ವಿಕೃತ ಕಾಮಿ ಅಮ್ಜದ್‌ ಪ್ರಕರಣ ಉನ್ನತಮಟ್ಟದ ತನಿಖೆ ನಡೆಸಿ

KannadaprabhaNewsNetwork |  
Published : Feb 06, 2025, 11:47 PM IST

ಸಾರಾಂಶ

ಮುಸ್ಲಿಂ ಜಿಹಾದಿ, ಕಾಮಾಂಧ, ಔಷಧಿ ಅಂಗಡಿ ಮಾಲೀಕ ಅಮ್ಜದ್ ವಿರುದ್ಧ ಉನ್ನತಮಟ್ಟದ ತನಿಖೆ ನಡೆಸಬೇಕು. ಆತನಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಶ್ರೀರಾಮ ಸೇನೆ ಜಿಲ್ಲಾ ಘಟಕದಿಂದ ನಗರದಲ್ಲಿ ಗುರುವಾರ ಸಾಂಕೇತಿಕವಾಗಿ ಪ್ರತಿಭಟಿಸಲಾಯಿತು.

- ಕಠಿಣ ಕ್ರಮ ಕೈಗೊಳ್ಳದಿದ್ದರೆ ರಾಜ್ಯವ್ಯಾಪಿ ಹೋರಾಟ: ಶ್ರೀರಾಮ ಸೇನೆ ಮಣಿ ಎಚ್ಚರಿಕೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಮುಸ್ಲಿಂ ಜಿಹಾದಿ, ಕಾಮಾಂಧ, ಔಷಧಿ ಅಂಗಡಿ ಮಾಲೀಕ ಅಮ್ಜದ್ ವಿರುದ್ಧ ಉನ್ನತಮಟ್ಟದ ತನಿಖೆ ನಡೆಸಬೇಕು. ಆತನಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಶ್ರೀರಾಮ ಸೇನೆ ಜಿಲ್ಲಾ ಘಟಕದಿಂದ ನಗರದಲ್ಲಿ ಗುರುವಾರ ಸಾಂಕೇತಿಕವಾಗಿ ಪ್ರತಿಭಟಿಸಲಾಯಿತು.

ನಗರದ ಜಿಲ್ಲಾ ಪೊಲೀಸ್ ಇಲಾಖೆ ಕಚೇರಿಗೆ ತೆರಳಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಕೆ.ಮಣಿ ಸರ್ಕಾರ ನೇತೃತ್ವದಲ್ಲಿ ಸಂಘಟನೆ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದರು.

ಮುಖಂಡ ಕೆ.ಮಣಿ ಮಾತನಾಡಿ, ಸರ್ಕಾರ, ಚನ್ನಗಿರಿಯಲ್ಲಿ ಮೆಡಿಕಲ್‌ ನಡೆಸುತ್ತಿದ್ದ ಅಮ್ಜದ್, ತನ್ನ ಔಷಧಿ ಅಂಗಡಿಗೆ ಬರುತ್ತಿದ್ದ ಹಿಂದು ಹೆಣ್ಣುಮಕ್ಕಳು, ಯುವತಿಯರು, ಎಳೆ ವಯಸ್ಸಿನ ಶಾಲಾ ಮಕ್ಕಳನ್ನು ಪುಸಲಾಯಿಸಿದ್ದಾನೆ. ಹೆದರಿಸಿ, ಮತ್ತು ಬರುವ ಮಾತ್ರೆಗಳನ್ನು ನೀಡಿ, ಬಲಾತ್ಕಾರದಿಂದ ಲೈಂಗಿಕವಾಗಿ ಅತ್ಯಾಚಾರ ಮಾಡಿ, ವೀಡಿಯೋಗಳನ್ನು ಮಾಡಿಕೊಂಡಿದ್ದಾನೆ. ತನ್ನ ಕೃತ್ಯಗಳ 100ಕ್ಕೂ ಹೆಚ್ಚು ವೀಡಿಯೋಗಳನ್ನು ಮಾಡಿ, ಮುಸ್ಲಿಮರ ವಾಟ್ಸಪ್‌ ಗ್ರೂಪ್‌ಗಳಲ್ಲಿ ಹರಿಯಬಿಟ್ಟಿದ್ದಾನೆ. ಈತನ ಹಿಂದೆ ವ್ಯವಸ್ಥಿತ ಜಾಲವೇ ಇರುವ ಶಂಕೆಯಿದ್ದು, ತಕ್ಷಣವೇ ಪ್ರಕರಣ‍ವನ್ನು ಜಿಲ್ಲಾ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಉನ್ನತಮಟ್ಟದ ತನಿಖೆ ನಡೆಸಬೇಕು. ಎಂದು ಒತ್ತಾಯಿಸಿದರು.

