ಕನ್ನಡಪ್ರಭ ವಾರ್ತೆ ಮಳವಳ್ಳಿ
ಸಿದ್ದಾರ್ಥನಗರದ ಎಂ.ಡಿ.ಸಂತೋಷ್, ಪೇಟೆ ಮುಸ್ಲಿಂ ಬ್ಲಾಕ್‌ನ ಐಯೂಬ್ ಪಾಷ, ವಡ್ಡರಕಾಲೋನಿ ಎಂ.ಆನಂದ್ ಕುಮಾರ್, ಮಾರೇಹಳ್ಳಿ ಬಸವರಾಜು ಹಾಗೂ ಪೇಟೆ ಸಣ್ಣಮಲ್ಲೇಗೌಡ ಬೀದಿ ಎಚ್.ಬಸವರಾಜು ಅವರನ್ನು ಪುರಸಭೆಗೆ ನಾಮನಿರ್ದೇಶನ ಮಾಡಿ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ್ ಆದೇಶ ಹೊರಡಿಸಿದ್ದಾರೆ.
ಐವರು ನಾಮನಿರ್ದೇಶನ ಸದಸ್ಯರಿಂದ ತಾಲೂಕಿನ ಪೂರಿಗಾಲಿ ಗ್ರಾಮದಲ್ಲಿ ಅಭಿನಂದನೆ ಸ್ವೀಕರಿಸಿದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ನಿಮ್ಮ ನಿಮ್ಮ ವಾರ್ಡ್ ಗಳಲ್ಲಿ ಜನರ ಸಮಸ್ಯೆಗಳಿಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಸಲಹೆ ನೀಡಿದರು.ನೂತನ ಸದಸ್ಯ ಎಚ್.ಬಸವರಾಜು ಮಾತನಾಡಿ, ನಮ್ಮ ಸೇವೆಯನ್ನು ಗುರುತಿಸಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಪುರಸಭೆಗೆ ನಾಮನಿರ್ದೇಶನ ಮಾಡಿಸಿದ್ದಾರೆ. ಪಟ್ಟಣದಲ್ಲಿ ಕಾಂಗ್ರೆಸ್ ನನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು. ವಾರ್ಡ್ ಗಳಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ಮಂಡ್ಯ: ನಗರದ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನ.22 ರಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಜಿಲ್ಲಾ ಪ್ಯಾರಾ ಒಲಂಪಿಕ್ಸ್ ಅಸೋಸಿಯೇಷನ್ ಆಫ್ ಮಂಡ್ಯ ಹಾಗೂ ಜಿಲ್ಲೆಯ ಎಂಆರ್‌ಡಬ್ಲ್ಯೂ. ವಿಆರ್‌ಡಬ್ಲ್ಯೂ. ಯೂಆರ್‌ಡಬ್ಲ್ಯೂ ಒಕ್ಕೂಟ ಆಶ್ರಯದಲ್ಲಿ 2024-25ನೇ ಸಾಲಿನ ಜಿಲ್ಲಾ ಮಟ್ಟದ ವಿಕಲಚೇತನರ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ.ನಾಳೆ ಹಲವೆಡೆ ವಿದ್ಯುತ್ ವ್ಯತ್ಯಯ
ಶ್ರೀರಂಗಪಟ್ಟಣ:
ಕೆಆರ್‌ಎಸ್ ಪೊಲೀಸ್ ಠಾಣಾ ವ್ಯಾಪ್ತಿಯ ಮಜ್ಜಿಗೆಪುರ ರಸ್ತೆ, ಕೆಆರ್‌ಎಸ್ ಗ್ರಾಮದ 17 ವರ್ಷದ ಬಾಲಕಿಯನ್ನು ಕೆಆರ್‌ಎಸ್ ಪಕ್ಕದ ಗ್ರಾಮ ಹೊಸಉಂಡವಾಡಿ ಗ್ರಾಮದ ಯುವಕನೊಂದಿಗೆ ನ.21ರ ಗುರುವಾರ ಮದುವೆ ನಿಶ್ವಯವಾಗಿ ವಿವಾಹ ಆಹ್ವಾನ ಪತ್ರಿಕೆ ಸಹ ಮುದ್ರಿಸಲಾಗಿತ್ತು.