ಟೀಂ ಮೈಸೂರು ತಂಡದಿಂದ ಪ್ರತಿಭಾ ಪುರಸ್ಕಾರ

KannadaprabhaNewsNetwork |  
Published : May 25, 2025, 01:34 AM IST
44 | Kannada Prabha

ಸಾರಾಂಶ

ವಿದ್ಯಾರ್ಥಿಗಳ ಸಾಧನೆಯ ಹಿಂದೆ ಶಿಕ್ಷಕರು ಹಾಗೂ ಪೋಷಕರ ಶ್ರಮವೂ ಇರುತ್ತದೆ. ಅವರನ್ನು ಮರೆಯಬಾರದು

ಕನ್ನಡಪ್ರಭ ವಾರ್ತೆ ಮೈಸೂರುನಗರದ ಟೀಂ ಮೈಸೂರು ತಂಡವು 2024- 25ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ. 85ಕ್ಕೂ ಹೆಚ್ಚು ಅಂಕಪಡೆದ ತೇರ್ಗಡೆಯಾದ 42 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಆಯೋಜಿಸಿತ್ತು.ಇಟ್ಟಿಗೆಗೂಡಿನ ಮಾರಿಯಮ್ಮನ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿಯ 27 ಹಾಗೂ ಪಿಯುಸಿಯ 15 ವಿದ್ಯಾರ್ಥಿಗಳಿಗೆ ಶಾಸಕ ಟಿ.ಎಸ್‌. ಶ್ರೀವತ್ಸ, ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್‌. ನಾಗರಾಜ್‌ ಹಾಗೂ ಸೇಫ್ ವ್ಹೀಲ್ಸ್ ಪ್ರಶಾಂತ್ ಹಾಗೂ ದಿ ಮೈಸೂರು ಮರ್ಚಂಟ್ಸ್ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಬಿ. ಕೋದಂಡರಾಮು ಮತ್ತು ಇತರೆ ಗಣ್ಯರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.ಪ್ರಾಸ್ತಾವಿಕ ನುಡಿಗಳನ್ನಾಡಿದ ಟೀಂ ಮೈಸೂರು ತಂಡದ ಗೋಕುಲ್ ಗೋವರ್ಧನ್, ತಮ್ಮ ತಂಡ ಹಸಿರು ಮೈಸೂರು ಅಭಿಯಾನದಡಿಯಲ್ಲಿ ಗಿಡಗಳನ್ನು ನೆಟ್ಟು ಬೆಳೆಸುತ್ತಿರುವ ಪರಿಸರ ಕಾಳಜಿ ಬಗ್ಗೆ ತಿಳಿಸಿದರು‌.ದೇಶಭಕ್ತರ ಜಯಂತಿಗಳನ್ನು, ಯೋಧರ ಸ್ಮರಣೆ, ಹೀಗೆ ಉಪಯುಕ್ತ ಕಾರ್ಯಕ್ರಮಗಳ ಮೂಲಕ ಜನರಲ್ಲಿ ದೇಶಭಕ್ತಿ ಮೂಡಿಸುತ್ತಿರುವುದಾಗಿ ತಮ್ಮ ತಂಡ ಶ್ರಮಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.ಶಾಸಕ ಟಿ.