ಇಡೀ ನಾಗರೀಕ ಸಮಾಜ ಬೆಚ್ಚಿ ಬೀಳಿಸುವಂತಹ, ತಲೆತಗ್ಗಿಸುವಂಥ ಕೃತ್ಯವನ್ನು ಅಮ್ಜದ್‌ ಎಸಗಿದ್ದಾನೆ. ಆತನ ಹಿಂದಿನ ಜಾಲವನ್ನು ಪೊಲೀಸರು ತನಿಖೆ ನಡೆಸಿ, ಆರೋಪಿ ಸೇರಿದಂತೆ ಈ ಜಾಲದ ಹಿಂದಿನ ಎಲ್ಲರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ತ್ವರಿತ ನ್ಯಾಯಾಲಯದಲ್ಲಿ ಜಿಹಾದಿ ಕಾಮಾಂಧನ ವಿರುದ್ಧದ ವಿಚಾರಣೆ ನಡೆಸಬೇಕು. ಈತನ ಹಿಂದಿರುವ ಸಂಘಟನೆ, ವ್ಯಕ್ತಿಗಳನ್ನು ತನಿಖೆ ಮಾಡಿ, ಬಂಧಿಸಬೇಕು. ಶೋಷಣೆಗೆ ಒಳಗಾದವರಿಗೆ ಪರಿಹಾರ, ರಕ್ಷಣೆ, ವೈದ್ಯಕೀಯ ನೆರವು, ಭದ್ರತೆ ಕಲ್ಪಿಸಬೇಕು. ಆಪ್ತ ಸಮಾಲೋಚನೆ ನಡೆಸಿ, ಮುಕ್ತವಾಗಿ ದೂರು ಕಲ್ಪಿಸಬೇಕು ಎಂದರು.

ಸಂಘಟನೆ ಮುಖಂಡರಾದ ಅನಿಲ್ ಸುರ್ವೆ, ಸಾಗರ್‌, ರಾಹುಲ್ ಬೊಮ್ಮ, ಶ್ರೀಧರ, ರಾಜು ದೊಡ್ಮನಿ, ಪರಶರಾಮ, ರಘು, ಶಿವರಾಜ ಪೂಜಾರಿ, ಅವಿನಾಶ, ಅಜಯ್ ಇತರರು ಇದ್ದರು.

- - -

ಕೋಟ್‌ ಬೇರೆ ಜಿಲ್ಲೆಗಳಲ್ಲೂ ಅಮ್ಜದ್‌ನಂಥ ಜಿಹಾದಿ ಕಾಮಾಂಧರ ಜಾಲ ಸಕ್ರಿಯವಾಗಿರುವ ಸಾಧ್ಯತೆ ಇದೆ. ಎಲ್ಲ ಜಿಲ್ಲೆಗಳಲ್ಲೂ ವಿಶೇಷ ಮಹಿಳಾ ಪೊಲೀಸ್ ಅಧಿಕಾರಿಗಳನ್ನು ನೇಮಿಸಿ, ತನಿಖೆ ಮಾಡಬೇಕು. ಲವ್ ಜಿಹಾದ್‌, ವೇಶ್ಯಾವಾಟಿಕೆ, ಬೇರೆ ದೇಶಗಳಿಗೆ ಹೆಣ್ಣುಮಕ್ಕಳ ಸಾಗಣೆ, ಮಾರಾಟ ಮಾಡಿರುವ ಸಂಶಯವಿದ್ದು, ಇದರ ಬಗ್ಗೆಯೂ ತನಿಖೆ ಮಾಡಬೇಕು- ಮಣಿ, ಶ್ರೀರಾಮ ಸೇನೆ

- - - (-ಫೋಟೋ ಇದೆ.)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