ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ದಿಂಗಾಲೇಶ್ವರ ಶ್ರೀಗಳ ರಾಜಕೀಯ ಸಭೆಗೆ ಖಂಡನೆ

KannadaprabhaNewsNetwork |  
Published : Mar 30, 2024, 12:49 AM IST
ಮೂರು ಸಾವಿರ ಮಠದಲ್ಲಿ ದಿಂಗಾಲೇಶ್ವರ ಶ್ರೀಗಳ ರಾಜಕೀಯ ಸಭೆ ಕಾನೂನು ಬಾಹಿರ : ರುದ್ರಮುನಿ ಶ್ರೀ | Kannada Prabha

ಸಾರಾಂಶ

ಮಠ-ಮಾನ್ಯಗಳು ಸರ್ವಧರ್ಮ ಸಮನ್ವಯ ಕೇಂದ್ರಗಳಾಗಿದ್ದು, ಜಾತಿ, ಧರ್ಮ, ಪಂಥ ಮೆಟ್ಟಿನಿಂತು ಸರ್ವರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುತ್ತಿವೆ. ಇಂತಹ ಸಂದರ್ಭದಲ್ಲಿ ಶಿರಹಟ್ಟಿ ಮಠದ ದಿಂಗಾಲೇಶ್ವರ ಶ್ರೀಗಳು ಹುಬ್ಬಳ್ಳಿ ಮೂರು ಸಾವಿರ ಮಠದಲ್ಲಿ ಅಕ್ರಮ ಪ್ರವೇಶ ಮಾಡಿ ರಾಜಕೀಯ ಸಭೆ ಕರೆದಿರುವುದು ಕಾನೂನು ಬಾಹಿರ ಎಂದು ಪಟ್ಟಣದ ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ತಿಪಟೂರು

ಮಠ-ಮಾನ್ಯಗಳು ಸರ್ವಧರ್ಮ ಸಮನ್ವಯ ಕೇಂದ್ರಗಳಾಗಿದ್ದು, ಜಾತಿ, ಧರ್ಮ, ಪಂಥ ಮೆಟ್ಟಿನಿಂತು ಸರ್ವರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುತ್ತಿವೆ. ಇಂತಹ ಸಂದರ್ಭದಲ್ಲಿ ಶಿರಹಟ್ಟಿ ಮಠದ ದಿಂಗಾಲೇಶ್ವರ ಶ್ರೀಗಳು ಹುಬ್ಬಳ್ಳಿ ಮೂರು ಸಾವಿರ ಮಠದಲ್ಲಿ ಅಕ್ರಮ ಪ್ರವೇಶ ಮಾಡಿ ರಾಜಕೀಯ ಸಭೆ ಕರೆದಿರುವುದು ಕಾನೂನು ಬಾಹಿರ ಎಂದು ಪಟ್ಟಣದ ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ ತಿಳಿಸಿದರು.ಮಠದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ಸಾವಿರ ಮಠದ ಉತ್ತರಾಧಿಕಾರಿ ವಿಷಯಕ್ಕೆ ಸಂಬಂಧಿಸಿದಂತೆ ದಿಂಗಾಲೇಶ್ವರ ಶ್ರೀಗಳ ಮೇಲೆ ವಿವಾದವಿದ್ದು, ಇಂತಹ ಸಂದರ್ಭದಲ್ಲೇ ಮೂರು ಸಾವಿರ ಮಠದಲ್ಲಿ ರಾಜಕೀಯ ಸಭೆ ನಡೆಸಿರುವುದು ಕಾನೂನು ಬಾಹಿರ. ತಮ್ಮ ವೈಯಕ್ತಿಕ ವಿಷಯಕ್ಕಾಗಿ, ಸ್ವಾರ್ಥ ಸಾಧನೆಗಾಗಿ ಸಮಾಜವನ್ನು ದುರ್ಬಳಕೆ ಮಾಡುತ್ತಿರುವ ದಿಂಗಾಲೇಶ್ವರ ಶ್ರೀಗಳು ಧಾರವಾಡ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಬೇಕೆಂಬ ಅಪೇಕ್ಷ ಇದ್ದರೆ ಈ ಸಭೆಯನ್ನು ಅವರ ಮಠದಲ್ಲಿ ಮಾಡಿಕೊಳ್ಳಬೇಕಿತ್ತು ಎಂದಿದ್ದಾರೆ.

