ನೆಲಮಂಗಲ: ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಕೇವಲ 7 ದಿನದಲ್ಲೇ ಪೂರ್ಣಗೊಳಿಸಿದ್ದ ಐವರು ಶಿಕ್ಷಕರನ್ನು ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಅಭಿನಂದಿಸಿದರು.
ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಇತ್ತೀಚೆಗೆ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದಿಂದ ಸೆ.22ರಿಂದ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತಮಗೆ ವಹಿಸಿದ ಮನೆಗಳನ್ನು ಕೇವಲ 7 ದಿನದಲ್ಲೇ ಪೂರ್ಣಗೊಳಿಸಿದ್ದ ತಾಲೂಕಿನ ಐವರು ಶಿಕ್ಷಕರನ್ನು ಅಭಿನಂದಿಸಿ ಅವರು ಮಾತನಾಡಿದರು.ತಾಲೂಕಿನ ಅಯ್ಯನತೋಟದ ಎ.ಗೋಪಾಲ 95 ಮನೆ, ಕುಲುವೆಕೆಂಪಲಿಂಗನಹಳ್ಳಿಯ ಆರ್.ಗೌರಮ್ಮ 85 ಮನೆ, ನಗರದ ಪೇಟೆಬೀದಿ ರುದ್ರೇಗೌಡ 85 ಮನೆ, ವಾದಕುಂಟೆ ಹೊನ್ನಗಂಗಯ್ಯ 79 ಮನೆ ಹಾಗೂ ವಿಶ್ವೇಶ್ವರಪುರದ ಹರೀಶ್ 79 ಮನೆಗಳ ಸಮೀಕ್ಷೆಯನ್ನು ಇನ್ನು 15 ದಿನಗಳ ಅವಧಿಗೂ ಮುನ್ನ ಕೇವಲ 7 ದಿನದಲ್ಲಿ ಅಷ್ಟೂ ಮನೆಗಳ ಮಾಹಿತಿ ಸಂಗ್ರಹಿಸಿ ಸಮೀಕ್ಷೆ ಪೂರ್ಣಗೊಳಿಸಿದ್ದಾರೆ.
ಜಿಲ್ಲೆಯಲ್ಲಿ ತಾಲೂಕು ಮೊದಲ ಸ್ಥಾನ:ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತಾಲೂಕಾದ್ಯಂತ 747 ಮಂದಿ ಗಣತಿದಾದರು ಹಾಗೂ 38 ಮಂದಿ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ನೆಲಮಂಗಲ ತಾಲೂಕಿನ 86176 ಮನೆಗಳನ್ನು ಸಮೀಕ್ಷೆ ಮಾಡಲು ಗುರಿ ನೀಡಿದ್ದು ಕೇಲವ 7 ದಿನದಲ್ಲೇ 24296 ಮನೆಗಳನ್ನು ಸಮೀಕ್ಷೆ ಮಾಡಲಾಗಿದೆ. ಅ.7ರವರೆಗೂ ಸಮೀಕ್ಷೆ ಮಾಡಲು ಕೊನೆಯ ದಿನವಾಗಿದ್ದು ಶೀಘ್ರ ಪೂರ್ಣಗೊಳಿಸುವ ನಿರೀಕ್ಷೆ ಇದೆ. ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳ ಪೈಕಿ ನೆಲಮಂಗಲ ತಾಲೂಕು ಸಮೀಕ್ಷೆಯಲ್ಲಿ ಮೊದಲನೇ ಸ್ಥಾನದಲ್ಲಿದೆ ಎಂದು ತಹಸೀಲ್ದಾರ್ ಮಲ್ಲೇಶ್‌ಬೀರಪ್ಪ ಪೂಜಾರ್ ತಿಳಿಸಿದರು. ಈ ಸಂದರ್ಭದಲ್ಲಿ ಬಿಇಒ ಕೆ.ಸಿ.ರಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಾಸುದೇವಮೂರ್ತಿ, ಹಿಂದುಳಿದ ವರ್ಗಗಳ ಇಲಾಖೆ ಸಹಾಯಕ ನಿರ್ದೇಶಕಿ ಶಾಂತಾಬಾಯಿ, ವಿಸ್ತರಣಾಧಿಕಾರಿ ನರಸಿಂಹಮೂರ್ತಿ ಉಪಸ್ಥಿತರಿದ್ದರು.
ಪೊಟೊ-29 ಕೆಎನ್‌ಎಲ್‌ಎಮ್2-ನೆಲಮಂಗಲ ತಾಲೂಕು ಕಚೇರಿಯಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ 7 ದಿನಗಳಲ್ಲಿಯೇ ತಮಗೆ ವಹಿಸಿರುವ ಕರ್ತವ್ಯವನ್ನು ಪೂರ್ಣಗೊಳಿಸಿರುವ ಐವರು ಶಿಕ್ಷಕರನ್ನು ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಅಭಿನಂದಿಸಿದರು.