ಸ್ಕಾಲರ್ಸ್ ಶಾಲೆ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ

KannadaprabhaNewsNetwork |  
Published : May 06, 2026, 02:00 AM IST
 ಐ.ಸಿ.ಎಸ್.ಇ ವಿಭಾಗದ ಎಸ್.ಎಸ್.ಎಲ್.ಸಿ ಪರೀಕ್ಷೆಗಳಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿರುವ ಶಾಲೆಯು, ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಹಾಗೂ ಅವರ ಸಾಧನೆಗೆ ಬೆನ್ನೆಲುಬಾದ ಪೋಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. | Kannada Prabha

ಸಾರಾಂಶ

ತಮ್ಮ ಯಶಸ್ಸಿಗೆ ಕಾರಣರಾದ ಪೋಷಕರನ್ನು ವಿದ್ಯಾರ್ಥಿಗಳೇ ಸ್ವತಃ ಸನ್ಮಾನಿಸಿದ ಕ್ಷಣ. ಈ ವೇಳೆ ಅನೇಕ ಪೋಷಕರ ಕಣ್ಣಲ್ಲಿ ಸಂತಸದ ಕಣ್ಣೀರು ಮಿನುಗಿದ್ದು, ತಮ್ಮ ಮಕ್ಕಳಿಗಾಗಿ ಪಟ್ಟ ಪರಿಶ್ರಮ ಫಲಿಸಿದ ತೃಪ್ತಿ ಸ್ಪಷ್ಟವಾಗಿ ಗೋಚರಿಸಿತು. ನಾವು ಆಯ್ಕೆ ಮಾಡಿದ ಶಾಲೆಯೇ ನಮ್ಮ ಕನಸನ್ನು ನನಸು ಮಾಡಿದೆ ಎಂಬ ಭಾವನೆ ಪೋಷಕರ ಮಾತುಗಳಲ್ಲಿ ಪ್ರತಿಧ್ವನಿಸಿತು. ಈ ವರ್ಷದ ಫಲಿತಾಂಶದಲ್ಲಿ 97% ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದ ಜನ್ಯ ವೈ.ಬಿ. ಅವರ ಪೋಷಕರು ಮಾತನಾಡಿ, ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರುವುದಕ್ಕಿಂತ ಅವರಿಗೆ ಮುಕ್ತ ಹಾಗೂ ಪ್ರೋತ್ಸಾಹದ ವಾತಾವರಣ ಒದಗಿಸಬೇಕು ಎಂದು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಸ್ಕಾಲರ್ಸ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ವಿದ್ಯಾರ್ಥಿಗಳ ಸಾಧನೆಗೆ ಪೋಷಕರನ್ನು ಸನ್ಮಾನಿಸಿದ ವಿಶೇಷ ಕಾರ್ಯಕ್ರಮ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು.

ಐ.ಸಿ.ಎಸ್.ಇ ವಿಭಾಗದ ಎಸ್.ಎಸ್.ಎಲ್.ಸಿ ಪರೀಕ್ಷೆಗಳಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿರುವ ಶಾಲೆಯು, ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಹಾಗೂ ಅವರ ಸಾಧನೆಗೆ ಬೆನ್ನೆಲುಬಾದ ಪೋಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದ ವಿಶೇಷತೆ ಎಂದರೆ, ತಮ್ಮ ಯಶಸ್ಸಿಗೆ ಕಾರಣರಾದ ಪೋಷಕರನ್ನು ವಿದ್ಯಾರ್ಥಿಗಳೇ ಸ್ವತಃ ಸನ್ಮಾನಿಸಿದ ಕ್ಷಣ. ಈ ವೇಳೆ ಅನೇಕ ಪೋಷಕರ ಕಣ್ಣಲ್ಲಿ ಸಂತಸದ ಕಣ್ಣೀರು ಮಿನುಗಿದ್ದು, ತಮ್ಮ ಮಕ್ಕಳಿಗಾಗಿ ಪಟ್ಟ ಪರಿಶ್ರಮ ಫಲಿಸಿದ ತೃಪ್ತಿ ಸ್ಪಷ್ಟವಾಗಿ ಗೋಚರಿಸಿತು. ನಾವು ಆಯ್ಕೆ ಮಾಡಿದ ಶಾಲೆಯೇ ನಮ್ಮ ಕನಸನ್ನು ನನಸು ಮಾಡಿದೆ ಎಂಬ ಭಾವನೆ ಪೋಷಕರ ಮಾತುಗಳಲ್ಲಿ ಪ್ರತಿಧ್ವನಿಸಿತು. ಈ ವರ್ಷದ ಫಲಿತಾಂಶದಲ್ಲಿ 97% ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದ ಜನ್ಯ ವೈ.ಬಿ. ಅವರ ಪೋಷಕರು ಮಾತನಾಡಿ, ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರುವುದಕ್ಕಿಂತ ಅವರಿಗೆ ಮುಕ್ತ ಹಾಗೂ ಪ್ರೋತ್ಸಾಹದ ವಾತಾವರಣ ಒದಗಿಸಬೇಕು ಎಂದು ಸಲಹೆ ನೀಡಿದರು.

