ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ವಿಧಾನಪರಿಷತ್ತಿಗೆ ಇತ್ತೀಚಿಗೆ ಆಯ್ಕೆಗೊಂಡ ಗಾಯತ್ರಿ ಶಾಂತೇಗೌಡ ಅವರನ್ನು ಜಿಲ್ಲಾ ಕಾಂಗ್ರಸ್ ಕಚೇರಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ನಿಂದ ಗುರುವಾರ ಅಭಿನಂದಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಧಾನ ಪರಿಷತ್ತು ಸದಸ್ಯೆ ಗಾಯತ್ರಿ ಶಾಂತೇಗೌಡರು, ಸಂಘಟನೆ ಮೂಲಕ ತಳಮಟ್ಟದಿಂದಲೇ ಪಕ್ಷವನ್ನು ಬಲಪಡಿಸಿ ಸಾರ್ವಜನಿಕ ಪರವಾಗಿ ಉತ್ತಮ ಕೆಲಸಗಳನ್ನು ಅಂದಿನಿಂದ ಇಂದಿನ ವರೆಗೂ ಮಾಡಿಕೊಂಡು ಬಂದಿದ್ದೇನೆ ಎಂದರು.ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ನಿಕಟಪೂರ್ವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಜಕಾರಣದಲ್ಲಿ ತಮ್ಮ ನಾಯಕರೊಂದಿಗೆ ನಡೆದುಕೊಳ್ಳುವ ಉತ್ತಮ ನಡವಳಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ನಾಡಿನ ಭವಿಷ್ಯವನ್ನು ಉಜ್ವಲಗೊಳಿಸುವ ದೂರದೃಷ್ಟಿ ಹೊಂದಿರುವ ನಿಜವಾದ ಧೀಮಂತ ನಾಯಕರು ಎಂದು ಶ್ಲಾಘಿಸಿದರು.ಶಾಸಕ ಎಚ್.ಡಿತಮ್ಮಯ್ಯ ಮಾತನಾಡಿ ಚಿಕ್ಕಮಗಳೂರಿನ ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯೆ ಎ.ವಿ.ಗಾಯಿತ್ರಿ ಶಾಂತೇಗೌಡ ಅವರಿಗೆ ಅಭಿನಂದಿಸಿದರು. ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ ಮಂಜೇಗೌಡ ಮಾತನಾಡಿ, ಗಾಯಿತ್ರಿ ಶಾಂತೇಗೌಡ ಅವರು, ಕಾಂಗ್ರೆಸ್ ಪಕ್ಷದ ದೊಡ್ಡ ಶಕ್ತಿಯಾದ ಅವರನ್ನುಮುಂದಿನ ದಿನಗಳಲ್ಲಿ ಬರುವ ಚುನಾವಣೆಗಳಲ್ಲಿ ಸಲಹೆ ಸಹಕಾರವನ್ನು ಪಡೆದು ಒಗ್ಗಟ್ಟಿನಿಂದ ಶ್ರಮಿಸಿ ಕಾಂಗ್ರಸ್ ಪಕ್ಷವನ್ನು ಅಧಿಕಾರಕ್ಕೆ ತರಲಾಗುವುದು ಎಂದರು.
ಚಿಕ್ಕಮಗಳೂರು ಶಾಸಕ ಎಚ್.ಡಿ. ತಮ್ಮಯ್ಯ ಕಾಂಗ್ರೆಸ್ ಹಿರಿಯ ಮುಖಂಡ ಡಾ.ವಿಜಯ್ ಕುಮಾರ್, ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಸಿಡಿಎ ಅಧ್ಯಕ್ಷ ಮಂಜೇಗೌಡ ಸೇರಿದಂತೆ ವಿವಿಧ ಮುಖಂಡರು ಕಾರ್ಯಕರ್ತರು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಾ. ವಿಜಯ್‌ಕುಮಾರ್, ನಗರಾಧ್ಯಕ್ಷ ತನೋಜ್ ನಾಯ್ಡು, ಮಾಜಿ ಸಿಡಿಎ ಅಧ್ಯಕ್ಷ ನಯಾಜ್ ಅಹ್ಮದ್, ಗ್ರಾರಂಟಿ ಸಮಿತಿ ಅಧ್ಯಕ್ಷ ಶಿವಾನಂದ ಸ್ವಾಮಿ, ತಾ.ಗ್ಯಾರಂಟಿ ಸಮಿತಿ ಅಧ್ಯಕ್ಷ ಮಲ್ಲೇಶ್ ಸ್ವಾಮಿ, ಮುಖಂಡರಾದ ಮೊಹಮ್ಮದ್, ಅತಿಕ್, ರಮೇಶ್, ಕಾಂಗ್ರೆಸ್ ಜಿಲ್ಲಾ ವಕ್ತಾರ ರೂಬೆನ್ ಮೋಸಸ್, ಜಿಲ್ಲಾ ಕಿಸಾನ್ ಸೆಲ್ ಅಧ್ಯಕ್ಷ ಸಿ.ಎನ್.ಅಕ್ಮಲ್, ಉಪಾಧ್ಯಕ್ಷ ಕೆಂಗೇಗೌಡ, ಒಬಿಸಿ ಅಧ್ಯಕ್ಷ ಜಯರಾಜ್ ಅರಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್, ಹಿರೇಗೌಜ ಶಿವಕುಮಾರ್, ನಗರಸಭೆ ಸದಸ್ಯರಾದ ಶಾದಾಬ್, ಪ್ರವೀಣ್ ಬೆಟ್ಟಗೆರೆ, ಹಿರೇಮಗಳೂರು ರಾಮಚಂದ್ರ ಉಪಸ್ಥಿತರಿದ್ದರು.----ಬಾಕ್ಸ್---
ಡಿಸೆಂಬರ್ ಒಳಗಾಗಿ ಗ್ರಾಪಂ, ತಾಪಂ, ಜಿಪಂ ಮೂರು ಚುನಾವಣೆ ದಿನಾಂಕ ಪ್ರಕಟಿಸಲಾಗುತ್ತದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಇನ್ನೂ ಮತದಾರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) 270 ಬೂತ್‌ಗಳನ್ನು ಸ್ಥಾಪಿಸಲಾಗಿದೆ. ಪ್ರತಿಯೊಂದು ಮತದಾರರ ಮತಗಳು ಅಮೂಲ್ಯ. ಎಸ್‌ಐಆರ್ ಮತದಾರರು ಮತದಾರರ ಪಟ್ಟಿಯಿಂದ ಕೈ ಬಿಡದಂತೆ ನೋಡಿಕೊಳ್ಳುವ ಜವಾಬ್ದಾರಿ ಬೂತ್ ಅಧ್ಯಕ್ಷರು ಸೇರಿದಂತೆ ಪ್ರಮುಖ ಮುಖ್ಯಸ್ಥರ ಜವಾಬ್ದಾರಿ ಎಂದರು.
(ತಮ್ಮಯ್ಯ ಫೋಟೋ ಬಳಸಿ)