ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಯ ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ 2024-25 ನೇ ಸಾಲಿನ ಶೈಕ್ಷಣಿಕ ವರ್ಷದ 6 ರಿಂದ 10ನೇ ತರಗತಿಗಳ ವಿದ್ಯಾರ್ಥಿಗಳ ಮೊದಲನೇ ಪೋಷಕರ ಸಭೆ ಹಾಗೂ ವಿದ್ಯಾರ್ಥಿಗಳಿಗೆ ವೃತ್ತಿ ಯೋಜನೆ ತರಬೇತಿ ನೀಡಲು ‘ವೃತ್ತಿ ಮಾರ್ಗದರ್ಶನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಈ ಸಂದರ್ಭ 2023-24 ನೇ ಸಾಲಿನಲ್ಲಿ ಒಂಬತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಖುಶಿ ಕೆ. ಎಂ. ಇವರ ಪೋಷಕರು ‘ವೃತ್ತಿ ಮಾರ್ಗದರ್ಶನ’ ಕ್ಕೆ ಚಾಲನೆ ನೀಡಿದರು.ಶಾಲಾ ದೈಹಿಕ ಶಿಕ್ಷಕಿ ಶ್ಯಾಮಿಲಿ ಇವರು ವೃತ್ತಿ ತರಬೇತಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಹಾಗೆಯೇ ಗಣಕಯಂತ್ರ ಶಿಕ್ಷಕಿ ಸುಶ್ಮಿತಾ ಇವರು 2023-24ನೇಯ ಹಾಗೂ ಪ್ರಸಕ್ತ ಸಾಲಿನಲ್ಲಿ ಇದುವರೆಗೂ ಶಾಲೆಯಲ್ಲಿ ನಡೆಸಿದ ಶೈಕ್ಷಣಿಕ ಚಟುವಟಿಕೆಗಳ ವಿಡಿಯೋ ತುಣುಕನ್ನು ಪೋಷಕರಿಗೆ ತೋರಿಸಿ ತಮ್ಮ ಮಕ್ಕಳ ಉತ್ತಮ ಬೆಳವಣಿಗೆಯ ಬಗ್ಗೆ ತಿಳಿದುಕೊಳ್ಳಲು ಸಹಕರಿಸಿದರು.