96% ಅಂಕಗಳಿಸಿದ ಡೀವಿತ್ ಡೇವಿಡ್ ಅವರ ಪೋಷಕರು, ಉತ್ತಮ ಫಲಿತಾಂಶಕ್ಕೆ ಶಾಲೆಯ ಆಡಳಿತಾಧಿಕಾರಿಗಳಾದ ಡಾ. ಎಚ್. ಎನ್. ಚಂದ್ರಶೇಖರ್ ಹಾಗೂ ಶಿಕ್ಷಕ ವೃಂದದ ಸಮರ್ಪಿತ ಸೇವೆಯನ್ನು ಪ್ರಶಂಸಿಸಿದರು. ಇನ್ನೋರ್ವ ಪ್ರತಿಭಾವಂತ ವಿದ್ಯಾರ್ಥಿನಿ ತನ್ವಿಕಾ (96%) ಅವರ ಪೋಷಕರು ಮಾತನಾಡಿ, ಕಳೆದ 13 ವರ್ಷಗಳ ಶಾಲೆ-ಪೋಷಕರ ಸಂಯುಕ್ತ ಶ್ರಮಕ್ಕೆ ಇಂದು ಸಾರ್ಥಕತೆ ದೊರೆತಿದ್ದು, ಈ ಸಂಸ್ಥೆಯೊಂದಿಗೆ ಇರುವ ಬಾಂಧವ್ಯಕ್ಕೆ ನಾವು ಸದಾ ಋಣಿಗಳಾಗಿರುತ್ತೇವೆ ಎಂದು ಕೃತಜ್ಞತೆಯನ್ನು ವ್ಯಕ್ತಪಡಿಸಿದರು.ಶಾಲೆಯ ಆಡಳಿತಾಧಿಕಾರಿಗಳಾದ ಡಾ. ಎಚ್.ಎನ್. ಚಂದ್ರಶೇಖರ್ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿ, ಇದು ನಿಮ್ಮ ಸಾಧನೆಯ ಮೊದಲ ಮೆಟ್ಟಿಲು ಮಾತ್ರ. ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರಗಳನ್ನು ತಲುಪಿ ಜೀವನದಲ್ಲಿ ದೊಡ್ಡ ಸಾಧನೆಗಳನ್ನು ಮಾಡಬೇಕು ಎಂದು ಹಾರೈಸಿದರು.ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆ ಸಂಸ್ಥಾಪಕರಾದ ಲಕ್ಷ್ಮೀ ನಾಗರಾಜು, ಕಾರ್ಯದರ್ಶಿ ಮಮತಾ ಚಂದ್ರಶೇಖರ್‌, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ-ಶಿರಸಿ ರಸ್ತೆ ದುರಸ್ತಿಗೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ
ಬಿಎಸ್‌ವೈ ಅಭಿಮಾನೋತ್ಸವಕ್ಕೆ ಹುಬ್ಬಳ್ಳಿಯಿಂದ ಸಾವಿರಾರು ಜನ