ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಶಾ ಫೌಂಡೇಶನ್ ಆಯೋಜಿದ ಶಿವರಾತ್ರಿ ಅದೊಂದು ಕಾರ್ಯಕ್ರಮ, ಅದಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಆಹ್ವಾನಿಸಲಾಗಿತ್ತು, ಅಲ್ಲಿ ಅವರು ಬಿಜೆಪಿ ನಾಯಕ ಅಮಿತ್ ಶಾ ಜೊತೆ ಮಾತನಾಡಿದ್ದಾರೆ. ಆದರೆ ಅದು ಧಾರ್ಮಿಕ ಕಾರ್ಯಕ್ರಮಕ್ಕಷ್ಟೇ ಸೀಮಿತ ಎಂಬುದು ನಮ್ಮ ಭಾವನೆ ಎಂದರು. ''''ಕುಂಭಮೇಳದಲ್ಲಿ ಮುಳುಗಿದರೆ ಹೊಟ್ಟೆ ತುಂಬುತ್ತಾ'''' ಎಂದು ಖರ್ಗೆ ಕೇಳಿದ್ದರು, ಆದರೆ, ಜನ ಸಾವಿರ ಹೇಳಲಿ ನಾನು ತೀರ್ಥ ಸ್ನಾನ ಮಾಡುತ್ತೇನೆ ಎಂದು ಶಿವಕುಮಾರ್ ತೋರಿಸಿದ್ದಾರೆ, ರಾಜಕಾರಣದಲ್ಲಿ ಒಳ್ಳೆಯ ಗಾಳಿ ಬೀಸುತ್ತಿದೆ ಎಂದರು.
ಮಹಾಭಾರತದಲ್ಲಿ ಶ್ರೀ ಕೃಷ್ಣ ಕೂಡ ನ್ಯಾಯಕ್ಕಾಗಿ ಭೀಷ್ಮನನ್ನು ನಡುರಾತ್ರಿಯಲ್ಲಿ ಹೋಗಿ ಬೇಟಿಯಾಗಿದ್ದನಂತೆ, ಇವತ್ತಿಗೂ ಆ ಪರಂಪರೆ ಊರ್ಜಿತದಲ್ಲಿ ಇದೆ, ರಾಜಕಾರಣದಲ್ಲಿ ಅಂತಹ ಚಟುವಟಿಕೆಗಳು ನಡೆಯುತ್ತಾ ಇರುತ್ತವೆ, ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು, ಇಲ್ಲಿ ಯಾರು ಕೂಡ ಶಾಶ್ವತ ಶತ್ರುಗಳು ಅಥವಾ ಮಿತ್ರರು ಇಲ್ಲ.ದೊಡ್ಡವರು ಏನು ತೀರ್ಮಾನ ಮಾಡುತ್ತಾರೆ ಅನ್ನೋದು ನಮಗೆ ಗೊತ್ತಿಲ್ಲ ಎಂದವರು ಹೇಳಿದರು.