ಗಂಗಾವತಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆ ಶುದ್ಧೀಕರಣ ಮಾಡಿರುವದಕ್ಕೆ ದಲಿತ ಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ನಗರದ ಪ್ರತಿಭಟನೆ ನಡೆಸಿದರು.
ಈ ರೀತಿಯ ಕೃತ್ಯ ಕೇವಲ ಒಬ್ಬ ರಾಜಕೀಯ ನಾಯಕನಿಗೆ ಮಾಡಿದ ಅವಮಾನವಲ್ಲ. ಬದಲಾಗಿ ಜಾತಿ ಆಧಾರಿತ ತಾರತಮ್ಯ ಹಾಗೂ ಅಸ್ಪೃಶ್ಯತೆಯ ಮನಸ್ಥಿತಿ ಪ್ರತಿಬಿಂಬಿಸುವ ಕೃತ್ಯವಾಗಿದ್ದು, ಸಂವಿಧಾನದ ಸಮಾನತೆ ಮತ್ತು ಮಾನವ ಘನತೆಯ ಆಶಯಗಳಿಗೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಹಂಪೇಶ ಹರಿಕೋಲು, ಶಿವಪ್ಪ ಮಾದಿಗ, ಅಂಬಣ್ಣ , ದುರಗೇಶ ಸಂಗಾಪುರ, ಪಂಪಾಪತಿ ಸಿದ್ದಾಪುರ, ಹೊನ್ನೂರಪ್ಪ, ಫಕೀರಪ್ಪ ಬೋವಿ, ಗಂಗಣ್ಣ ಸಿದ್ದಾಪುರ, ಮರಿಸ್ವಾಮಿ, ಶಂಕರ್ ಸಿದ್ದಾಪುರ, ಅಂಜಿನಯ್ಯ ಸೋಮನಾಳ, ಹುಲ್ಲೇಶ್ ಕೊಜಿ, ಗಣೇಶ್ ಮಚ್ಚಿ, ಜಂಬಣ್ಣ. ಚಂದ್ರು ಸೇರಿದಂತೆ ಅನೇಕ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.