ಸ್ಮಾರ್ಟ್‌ ಕಲಿಕೆ ಅವಶ್ಯ: ಹಿರಿಯ ವಿಜ್ಞಾನಿ ಶಿವಪ್ರಸಾದ

KannadaprabhaNewsNetwork |  
Published : Feb 06, 2025, 11:47 PM IST
5454 | Kannada Prabha

ಸಾರಾಂಶ

ಜಗತ್ತಿನಲ್ಲಿ ಎಂಜನಿಯರಿಂಗ್‌ನಲ್ಲಿ ಅತ್ಯಂತ ವೇಗದ ಬದಲಾವಣೆಯ ಗಾಳಿ ಬೀಸುತ್ತಿದೆ, ಕೃತಕ ಬುದ್ಧಿವಂತಿಕೆಯಿಂದ ಚಾಲಕ ರಹಿತ ಕಾರು, ಕ್ಯಾಶಿಯರ್‌ಗಳೇ ಇಲ್ಲದ ಬ್ಯಾಂಕ್‌ಗಳು, ಮಷಿನ್‌ ಆಧರಿಸಿದ ರೋಗಪತ್ತೆ ತಂತ್ರಜ್ಞಾನ, ಹೀಗೆ ಹತ್ತು ಹಲವು ವೈಜ್ಞಾನಿಕ ಬದಲಾವಣೆಗಳು ಕಂಡು ಬರುತ್ತಿವೆ.

ಹುಬ್ಬಳ್ಳಿ:

ವಿದ್ಯಾರ್ಥಿಗಳಲ್ಲಿ ಉನ್ನತ ವಿಚಾರ ತುಂಬುವ ಜತೆಗೆ ಸ್ಮಾರ್ಟ್‌ ಕಲಿಕೆ ಅಗತ್ಯವಾಗಿದೆ ಎಂದು ಐಐಟಿಯ ಹಿರಿಯ ವಿಜ್ಞಾನಿ ಪ್ರೊ.ಎಸ್.‌ಎಂ.‌ ಶಿವಪ್ರಸಾದ ಅಭಿಪ್ರಾಯಪಟ್ಟರು.

ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ವತಿಯಿಂದ ಕುಸುಗಲ್‌ನ ಸರ್ಕಾರಿ ಪ್ರೌಢಶಾಲೆಯ ಸಭಾಭವನದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಗುಣಾತ್ಮಕ ಫಲಿತಾಂಶ ಸುಧಾರಣೆಗಾಗಿ ಆಯೋಜಿಸಿದ್ದ ಯಶೋವಿಶ್ವಾಸ-2025 ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.

ಕಲಿತವರು, ಪ್ರಕೃತಿ ಹಾಗೂ ಇತಿಹಾಸ ಅರಿತು ಕಲಿಯಬೇಕು, ಸಂಶೋಧನೆಗಳು ಪ್ರಕೃತಿಯ ಮಾರ್ಗರ್ಶನವೇ ಆಗಿವೆ. ಇಡೀ ಜಗತ್ತಿನಲ್ಲಿ ಎಂಜನಿಯರಿಂಗ್‌ನಲ್ಲಿ ಅತ್ಯಂತ ವೇಗದ ಬದಲಾವಣೆಯ ಗಾಳಿ ಬೀಸುತ್ತಿದೆ, ಕೃತಕ ಬುದ್ಧಿವಂತಿಕೆಯಿಂದ ಚಾಲಕ ರಹಿತ ಕಾರು, ಕ್ಯಾಶಿಯರ್‌ಗಳೇ ಇಲ್ಲದ ಬ್ಯಾಂಕ್‌ಗಳು, ಮಷಿನ್‌ ಆಧರಿಸಿದ ರೋಗಪತ್ತೆ ತಂತ್ರಜ್ಞಾನ, ಹೀಗೆ ಹತ್ತು ಹಲವು ವೈಜ್ಞಾನಿಕ ಬದಲಾವಣೆಗಳು ಕಂಡು ಬರುತ್ತಿವೆ. ನ್ಯಾನೋ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸಹಿತ ಮಾನವನಿಗೆ ನವೀನ ಜಗತ್ತನ್ನು ತೆರೆದಿಡುತ್ತಿವೆ. ವಿದ್ಯಾರ್ಥಿಗಳಲ್ಲಿ ಉನ್ನತ ವಿಚಾರಗಳು ತುಂಬಬೇಕು. ಈ ಕೆಲಸವನ್ನು ಶಿಕ್ಷಕರು ಈಗಿನಿಂದಲೇ ಮಾಡಬೇಕು. ಇದು ಸ್ಮಾರ್ಟ್‌ ಕಲಿಕೆಗೆ ನಾಂದಿಯಾಗುತ್ತದೆ ಎಂದರು.

ಪ್ರಭಾರ ಬಿಇಒ ಎಸ್.ಎಸ್. ಶಿವಳ್ಳಿಮಠ ಮಾತನಾಡಿ, ಗುಣಾತ್ಮಕ ಫಲಿತಾಂಶ ನಿಮ್ಮದಾದರೆ, ನಿಮ್ಮ ಬಾಳು ಬೆಳಕಾಗುತ್ತದೆರೆಂದು ಹೇಳಿದರು.

ಮುಖ್ಯೋಪಾಧ್ಯಾಪಕಿ ಶಿವಲೀಲಾ ಕಳಸಣ್ಣವರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕಲಿಯುವ ಮನಸ್ಸು ಸಿದ್ಧಗೊಳಿಸುವಲ್ಲಿ ಇಂತಹ ಕಾರ್ಯಾಗಾರಗಳು ಮಹತ್ವದ ಪಾತ್ರವಹಿಸುತ್ತವೆ, ಸಂಪನ್ಮೂಲ ವ್ಯಕ್ತಿಗಳಿಂದ ಉತ್ತಮ ಅಂಶಗಳನ್ನು ತಿಳಿದುಕೊಳ್ಳಬೇಕು ಎಂದರು. ವಿಜ್ಞಾನ ಸಂವಹನಕಾರ ಸಂಜೀವಕುಮಾರ ಭೂಶೆಟ್ಟಿ ವಿಜ್ಞಾನ ವಿಷಯದ ಕುರಿತು ಮಾರ್ಗದರ್ಶನ ಮಾಡಿದರು.

ಕಾರ್ಯಕ್ರಮದಲ್ಲಿ ಭಾನುಮತಿ ಆಡಗಲ್ಲ, ಗುರುನಾಥ ಬರದೇಲಿ, ಐ.ಎಂ. ಇಳಕಲ್ಲ, ಅಮೀರಾಬಾನು ದಲಾಲ, ಪ್ರೀತಿ ಫರ್ನಾಂಡಿಸ್‌, ಪ್ರಭಾಕರ ಪತ್ತಾರ, ಸುಮಾ ಉಪಸ್ಥಿತರಿದ್ದರು. ಸುರೇಶ ನಾಯ್ಕ ವಂದಿಸಿದರು, ಲೋಕೇಶ ಡಿ., ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುವಾದಕರು ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ:ಎಸ್.ಜಿ.ಎಸ್‌
9.5 ಲಕ್ಷ ಲಂಚ ಪಡೆದ ಕೇಂದ್ರ ವಿದ್ಯುತ್‌ಸಂಸ್ಥೆ ಜಂಟಿ ನಿರ್ದೇಶಕ ಸಿಬಿಐ ಬಲೆಗೆ