ಮೂರು ಸಾವಿರ ಮಠದ ಶ್ರೀ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಇಲ್ಲಿ ರಾಜಕೀಯ ಸಭೆ ಮಾಡಬೇಡಿ ಎಂದರೂ ಅತಿಕ್ರಮ ಪ್ರವೇಶ ಮಾಡಿ ಸಭೆಯನ್ನು ಮಾಡಿರುವುದು ಅಕ್ಷಮ್ಯ ಅಪರಾಧ. ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಮೇಲಿರುವ ವೈಯಕ್ತಿಕ ದ್ವೇಷಕ್ಕೆ ಮಠಗಳ ಹೆಸರನ್ನು ಕೆಡಿಸಬೇಡಿ. ಜೋಶಿ ನಾವು ಕಂಡಂತೆ ವೀರಶೈವ ಸಮಾಜವನ್ನಾಗಲಿ, ವ್ಯಕ್ತಿಗಳನ್ನಾಗಿ ಕಡೆಗಣಿಸಿಲ್ಲ. ಸಂಸತ್ ಸಚಿವರಾಗಿ ದೇಶವನ್ನು ಪ್ರತಿನಿಧಿ ಸುವ ವ್ಯಕ್ತಿ. ಪ್ರಧಾನಿ ನರೇಂದ್ರ ಮೋದಿಯವರನ್ನು ನೇರವಾಗಿ ಭೇಟಿ ಮಾಡುವ ಅವಕಾಶವನ್ನು ಇವರೊಬ್ಬರಿಗೆ ಮಾತ್ರ ಕೊಡಲಾಗಿದೆ.ನಿಮಗೆ ವೀರಶೈವ ಸಮಾಜಕ್ಕೆ ಪ್ರಾತಿನಿಧ್ಯ ಕೊಡಿಸಬೇಕೆಂದರೆ ನೀವು ಕಾಂಗ್ರೆಸ್ ಪಕ್ಷದಿಂದ ಮೋಹನ್ ಲಿಂಬಿಕಾಯಿಗೆ ಕೊಡಿಸಬಹುದಿದ್ದು, ವೈಯಕ್ತಿಕ ದ್ವೇಷಕ್ಕೆ ಸಮಾಜವನ್ನು ಒಡೆಯುವ, ಸಾಮರಸ್ಯ ಕದಡುವ ಕೆಲಸ ಮಾಡಬೇಡಿ. ಚುನಾವಣೆ ಎಂದರೆ ಜಾತಿ, ಸಮಾಜ, ಪಕ್ಷ, ವ್ಯಕ್ತಿಯ ಚುನಾವಣೆಯಲ್ಲ. ದಿಂಗಾಲೇಶ್ವರ ಶ್ರೀಗಳು ವೈಯಕ್ತಿಕ ದ್ವೇಷಕ್ಕಾಗಿ ಇಂತಹ ಕ್ರಮಕ್ಕೆ ಮುಂದಾಗಿರುವುದು ಸರಿಯಲ್ಲ. ರಾಜ್ಯದಲ್ಲಿ ಸ್ವಾಮೀಜಿಗಳು ಚುನಾವಣೆಗೆ ನಿಲ್ಲುವಂತಹ ಕಾಲ ಇನ್ನೂ ಪರಿಪಕ್ವವಾಗಿಲ್ಲ. ಸ್ವಾಮೀಜಿಗಳು ಚುನಾವಣೆಯಲ್ಲಿ ನಿಂತು ತಮ್ಮ ಗೌರವ, ಸ್ವಾಭಿಮಾನಗಳನ್ನು ಕಳೆದು ಕೊಂಡಂತಹ ಉದಾಹರಣೆಗಳಿವೆ. ಅಂತಹದರಲ್ಲಿ ಸ್ವಾಮೀಜಿಗಳು ಚುನಾವಣೆಯಲ್ಲಿ ನಿಲ್ಲುತ್ತೇವೆಂದು ಹೇಳುವುದು ಹಾಸ್ಯಾಸ್ಪದ. ಒಂದು ವೇಳೆ ನೀವು ನಿಲ್ಲಬೇಕೆಂಬ ಬಯಕೆ ಇದ್ದರೆ ನಿಮ್ಮ ಮಠದಲ್ಲಿ ಪತ್ರಿಕಾಗೋಷ್ಠಿ, ರಾಜಕೀಯ ಸಭೆ ಇಟ್ಟುಕೊಳ್ಳಲಿ. ಅದರ ಬದಲು ಬೇರೆ ಮಠಕ್ಕೆ ಬಂದು ಹೆಸರು ಕೆಡಿಸುವ, ಮಠದ ಗೌರವ ಕಳೆಯುವ ಕೆಲಸ ಮಾಡಿ ಎಂದರು.

PREV

Latest Stories

ಏಕರೂಪ ಸಿನಿಮಾ ಟಿಕೆಟ್‌ ದರಕ್ಕೆ ಕರಡು- ಗರಿಷ್ಠ ಟಿಕೆಟ್‌ ದರ ₹200 ನಿಗದಿ
ಶಾಲೆಯಲ್ಲಿನ ಕಲುಷಿತ ಬಿಸಿಯೂಟ ಸೇವಿಸಿ 68 ವಿದ್ಯಾರ್ಥಿಗಳು ಅಸ್ವಸ್ಥ
ರಾಷ್ಟ್ರೀಯ ಲೋಕ ಅದಾಲತ್: 58.67 ಲಕ್ಷ ಕೇಸ್ ಇತ್ಯರ್ಥ