ಸಾರಸ್ವತ ವರಪುತ್ರ ಭೈರಪ್ಪ ನಿಧನಕ್ಕೆ ಕಂಬನಿ

KannadaprabhaNewsNetwork |  
Published : Sep 27, 2025, 12:00 AM IST
26ಎಚ್ಎಸ್ಎನ್7 : ಚನ್ನರಾಯಪಟ್ಟಣದ ಕೃಷ್ಣರಾಜೇಂದ್ರ ವೃತ್ತದಲ್ಲಿ ಡಾ.ಎಸ್.ಎಲ್.ಭೈರಪ್ಪ ಅವರಿಗೆ ನುಡಿನಮನ ಅರ್ಪಿಸಲಾಯಿತು. ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ, ಕುಸುಮಾ ಬಾಲಕೃಷ್ಣ, ಎಚ್. ಎನ್.ಲೋಕೇಶ್, ಮುಳ್ಳೆರೆ ಪ್ರಕಾಶ್ ಇತರರು ಇದ್ದರು. | Kannada Prabha

ಸಾರಾಂಶ

ಪದ್ಮಭೂಷಣ ಎಸ್.ಎಲ್. ಭೈರಪ್ಪ ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ. ಅವರು ರಚಿಸಿದ ಕಾದಂಬರಿಗಳು ಹಲವಾರು ಭಾಷೆಗಳಲ್ಲಿ, ಕೆಲವು ಕಾದಂಬರಿಗಳು ಕನ್ನಡ ಚಲನಚಿತ್ರವಾಗಿ ಹೊರಹೊಮ್ಮಿವೆ. ಇನ್ನು ಕೆಲವು ಕಾದಂಬರಿಗಳು ನಾಟಕ, ಧಾರಾವಾಹಿಗಳಲ್ಲಿ ಪ್ರಸಾರಗೊಂಡಿವೆ. ಪದ್ಮಶ್ರೀ, ಸರಸ್ವತಿ ಸಮ್ಮಾನ್ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಕ್ಕೆ ಪಾತ್ರರಾಗಿದ್ದ ಅವರು, ಸಾರಸ್ವತ ವರಪುತ್ರ ಎಂದು ಕಂಬನಿ ಮಿಡಿದರು. ಗುಜರಾತ್ ಸೇರಿದಂತೆ ಅನೇಕ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಅನುಪಮ ಸೇವೆ ಸಲ್ಲಿಸಿದ ಶ್ರೇಯಸ್ಸು ಅವರಿಗೆ ಇದೆ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ನಾಡಿನ ಹೆಸರಾಂತ ಸಾಹಿತಿ, ಸರಸ್ವತಿ ಸಮ್ಮಾನ್, ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಡಾ. ಎಸ್.ಎಲ್. ಭೈರಪ್ಪ ನಿಧನದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಚನ್ನರಾಯಪಟ್ಟಣ ಘಟಕ, ಹಾಗೂ ವಿವಿಧ ಸಂಘಸಂಸ್ಥೆಗಳು ಹಾಗೂ ಕನ್ನಡಪರ ಸಂಘಟನೆಗಳು ಮತ್ತು ಚನ್ನರಾಯಪಟ್ಟಣ ತಾಲೂಕಿನ ನಾಗರಿಕರು ಪಟ್ಟಣದ ಕೃಷ್ಣರಾಜೇಂದ್ರ ವೃತ್ತದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ನುಡಿನಮನ ಅರ್ಪಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮಾ ಬಾಲಕೃಷ್ಣ ಮಾತನಾಡಿ, ಪದ್ಮಭೂಷಣ ಎಸ್.ಎಲ್. ಭೈರಪ್ಪ ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ. ಅವರು ರಚಿಸಿದ ಕಾದಂಬರಿಗಳು ಹಲವಾರು ಭಾಷೆಗಳಲ್ಲಿ, ಕೆಲವು ಕಾದಂಬರಿಗಳು ಕನ್ನಡ ಚಲನಚಿತ್ರವಾಗಿ ಹೊರಹೊಮ್ಮಿವೆ. ಇನ್ನು ಕೆಲವು ಕಾದಂಬರಿಗಳು ನಾಟಕ, ಧಾರಾವಾಹಿಗಳಲ್ಲಿ ಪ್ರಸಾರಗೊಂಡಿವೆ. ಪದ್ಮಶ್ರೀ, ಸರಸ್ವತಿ ಸಮ್ಮಾನ್ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಕ್ಕೆ ಪಾತ್ರರಾಗಿದ್ದ ಅವರು, ಸಾರಸ್ವತ ವರಪುತ್ರ ಎಂದು ಕಂಬನಿ ಮಿಡಿದರು. ಗುಜರಾತ್ ಸೇರಿದಂತೆ ಅನೇಕ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಅನುಪಮ ಸೇವೆ ಸಲ್ಲಿಸಿದ ಶ್ರೇಯಸ್ಸು ಅವರಿಗೆ ಇದೆ ಎಂದರು.

ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಮಾತನಾಡಿ, ಕನ್ನಡ ಸಾರಸ್ವತ ಲೋಕದ ಮಹಾನ್ ದಿಗ್ಗಜ ಡಾ.ಎಸ್.ಎಲ್. ಭೈರಪ್ಪ ಅವರ ಅಕಾಲಿಕ ನಿಧನದಿಂದ ನಾವು ಒಬ್ಬ ಶ್ರೇಷ್ಠ ಚಿಂತಕ, ಸಾಹಿತಿಯನ್ನು ಕಳೆದುಕೊಂಡಿದ್ದೇವೆ. ಅವರ ಅನೇಕ ಕಾದಂಬರಿಗಳು ಬೇರೆ ಬೇರೆ ಭಾ?ಗೆ ಅನುವಾದಗೊಂಡಿವೆ. ಅವರ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಣ ಉಂಟಾಗಿದೆ. ಭಾರತೀಯ ಸಂಸ್ಕೃತಿಯ ಮಹತ್ವದ ಪ್ರತಿಪಾದಕರಾಗಿದ್ದ ಅವರು ಸತ್ಯವನ್ನು ಸಾಹಿತ್ಯದ ಮೂಲಕ ಬಿತ್ತರಿಸಿದವರು. ಗೃಹಭಂಗ, ಆವರಣ, ಅನ್ವೇ?ಣ ಹೀಗೆ ಅನೇಕ ಕಾದಂಬರಿ ಯನ್ನು ನಾಡಿಗೆ ಅರ್ಪಿಸಿದ್ದ ಡಾ.ಎಸ್.ಎಲ್.ಭೈರಪ್ಪ ಅವರು ತಮ್ಮ ಸಾಹಿತ್ಯ ಸೇವೆ ಹಾಗೂ ಕೊಡುಗೆಯ ಮೂಲಕ ಕನ್ನಡನಾಡಿನ ಜನತೆಯ ಹೃದಯ ಮಂದಿರದಲ್ಲಿ ಶಾಶ್ವತವಾದ ಸ್ಥಾನ ಪಡೆದುಕೊಂಡಿದ್ದಾರೆ ಎಂದರು.

