ಕನ್ನಡಪ್ರಭ ವಾರ್ತೆ ಯಲ್ಲಾಪುರ
ತಾಲೂಕಿನ ಕುಂದರಗಿ ಗ್ರಾಪಂ ವ್ಯಾಪ್ತಿಯ ಬೆಳ್ಳಂಬೆಯ ಸದಾಶಿವ ನಾಯ್ರ ತೋಟದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮರಕಡಿದ ಜಾಗಕ್ಕೆ ಭೇಟಿ ನೀಡಿ ರೈತನಿಗೆ ಧೈರ್ಯ ತುಂಬಿ ಮಾತನಾಡಿದ ಅವರು, ಸುಮಾರು ೫೦ ವರ್ಷದಿಂದ ವಾಸವಿದ್ದ ಸದಾಶಿವ ನಾಯ್ಕ್ ಬೆಳ್ಳಂಬೆ ಅವರಿಗೆ ಸೇರಿದ ಸುಮಾರು ೬ರಿಂದ ೭ ವರ್ಷದ ೪೦ ಅಡಕೆ ಗಿಡಗಳನ್ನು ಅರಣ್ಯ ಅಧಿಕಾರಿಗಳು ಕಡೆದು ಹಾಕಿದ್ದಾರೆ. ಇದು ಸದಾಶಿವ ನಾಯ್ಕ ಕಣ್ಣೀರಿಗೆ ಕಾರಣವಾಗಿದೆ. ಸದಾಶಿವ ಕೂಲಿ ಕೆಲಸಕ್ಕೆ ಹೋದ ಸಮಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಅಮಾನುಷವಾಗಿ ಮರ ಕಡಿದಿದ್ದಾರೆ. ಇವರು ಹತ್ತಾರು ಎಕರೆ ಜಮೀನು ಹೊಂದಿದವರಲ್ಲ. ನಿನ್ನೆ ಮೊನ್ನೆಯಿಂದ ಕೃಷಿ ಮಾಡುತ್ತಿಲ್ಲ. ಸಾಕಷ್ಟು ವರ್ಷಗಳಿಂದ ಇದೇ ಊರಿನಲ್ಲಿ ಕೃಷಿ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಅರಣ್ಯ ಇಲಾಖೆಗೆ ರೈತರ ಬಗ್ಗೆ ಕನಿಕರ ಇರಬೇಕು. ಅರಣ್ಯ ಇಲಾಖೆಯ ಈ ಕ್ರಮ ಖಂಡನೀಯ. ರೈತರ ಪರವಾಗಿ ಸದಾ ನಾವು ಇರಲಿದ್ದೇವೆ ಎಂದರು.
ಈ ಸಂದರ್ಭ ಬಿಜೆಪಿ ತಾಲೂಕಾ ಉಪಾಧ್ಯಕ್ಷ ಗಣೇಶ ಹೆಗಡೆ, ಗ್ರಾಪಂ ಮಾಜಿ ಅಧ್ಯಕ್ಷೆ ದೀಪಾ ರಾಘವೇಂದ್ರ ಸಿದ್ದಿ, ಮಾಳಕೊಪ್ಪ ಮಂಚಿಕೇರಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿನೇಶ್ ಭಟ್ಟ, ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಬಾಬಣ್ಣ ಪತ್ರಕರ್, ರಾಮಕೃಷ್ಣ ಹೆಗಡೆ, ಗ್ರಾಪಂ ಮಾಜಿ ಸದಸ್ಯ ಸೀತಾರಾಮ್ ಗೌಡ, ಭರಣಿ ಬೂತ್ ಅಧ್ಯಕ್ಷ ಗಂಗಾಧರ ನಾಯಕ್ ಸೇರಿ ಹಲವರು ಇದ್ದರು.