ಧಾರವಾಡ:
ಗೋ ಶಾಲೆಯಲ್ಲಿ ಮೂಲಭೂತ ವ್ಯವಸ್ಥೆಗಳಿಲ್ಲ. ಸೂಕ್ತ ಸಮಯದಲ್ಲಿ ಗೋವುಗಳಿಗೆ ಚಿಕಿತ್ಸೆ ದೊರೆಯುತ್ತಿಲ್ಲ. ಕರುಗಳ ಆರೈಕೆ ಆಗುತ್ತಿಲ್ಲ. ಅವುಗಳು ಅನಾರೋಗ್ಯದಿಂದ ಬಳಲುತ್ತಿದ್ದರೂ ಜಿಲ್ಲಾಡಳಿತ ತೀವ್ರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಮುತಾಲಿಕ್ ಆರೋಪಿಸಿದರು.
ಕೂಡಲೇ ಜಿಲ್ಲಾಧಿಕಾರಿಗಳು ಗೋಶಾಲೆಗೆ ಭೇಟಿ ನೀಡಿ ಗೋವುಗಳ ಆರೋಗ್ಯ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಬೇಕು. ಗಂಭೀರ ಸ್ಥಿತಿಯಲ್ಲಿರುವ ಗೋವುಗಳಿಗೆ ಪ್ರತ್ಯೇಕ ಚಿಕಿತ್ಸೆ ಒದಗಿಸಬೇಕು. ಗೋವುಗಳ ಆರೋಗ್ಯ, ಆಹಾರ, ನೀರು, ಸ್ವಚ್ಛತೆ ಮತ್ತು ನಿರ್ವಹಣೆ ಬಗ್ಗೆ ಕಾಲಕಾಲಕ್ಕೆ ಜಿಲ್ಲಾಡಳಿತಕ್ಕೆ ವರದಿ ನೀಡುವಂತಾಗಬೇಕು. ಗೋಶಾಲೆಗೆ ಸೇರಿದ ಒಂಭತ್ತು ಎಕರೆ ಜಾಗದ ಗಡಿ ಗುರುತಿಸಿ ಅಲ್ಲಿ ಅವುಗಳಿಗೆ ಆಹಾರ ಬೆಳೆಯುವಂತಾಗಬೇಕು. ಗೋವುಗಳಿಗೆ ಆಹಾರದ ಕೊರತೆ ಉಂಟಾಗದಂತೆ ಜಿಲ್ಲಾಡಳಿತ ಅನುದಾನ ವ್ಯವಸ್ಥೆ ಮಾಡಬೇಕು ಎಂಬೆಲ್ಲಾ ಅಂಶಗಳ ಮನವಿಯನ್ನು ಮುತಾಲಿಕ್ ಅವರು ಜಿಲ್ಲಾಧಿಕಾರಿ ಸ್ನೇಹಲ್ ಅವರಿಗೆ ಸಲ್ಲಿಸಿದರು.ಈ ವೇಳೆ ಸತ್ಯಪ್ರಮೋದೇದ್ರ ಸ್ವಾಮೀಜಿ, ಅಣ್ಣಪ್ಪ ದಿವಟಗಿ, ಮಂಜುನಾಥ ಕಾಟಕರ್, ವಿಶ್ವನಾಥ ಬೂದುರ, ಸಿದ್ಧು ಹಿರೇಮಠ, ಸೋಮು ಕಮತಗಿ, ನಿರಂಜನ್ ಗೌಡರ, ಮಹಾಲಿಂಗ ಐಗಳಿ ಇದ್ದರು.