ್ತಾರೆ, ಆದರೆ ನಮ್ಮ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಯಾರೂ ಧ್ವನಿಎತ್ತುತ್ತಿಲ್ಲ. ಇಡೀ ದೇಶದ ಹಿಂದೂಗಳು ಈಗ ಒಂದಾಗುತ್ತಿದ್ದಾರೆ. ಬಿಜೆಪಿ ಸರ್ಕಾರ ಪ್ರತಿಯೊಬ್ಬರಿಗೂ ಒಳ್ಳೆಯದನ್ನೇ ಮಾಡುತ್ತಿದೆ, ಆದರೆ ಹಿಂದುಗಳಿಗೆ ಅರ್ಥವಾಗುತ್ತಿಲ್ಲ ಎಂದು ಹೇಳೀದರು.ಹಿಂದೂಗಳ ರಕ್ಷಣೆ ಮಾಡಬೇಕು

ಇಂದು ಭಾರತದ ಧ್ವನಿಗೆ ಪ್ರಪಂಚವೆ ಧ್ವನಿಗೂಡಿಸುತ್ತಿದೆ. ಭಾರತವು ವಿಶ್ವ ಗುರುವಾಗುತ್ತಿದೆ. ಇದೇ ಸನಾತನ ಧರ್ಮ. ಸಿದ್ದರಾಮಯ್ಯನವರ ಸರ್ಕಾರವೇ ಇತಿಹಾಸದಲ್ಲಿ ಕರ್ನಾಟಕದ ಕೊನೆಯ ಸರ್ಕಾರ. ಬಾಂಗ್ಲಾ ದೇಶದಲ್ಲಿನ ಹಿಂದೂಗಳ ರಕ್ಷಣೆ ನಮ್ಮ ಕರ್ತವ್ಯ. ಬಾಂಗ್ಲಾ ಜಿಹಾದಿ ಮನಸ್ಥಿತಿ ಸರ್ಕಾರಕ್ಕೆ ಧಿಕ್ಕಾರ. ಎಂದು ಘೋಷಣೆಗಳನ್ನು ಕೂಗಿದರು.ಕೇಂದ್ರ ಮಧ್ಯಪ್ರವೇಶಿಸಲಿ

ಬಾಂಗ್ಲಾದೇಶದಲ್ಲಿ ನಡೆದಿರುವ ಹಿಂದೂಗಳ ಮೇಲಿನ ದೌರ್ಜನ್ಯವನ್ನು ನಮ್ಮ ದೇಶದ ಹಲವಾರು ದೇಶದ್ರೋಹಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಖುಷಿ ಪಡುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ. ಹಿಂದೂಗಳ ಹಾಗೂ ಅಲ್ಪಸಂಖ್ಯಾತರ ಮೇಲೆ ಆಗುತ್ತಿರುವ ದಾಳಿಗಳನ್ನು ತಡೆಯಲು ಭಾರತ ಸರ್ಕಾರವು ಮಧ್ಯಸ್ಥಿಕೆ ವಹಿಸಬೇಕು. ಇದು ಹಿಗೇಯೇ ಮುಂದುವರಿದರೆ ದೇಶದಲ್ಲಿರುವ ಹಿಂದೂಗಳು ಒಂದಾಗಿ ಬಾಂಗ್ಲಾದೇಶದ ಹಿಂದೂಗಳ ಪರವಾಗಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಹಿಂದೂ ಹಿತರಕ್ಷಣಾ ಸಮಿತಿ ಹಾಗೂ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲ ತಹಶೀಲ್ದಾರ್ ಮಹೆಶ್.ಎಸ್.ಪತ್ರಿರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

Share this article