ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ವಿಭಾಗೀಯ ರಾಜ್ಯ ಮತ್ತು ಕೇಂದ್ರ ಸರ್ಕಾರಿ, ಅರೆ ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳ ಪ.ಜಾತಿ, ವರ್ಗದ ಅಧಿಕಾರಿಗಳ, ನೌಕರರ ಪರಿಷತ್, ಕರ್ನಾಟಕ ದಲಿತ ವೆಲ್ಫೇರ್ ಟ್ರಸ್ಟ್ ವತಿಯಿಂದ ಶನಿವಾರ ರಾಮಕೃಷ್ಣನಗರದ ದಿಗಂತ ಭವನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಈ ಸಂಸ್ಥೆಗಳ ಸಂಸ್ಥಾಪಕ ಪ್ರದಾನ ಕಾರ್ಯದರ್ಶಿ ಚಿಕ್ಕಂದಾನಿ ಅವರನ್ನು 75ನೇ ಜನ್ಮದಿನ ಹಾಗೂ ಹರಿಹರ ಆನಂದಸ್ವಾಮಿ ಅವರನ್ನು ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪಡೆದಿದ್ದಕ್ಕಾಗಿ ಅಭಿನಂದಿಸಿ ಅವರು ಮಾತನಾಡಿದರು
ಅಂಬೇಡ್ಕರ್ ಅವರ ಆಶಯಗಳು ಏನಿತ್ತು? ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾದರೆ ಪ್ರತಿಯೊಬ್ಬರೂ ಅವರ ಕೃತಿಗಳನ್ನು ಹೆಚ್ಚೆಚ್ಚು ಓದಬೇಕು ಎಂದು ಸಲಹೆ ಮಾಡಿದರು.ಹೋರಾಟಗಳಿಗೆ ವಿಶ್ವಾಸಾರ್ಹತೆಯ ಕೊರತೆ
ಜಾತಿ ದೌರ್ಜನ್ಯಗಳು ಹೆಚ್ಚಿರುವ ಪ್ರಸ್ತುತ ಸಂದರ್ಭದಲ್ಲಿ ಹೋರಾಟದ ಸ್ವರೂಪ ಬದಲಿಸಬೇಕಾದ ಅಗತ್ಯತೆ ಇದೆ. ಅಂಬೇಡ್ಕರ್ ಅವರಂತೆ ಮಾನವೀಯ ಸ್ವಾತಂತ್ರ್ಯಕ್ಕೆ ಹೆಚ್ಚಿನ ಒತ್ತು ಕೊಡಬೇಕಾಗಿದೆ ಎಂದು ಅವರು ಹೇಳಿದರು.
ಪರ್ಯಾಯ ಆಗಲಿಲ್ಲ
ಮತ್ತೊರ್ವ ಸನ್ಮಾನಿತ ಚಿಕ್ಕಂದಾನಿ ಮಾತನಾಡಿ, ಅಂಬೇಡ್ಕರ್ ಅವರ ಆಶಯಗಳಂತೆ ದಲಿತ ವರ್ಗದ ನೌಕರರಿಗೆ ಸಂವಿಧಾನಬದ್ಧವಾದ ಹಕ್ಕುಗಳನ್ನು ಕೊಡಿಸುವುದಕ್ಕಾಗಿ ಶ್ರಮ ಮತ್ತು ಶಿಸ್ತುನಿಂದ ಹೋರಾಟ ಮಾಡಿದ್ದರಿಂದ ಸಂಘಟನೆ ಈ ಸಾಧನೆ ಮಾಡಲು ಕಾರಣವಾಯಿತು ಎಂದರು.
ಪುರುಷೋತ್ತಮ್ ಬುದ್ಧವಂದನೆ ಮೂಲಕ ಪ್ರಾರ್ಥಿಸಿದರು. ಡಾ.ಎಂ. ನಾಗರಾಜು ಸ್ವಾಗತಿಸಿದರು. ಪರಿಷತ್ ಅಧ್ಯಕ್ಷ ಡಾ.ಟಿ.ಎಂ. ಮಹೇಶ್ ಪ್ರಾಸ್ತಾವಿಕ ಭಾಷಣ ಮಾಡಿದರು. ಸನ್ಮಾನಿತರನ್ನು ಡಿ.ಟಿ. ಸಿದ್ದಸ್ವಾಮಿ, ನಂಜುಂಡಸ್ವಾಮಿ ಪರಿಚಯಿಸಿದರು. ಶಿವಸ್ವಾಮಿ ವಂದಿಸಿದರು. ಸುರೇಂದ್ರಕುಮಾರ್ ಕಾರ್ಯಕ್ರಮ ನಿರೂಪಿಸಿದರು.