ಎಸ್‌. ಶ್ರೀವತ್ಸ ಮಾತನಾಡಿ, ಪ್ರತಿಭೆಗೆ ಮನ್ನಣೆ ನೀಡುವ ಇಂತಹ ವಿಶಿಷ್ಟ ಸೇವಾ ಕಾರ್ಯವನ್ನು ಮತ್ತು ನಿಸ್ವಾರ್ಥ ಸಾಮಾಜಿಕ ಸೇವೆಯನ್ನು ಸಲ್ಲಿಸುತ್ತಿರುವ ಟೀಂ ಮೈಸೂರು ತಂಡದ ಕಾರ್ಯವೈಖರಿ ಬಗ್ಗೆ ಸಂತಸ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್. ನಾಗರಾಜ್ ಮಾತನಾಡಿ, ಪತ್ರಿಭೆ ಎಲ್ಲರಲ್ಲೂ ಇರುತ್ತದೆ. ಅದನ್ನು ಗುರುತಿಸಿಪ್ರೋತ್ಸಾಹ ನೀಡುವುದು ಮುಖ್ಯ ಎಂದು ತಿಳಿಸಿದರು.ವಿದ್ಯಾರ್ಥಿಗಳ ಸಾಧನೆಯ ಹಿಂದೆ ಶಿಕ್ಷಕರು ಹಾಗೂ ಪೋಷಕರ ಶ್ರಮವೂ ಇರುತ್ತದೆ. ಅವರನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.ಅಂಕಗಳಿಗಿಂತ ನಿಮ್ಮ ವ್ಯಕ್ತಿತ್ವ ಮುಖ್ಯ, ಆತ್ಮವಿಶ್ವಾಸ ಪ್ರಧಾನವಾದುದು. ಪ್ರತಿಭೆ ಎಲ್ಲರಲ್ಲಿಯೂ ಅಡಗಿರುತ್ತದೆ, ಅದನ್ನು ಸರಿಯಾಗಿ ಸದ್ಬಳಕೆಮಾಡಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ. ಅಂಕಗಳಿಗಿಂತ ಜ್ಞಾನ ಮುಖ್ಯವಾದುದು, ನಿಮ್ಮ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಿ ಅಪಮಾನಿಸಬೇಡಿ ಎಂದು ಪೋಷಕರಿಗೆ ತಿಳಿಸಿದರು.ಟೀಂ ಮೈಸೂರು ತಂಡದ ಈ ಪ್ರತಿಭಾ ಕಾರ್ಯಕ್ರಮವನ್ನು ಶ್ಲಾಘಿಸುವುದರೊಂದಿಗೆ ಮುಂದಿನ ದಿನಗಳಲ್ಲಿ ಪರೀಕ್ಷೆಗೆ ಕೆಲವೇ ತಿಂಗಳು ಉಳಿದಿರುವ ಸಂದರ್ಭದಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಬೋಧನೆ ನೀಡುವ ಕಾರ್ಯಕ್ರಮವನ್ನು ಆಯೋಜಿಸಬೇಕು. ಅದಕ್ಕೆ ಬೇಕಾದ ಸಹಕಾರವನ್ನು ತಾವು ನೀಡುವುದಾಗಿ ತಿಳಿಸಿದರು.ಕಾರ್ಯಕ್ರಮದಲ್ಲಿ ಕಿರಣ್ ಜೈ ರಾಮೇಗೌಡ, ಹಿರಿಯಣ್ಣ, ಅನಿಲ್ ಜೈನ್, ಮುರಳಿ, ರಾಮಪ್ರಸಾದ್, ದಾಮೋದರ್, ಮನೋಹರ, ಹರೀಶ್ ಶೆಟ್ಟಿ, ಸುನಿಲ್, ಗಣೇಶ್, ಪ್ರಸನ್ನ ರಾಜ್ ಗುರು, ನವೀನ್ ಶೆಟ್ಟಿ, ಸಿ.ಎಸ್‌. ರಾಘವೇಂದ್ರ, ಸಚಿನ್, ಕೃಷ್ಣ, ನವೀನ್, ಹರೀಶ್ ಎಲೆಕ್ಟ್ರಿಕಲ್, ತಿಲಕ್, ಮನೋಜ್, ಸಹನಾ, ಶಾಂತಕುಮಾರಿ, ಗೌರವ್ ಸುಧಾ ಮುರಳಿ, ಮಂಜುಳಾ, ಉಮಾ ಹಿರಿಯಣ್ಣ, ಜ್ಯೋತಿ ರಾಮಪ್ರಸಾದ್, ಪೂಜಾಶ್ರೀ, ಸುಕೃತಾ ಇದ್ದರು.ಟೀಂ ಮೈಸೂರು ತಂಡದ ಸದಸ್ಯ ಹರೀಶ್ ವಿ. ಶೆಟ್ಟಿ ಸ್ವಾಗತಿಸಿದರು. ಹೇಮಂತ್ ಕುಮಾರ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!