ತಾಲೂಕು ಕಸಾಪ ಅಧ್ಯಕ್ಷ ಎಚ್.ಎನ್.ಲೋಕೇಶ್ ಮಾತನಾಡಿ ಡಾ.ಎಸ್.ಎಲ್.ಭೈರಪ್ಪ ಅವರು ವಿಶ್ವ ಸಾಹಿತ್ಯ ಭೂಪಟದಲ್ಲಿ ಕನ್ನಡದ ಹೆಗ್ಗುರುತು ಮೂಡಿಸಿದವರು. ಅಸಂಖ್ಯಾತ ಓದುಗರನ್ನು ಸೃಷ್ಟಿಸಿಕೊಂಡ ಅಪರೂಪದ ಕಾದಂಬರಿಕಾರ. ರಾಷ್ಟ್ರ ಬದ್ಧತೆ ಮತ್ತು ಕನ್ನಡ ಬದ್ಧತೆ ಅವರ ಎರಡು ಕಣ್ಣುಗಳಾಗಿದ್ದವು. ಶತಾಯುಷಿಗಳಾಗಬೇಕಿತ್ತು. ಕನ್ನಡಿಗರಿಗೆ ಕೊಟ್ಟು ಹೋದ ಕಾದಂಬರಿಗಳು ಧ್ರುವತಾರೆಯಂತೆ ಸದಾ ಮಿಂಚುತ್ತಲೇ ಇರುತ್ತವೆ. ಭೈರಪ್ಪ ಅವರ ಕೃತಿಗಳು ಕನ್ನಡ ಗಡಿಯನ್ನು ದಾಟಿ ಗುಜರಾತಿ, ಹಿಂದಿ, ಸಂಸ್ಕೃತ, ಮಲಯಾಳಂ, ತಮಿಳು, ತೆಲುಗು ಹಾಗೂ ಇಂಗ್ಲಿಷ್‌ ಭಾಷೆಗಳಿಗೂ ಅನುವಾದಗೊಂಡಿವೆ. ೨೦ಕ್ಕೂ ಹೆಚ್ಚು ಮಹತ್ವಪೂರ್ಣ ಕಾದಂಬರಿ ಬರೆದಿದ್ದಾರೆ. ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೇ, ನಾಯಿನೆರಳು, ಮತದಾನ ಕೃತಿಗಳು ಚಲನಚಿತ್ರಗಳಾದಾಗ ನೋಡಿದ್ದೆ. ನೇರ ನುಡಿ, ಸರಳ ವ್ಯಕ್ತಿತ್ವದ ಅವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಬೇಕಿತ್ತು ಎಂದರು.

ನುಡಿ ನಮನ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಚ.ನಾ.ಅಶೋಕ್ ಮಾತನಾಡಿದರು. ಸಾಹಿತಿಗಳಾದ ಬೆಳಗುಲಿ ಕೆಂಪಯ್ಯ, ಹೊನ್ನ ಶೆಟ್ಟಿಹಳ್ಳಿ ಗಿರಿರಾಜ್, ಚಂದ್ರು ಕಾಳೇನಹಳ್ಳಿ, ಮೇಟಿಕೆರೆ ಹಿರಿಯಣ್ಣ, ಪದವೀಧರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾರಾಯಣ್, ಕಾಂಗ್ರೆಸ್ ಮುಖಂಡ ಅಣತಿ ಆನಂದ್, ಕಾರ್ತಿಕ್, ಯುವರಾಜ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ನಂಬಿಹಳ್ಳಿ, ತಾಲೂಕು ಪ್ರಧಾನ ಕಾರ್ಯದರ್ಶಿ ನಾಗೇಶ್ ಹಿರಿಬಿಳ್ತಿ, ಪ್ರತಿಮಾ ಟ್ರಸ್ಟ್‌ನ ಅಧ್ಯಕ್ಷ ಉಮೇಶ್ ತೆಂಕನಹಳ್ಳಿ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಸಂಘಟನಾ ಕಾರ್ಯದರ್ಶಿ ಜಬಿವುಲ್ಲಾ ಬೇಗ್, ದಿಂಡಗೂರು ಗೋವಿಂದರಾಜು, ಮುಳ್ಕೆರೆ ಪ್ರಕಾಶ್, ಯಶೋಧ ಜೈನ್, ಪ್ರೇಮ್ ಸೇರಿದಂತೆ ಪದಾಧಿಕಾರಿಗಳು ಭಾಗಿಯಾಗಿದ್ದರು.

PREV

Recommended Stories

ಹತ್ತು ವರ್ಷವಾದ್ರೂ ನೇಕಾರರ ಮನೆಗಳಿಗಿಲ್ಲ ಮುಕ್ತಿ
ಭೀಮಾನದಿ ನೀರಿನ ಹರಿವು ಮತ್ತೆ ಏರಿಕೆ