ಜಾತ್ರಾ ಯಶಸ್ವಿಗೆ ಶ್ರಮಿಸಿದವರಿಗೆ ಅಭಿನಂದನೆಗಳು

KannadaprabhaNewsNetwork |  
Published : Jul 16, 2025, 12:45 AM IST
ಶಾಸಕ ಹಾಗೂ ಜಾತ್ರಾ ಕಮಿಟಿಯ ಅಧ್ಯಕ್ಷ ರಮೇಶ ಜಾರಕಿಹೊಳಿ ಅವರನ್ನು ನಗರಸಭೆಯಿಂದ ಸತ್ಕರಿಸುತ್ತಿರುವುದು. | Kannada Prabha

ಸಾರಾಂಶ

ಗ್ರಾಮ ದೇವತೆಯರ ಜಾತ್ರಾ ಮಹೋತ್ಸವವು ಅತ್ಯಂತ ವಿಜೃಂಭಣೆ ಹಾಗೂ ಶಾಂತಿಯುತವಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಶಾಸಕ ಹಾಗೂ ಜಾತ್ರಾ ಕಮಿಟಿ ಅಧ್ಯಕ್ಷ ರಮೇಶ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಗ್ರಾಮ ದೇವತೆಯರ ಜಾತ್ರಾ ಮಹೋತ್ಸವವು ಅತ್ಯಂತ ವಿಜೃಂಭಣೆ ಹಾಗೂ ಶಾಂತಿಯುತವಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಶಾಸಕ ಹಾಗೂ ಜಾತ್ರಾ ಕಮಿಟಿ ಅಧ್ಯಕ್ಷ ರಮೇಶ ಜಾರಕಿಹೊಳಿ ಹೇಳಿದರು.

ನಗರದ ತಮ್ಮ ಕಾರ್ಯಾಲಯದಲ್ಲಿ ಮಂಗಳವಾರ ನಗರಸಭೆ ಸದಸ್ಯರು ಮತ್ತು ಅಧಿಕಾರಿಗಳಿಂದ ಜಾತ್ರೆ ಮಹೋತ್ಸವವು ಯಶಸ್ವಿಯಾದ ಹಿನ್ನೆಲೆ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಜಾತ್ರೆಯ ಯಶಸ್ಸಿನ ಹಿಂದೆ ಜಾತ್ರಾ ಕಮಿಟಿ ನಗರಸಭೆ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರ ಸಹಕಾರ ಮಹತ್ವದ ಪಾತ್ರ ವಹಿಸಿದೆ. ಜನತೆಯು ಅತ್ಯಂತ ಭಕ್ತಿಯಿಂದ ಜಾತ್ರೆಯಲ್ಲಿ ಪಾಲ್ಗೊಂಡು ಭಕ್ತಿಯ ಪರಾಕಾಷ್ಠೆ ತೋರಿದರು. ಈ ಬಾರಿಯ ಜಾತ್ರೆಯಲ್ಲಿ ಹಿಂದೆಂದಿಗೂ ಸೇರದಂತಹ ಲಕ್ಷಾಂತರ ಸಂಖ್ಯೆಯಲ್ಲಿ ಪಾಲ್ಗೊಂಡು ಅತ್ಯಂತ ಶಾಂತಿ, ಸಮ್ಯಮದಿಂದ ತಮ್ಮ ಭಕ್ತಿಯನ್ನು ತೋರಿದರು. ಇವರೆಲ್ಲರಿಗೂ ಧನ್ಯವಾದಗಳು. ಇದೇ ರೀತಿ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚೆಚ್ಚು ಪಾಲ್ಗೊಂಡು ದೇವರ ಅನುಗೃಹಕ್ಕೆ ಪಾತ್ರರಾಗುವಂತೆ ಕೋರಿದರು.ಜಾತ್ರಾ ಮಹೋತ್ಸವದಲ್ಲಿ ಜನದಟ್ಟನೆ ಹಾಗೂ ಟ್ರಾಫೀಕ್ ನಿಯಂತ್ರಣದಲ್ಲಿ ಪೊಲೀಸ್‌ ಇಲಾಖೆಯ ಪಾತ್ರ ಹಿರಿದಾಗಿದೆ. ಜಾತ್ರೆಯಲ್ಲಿ ಶಾಂತಿ ಸುವ್ಯಸ್ಥೆ ಕಲ್ಪಿಸುವಲ್ಲಿ ಪೊಲೀಸ್‌ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ರಾತ್ರಿ, ಹಗಲೆನ್ನದೇ ಕಾರ್ಯನಿರ್ವಹಿಸಿದ್ದಾರೆ. ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಜಾತ್ರಾ ಕಮಿಟಿಯ ಪರವಾಗಿ ವಿಶೇಷ ಕೃತಜ್ಞತೆಗಳು ಎಂದರು.ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಉಪಾಧ್ಯಕ್ಷೆ ಬಿಬಿಬತುಲ ಜಮಾದಾರ, ಸ್ಥಾಯಿ ಸಮಿತಿ ಚೇರಮನ್ ಶ್ರೀಶೈಲ ಯಕ್ಕುಂಡಿ, ಪೌರಾಯುಕ್ತ ರವಿ ರಂಗಸುಭೆ, ಹಿರಿಯ ಸದಸ್ಯರುಗಳಾದ ಕುತ್ಬುದ್ದಿನ್‌ ಗೋಕಾಕ, ಅಬ್ಬಾಸ್‌ ದೇಸಾಯಿ, ದುರ್ಗಪ್ಪ ಶಾಸ್ತ್ರೀಗೊಲ್ಲರ, ಬಸವರಾಜ ಆರೇನ್ನವರ ಸೇರಿದಂತೆ ನಗರಸಭೆ ಸದಸ್ಯರು ಇದ್ದರು.ಈ ಬಾರಿಯ ಜಾತ್ರೆಯಲ್ಲಿ ಹಿಂದೆಂದಿಗೂ ಸೇರದಂತಹ ಲಕ್ಷಾಂತರ ಸಂಖ್ಯೆಯಲ್ಲಿ ಪಾಲ್ಗೊಂಡು ಅತ್ಯಂತ ಶಾಂತಿ, ಸಮ್ಯಮದಿಂದ ತಮ್ಮ ಭಕ್ತಿಯನ್ನು ತೋರಿದರು. ಇವರೆಲ್ಲರಿಗೂ ಧನ್ಯವಾದಗಳು. ಇದೇ ರೀತಿ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚೆಚ್ಚು ಪಾಲ್ಗೊಂಡು ದೇವರ ಅನುಗೃಹಕ್ಕೆ ಪಾತ್ರರಾಗಿ.

-ರಮೇಶ ಜಾರಕಿಹೊಳಿ, ಶಾಸಕ ಹಾಗೂ ಜಾತ್ರಾ ಕಮಿಟಿ ಅಧ್ಯಕ್ಷರು.

PREV

Recommended Stories

ದಸರಾ ವೇಳೆ ಬಾನುರಿಂದ 2023ರ ಘಟನೆ ಮರುಕಳಿಸಬಾರ್ದು : ಯದುವೀರ್‌
ಮೈಸೂರು ದಸರಾ: ಜಂಬೂಸವಾರಿ ಟಿಕೆಟ್‌ ₹3500, ಗೋಲ್ಡ್‌ಕಾರ್ಡ್ ₹6500