ಕನ್ನಡಪ್ರಭ ವಾರ್ತೆ, ತುಮಕೂರು
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ 138ನೇ ಸಂಸ್ಥಾಪನಾ ದಿನದಲ್ಲಿ ಮಾತನಾಡಿದರು.
ದೇಶದ ಪ್ರಜೆಗಳಿಗೆ ಅನ್ಯಾಯ, ತೊಂದರೆಯಾದಂತೆ ಸಂದರ್ಭದಲ್ಲಿ ಸ್ವಾತಂತ್ರ ಪೂರ್ವದಲ್ಲಾಗಿರಬಹುದು, ಇಲ್ಲವೇ ಸ್ವಾತಂತ್ರ ನಂತರದಲ್ಲಾಗಿರಬಹುದು. ಜನರ ಜೊತೆಗೆ ನಿಲ್ಲುವ ಪಕ್ಷ ಎಂದರೆ ಅದು ಕಾಂಗ್ರೆಸ್ ಪಕ್ಷ ಎಂದರು.2002 ರಲ್ಲಿ ಪಾರ್ಲಿಮೆಂಟ್ ಮೇಲೆ ದಾಳಿಯಾದಾಗ ಅಧಿವೇಶನದಲ್ಲಿ ಮೂರು ದಿನಗಳ ಕಾಲ ಚರ್ಚೆ ನಡೆದು, ಜನತೆಗೆ ಸತ್ಯ ತಿಳಿಸುವ ಕೆಲಸವನ್ನು ಅಂದಿನ ಕಾಂಗ್ರೆಸ್ ಸರ್ಕಾರ ಮಾಡಿತ್ತು. 2023 ರಲ್ಲಿ ಪಾರ್ಲಿಮೆಂಟ್ ಮೇಲೆ ದಾಳಿಯಾಗಿರುವುದನ್ನು ಪ್ರಶ್ನಿಸಿದ 146 ಜನ ಸಂಸದರನ್ನು ಅಮಾನತ್ತು ಮಾಡಿ, ಇಡೀ ಪಾರ್ಲಿಮೆಂಟನ್ನೇ ಕತ್ತಲೆಯಲ್ಲಿ ಇಡಲಾಗಿದೆ. ಯಾವುದು ಸರಿ ಎಂಬುದನ್ನು ಜನರು ಜನತಾ ನ್ಯಾಯಾಲಯದ ತೀರ್ಪಿನಲ್ಲಿ ಪ್ರಚುರ ಪಡಿಸಬೇಕಿದೆ ಎಂದರು.
ಕೆಪಿಪಿಸಿ ವಕ್ತಾರ ನಿಕೇತ್ ರಾಜ್ ಮಾರ್ಯ ಮಾತನಾಡಿ, ಸ್ವಾತಂತ್ರಕ್ಕೂ ಮುನ್ನ 526 ಸಣ್ಣ ಸಂಸ್ಥಾನಗಳಾಗಿದ್ದ ಭಾರತವನ್ನು ಒಗ್ಗೂಡಿಸಿ, ಇಲ್ಲಿನ ಜನರನ್ನು ದಾಸ್ಯದಿಂದ ಮುಕ್ತಗೊಳಿಸುವ ಉದ್ದೇಶದಿಂದ 27 ಜನ ವಿದ್ವಾಂಸರು ಸೇರಿ ಹುಟ್ಟು ಹಾಕಿದ ಸಂಘಟನೆ ಕಾಂಗ್ರೆಸ್, ಬಿಜೆಪಿಯವರು ಹೇಳುವಂತೆ ಎ.ಓ.ಹೂಮ್ ಅವರು ಕಾಂಗ್ರೆಸ್ ಪಕ್ಷದ ಸಂಸ್ಥಾಪಕರಲ್ಲ. ಮೊದಲ ಅಧ್ಯಕ್ಷರಷ್ಟೇ. ಇದು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುವ ಬಿಜೆಪಿಯ ಭಕ್ತರ ತೋಳಿನ ಮೇಲಿರುವ ಚುಚ್ಚು ಮದ್ದಿನ ಗುರುತೇ ಹೇಳುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ, ಇಂದು ಎಐಸಿಸಿ ವತಿಯಿಂದ ಮಹಾರಾಷ್ಟ್ರದ ನಾಗಪುರದಲ್ಲಿ ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನವನ್ನು ಆಚರಿಸಲಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಎಂದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಿಂದು ಧರ್ಮದಲ್ಲಿನ ಅನಿಷ್ಠಗಳಿಂದ ಬೇಸತ್ತು ಬೌದ್ಧ ಧರ್ಮ ಸ್ವೀಕರಿಸಿದ್ದು ನಾಗಪುರದಲ್ಲಿ, ಹಾಗೆಯೇ ಇಂದಿನ ಅನಿಷ್ಠಗಳಿಗೆ ಕಾರಣವಾಗಿರುವ ಆರ್‌ಎಸ್ಎಸ್ ಕಚೇರಿ ಇರುವುದು ನಾಗಪುರದಲ್ಲಿದೆ. ಧರ್ಮ, ಜಾತಿಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿರುವ ಬಿಜೆಪಿಯನ್ನು ತೊಲಗಿಸುವ ಕೆಲಸ ಅರಂಭವಾಗಿದೆ. ಇದೇ ಒಗ್ಗಟ್ಟನ್ನು ನಾವು ಮುಂದಿನ ದಿನಗಳಲ್ಲಿಯೂ ಕಾಪಾಡಿಕೊಂಡು ಹೊಗುವ ಮೂಲಕ ಪಕ್ಷವನ್ನು ಬಲಗೊಳಿಸಬೇಕಿದೆ ಎಂದರು.
ದೇಶದ ಜನರನ್ನು ಬ್ರಿಟಿಷರ ದಾಸ್ಯದಿಂದ ಬಿಡುಗಡೆ ಮಾಡುವ ಸಲುವಾಗಿ ಹುಟ್ಟಿಕೊಂಡ ಕಾಂಗ್ರೆಸ್ ಪಕ್ಷಕ್ಕೂ, ದೇಶದ ಅಲ್ಪಸಂಖ್ಯಾತರು, ಬಡವರು, ದೀನದಲಿತರನ್ನು ಅಧಿಕಾರದಿಂದ ದೂರ ಇಡಬೇಕೆಂಬ ಮನಸ್ಥಿತಿಯ ಬಿಜೆಪಿ ಪಕ್ಷಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ದಲಿತರು, ದಮನಿತರ ಹಕ್ಕುಗಳನ್ನು ಮೋದಿ ಸರ್ಕಾರ ಕಸಿಯುತ್ತಿದೆ. ಬಿಜೆಪಿ ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಮಾಡಿರುವ ಕೋವಿಡ್ ಸಂದರ್ಭದ ೪೦ ಸಾವಿರ ಕೋಟಿ ರು. ಅವ್ಯವಹಾರ ತನಿಖೆಯಾಗಿ, ರಾಜ್ಯದ ಜನತೆಗೆ ಸತ್ಯ ಬಹಿರಂಗವಾಗಲಿ.