ಮಂಡ್ಯ ತಾಲೂಕಿನ ದುದ್ದ ಹೋಬಳಿಯ ಮಾದೇಗೌಡನಕೊಪ್ಪಲು ಗ್ರಾಮದ ಪ್ರಾಥಮಿಕ ಕೃಷಿಕ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ಮುಂದೂಡುವಂತೆ ಚುನಾವಣಾಧಿಕಾರಿಗೆ ನಿರ್ದೇಶಕರು ಮತ್ತು ಬೆಂಬಲಿಗರು ತರಾಟೆ ಘಟನೆ ನಡೆಯಿತು.
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ದುದ್ದ ಹೋಬಳಿಯ ಮಾದೇಗೌಡನಕೊಪ್ಪಲು ಗ್ರಾಮದ ಪ್ರಾಥಮಿಕ ಕೃಷಿಕ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ಮುಂದೂಡುವಂತೆ ಚುನಾವಣಾಧಿಕಾರಿಗೆ ನಿರ್ದೇಶಕರು ಮತ್ತು ಬೆಂಬಲಿಗರು ತರಾಟೆ ಘಟನೆ ನಡೆಯಿತು.
ಈ ಹಿನ್ನೆಲೆಯಲ್ಲಿ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯನ್ನು ಹಲವು ಗೊಂದಲಗಳಿಂದ ಮುಂದೂಡಲಾಯಿತು. ಚುನಾವಣಾ ಆರಂಭಕ್ಕೆ ಮೊದಲೇ ನಾಲ್ಕು ನಿರ್ದೇಶಕರು, ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಕುರಿತು ನಮಗೆ ಯಾವುದೇ ಮಾಹಿತಿ ನೀಡದೆ ಚುನಾವಣಾ ಅಧಿಕಾರಿಗಳು ಏಕ ಪಕ್ಷಿಯವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಚುನಾವಣಾಧಿಕಾರಿ ರವಿಕುಮಾರ್ ಅವರು ಚುನಾವಣೆ ಮುಂದೂಡುವಂತೆ ನಾಲ್ವರು ನಿರ್ದೇಶಕರು ಮತ್ತು ಅವರ ಬೆಂಬಲಿಗರು ಒತ್ತಾಯಿಸಿದರು. ಗೊಂದಲದ ನಡುವೆ ಇವರು ಇಬ್ಬರು ನಿರ್ದೇಶಕರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಅಧಿಕಾರಿಗಳು ನಾಮಪತ್ರ ಪರಿಶೀಲನೆವೇಳೆ ಮಾಹಿತಿ ಅಪೂರ್ಣವಾಗಿದೆ ಎಂದು ಎರಡು ನಾಮಪತ್ರಗಳನ್ನು ತಿರಸ್ಕರಿಸಿದರು.
ಇದರಿಂದ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಗ್ರಾಮದ ಸೊಸೈಟಿಗೆ ಚಿಕ್ಕಕೊಪ್ಪಲು, ಮಾದೇಗೌಡನ ಕೊಪ್ಪಲು, ಮಾರಚಾಕನಹಳ್ಳಿ ಅವ್ವೇರಹಳ್ಳಿ, ಪುಟ್ಟುಕೊಪ್ಪಲು, ಮಾರದೇವನಹಳ್ಳಿ ಗ್ರಾಮಗಳ ಒಟ್ಟು 390 ಮಂದಿ ಸದಸ್ಯರಿದ್ದು, ಕಳೆದ ಏ.14ರಂದು ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದು 11 ಮಂದಿ ಆಯ್ಕೆಯಾದರು.
ಏ.24ರಂದು ಎಲ್ಲಾ ನಿರ್ದೇಶಕರು ಒಗ್ಗೂಡಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಲು ಸಹಕಾರ ಸಂಘಗಳ ಇಲಾಖೆಗೆ ಮಾಹಿತಿ ನೀಡಿದ್ದರು. ಚುನಾವಣೆ ದಿನಾಂಕ ನಿಗಧಿ ಪಡಿಸಿ ಎಲ್ಲಾ ನಿರ್ದೇಶಕರಿಗೆ ಸಭಾ ನೋಟಿಸ್ ನೀಡಲು ಸೂಚಿಸಿದ್ದರೂ 11 ಮಂದಿ ನಿರ್ದೇಶಕರ ಪೈಕಿ ನಾಲ್ವರಿಗೆ ನೋಟಿಸ್ ನೀಡದೆ ಚುನಾವಣೆ ನಡೆಸುತ್ತಿರುವುದನ್ನು ಖಂಡಿಸಿದರು.
ನಾಲ್ವರು ನಿರ್ದೇಶಕರಿಗೆ ಬೆಳಗ್ಗೆ ಸಭಾ ನೋಟಿಸ್ ನೀಡಿ ಚುನಾವಣೆ ನಡೆಸಲು ಮುಂದಾದರು. ಈ ನಡುವೆ ಚುನಾವಣೆ ಅಧಿಕಾರಿಗಳಿಗೂ ಮತ್ತು ನೋಟಿಸ್ ತಲುಪದ ನಿರ್ದೇಶಕರಿಗೂ ಮಾತಿನ ಚಕಮಕಿ ನಡೆದು ಸಹಕಾರಿ ಬೈಲಾ ಪ್ರಕಾರ ಚುನಾವಣೆ ನಡೆಸಿ ಎಂದು ಘೋಷಣೆಗಳನ್ನು ಕೂಗಿದರು. ಪೊಲೀಸ್ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಗದ್ದಲವನ್ನು ಶಾಂತಿಗೆ ತಂದರು.
ಅಧ್ಯಕ್ಷ ಸ್ಥಾನಕ್ಕೆ ಸಿ.ತಮ್ಮೇಗೌಡ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಶಿವಕುಮಾರ್ ನಾಮಪತ್ರ ಸಲ್ಲಿಸಿದರು. ನಾಪಪತ್ರ ಪರಿಶೀಲನೆ ನಡೆಸಿದಾಗ ಕ್ರಮಬದ್ದವಿಲ್ಲದ ಕಾರಣ ನಾಮಪತ್ರ ತಿರಸ್ಕಾರಗೊಂಡಿವೆ ಎಂದು ಘೋಷಿಸಿ ಚುಣಾವಣೆ ಮುಂದೂಡಿದರು.
ಈ ವೇಳೆ ನಿರ್ದೇಶಕ ಶಿವರಾಂ ಮತ್ತು ಬೆಂಗಲಿಗರು ಹಾಗೂ ಗ್ರಾಮಸ್ಥರು ಸಂಭ್ರಮ ವ್ಯಕ್ತಪಡಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಶಿವಳ್ಳಿ ಪೊಲೀಸ್‌ಠಾಣೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮೊಕ್ಕಂ ಹೂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.